ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ರಾಜ್ಯದಲ್ಲೇ ಪ್ರಸಿದ್ಧಿ ಪಡೆದಿರುವ ನಗರದ ಮಾರಿಕಾಂಬ ಜಾತ್ರೆಗೆ ಇಂದು ವಿದ್ಯುಕ್ತವಾಗಿ ಚಾಲನೆ ನೀಡಲಾಗಿದೆ.
ಇದೇ ತಿಂಗಳ 25ರಿಂದ ಜಾತ್ರೆ ಆರಂಭವಾಗಲಿದ್ದು, ಇದಕ್ಕೆ ಪೂರ್ವಭಾವಿಯಾಗಿ ಸಾಂಪ್ರದಾಯಿಕ ಸಾರು ಹಾಕುವ ಕಾರ್ಯಕ್ಕೆ ಇಂದು ಚಾಲನೆ ನೀಡಲಾಯಿತು.
ಸಮಿತಿ ಅಧ್ಯಕ್ಷ ಎಸ್.ಕೆ. ಮರಿಯಪ್ಪ. ಕಾರ್ಯದರ್ಶಿ ಎನ್. ಮಂಜುನಾಥ್ ಅವರುಗಳು ಅಧಿಕೃತ ಚಾಲನೆ ನೀಡಿದರು.
ಹಿಂದೂ ಸಂಪ್ರದಾಯದಲ್ಲಿ ಯಾವುದೇ ಊರಿನ ಗ್ರಾಮ ದೇವತೆಯ ಜಾತ್ರೆಯಿದ್ದಾಗ ನಗರದ ಗಡಿಯಲ್ಲಿ ಸಾರು ಹಾಕಿ, ವಿಚಾರವನ್ನು ಸಾಂಪ್ರದಾಯಿಕವಾಗಿ ಡಂಗುರ ಸಾರಲಾಗುತ್ತದೆ. ಸಂಪ್ರದಾಯದಂತೆ ಒಮ್ಮೆ ಸಾರು ಹಾಕಿದ ನಂತರ ನಗರದ ಯಾವುದೇ ನಿವಾಸಿಗಳು ಹೊರ ಹೋಗುವಂತಿಲ್ಲ. ಒಂದು ವೇಳೆ ಅನಿವಾರ್ಯವಾಗಿ ಹೊರ ಊರಿಗೆ ಹೋದರೂ ಸೂರ್ಯ ಮುಳುಗುವ ವೇಳೆಗೆ ಹಿಂದಿರುಗಬೇಕು.
ಇಂದು ಆಧುನಿಕತೆಯ ಭರಾಟೆಯಲ್ಲಿ ಇವುಗಳನ್ನು ಪಾಲಿಸುವವರು ಕಡಿಮೆಯಾಗಿದ್ದರೂ ಸಂಪ್ರದಾಯದಲ್ಲಿ ಎಲ್ಲೂ ಧಕ್ಕೆ ಬಾರದಂತೆ ನಡೆಸುತ್ತಿರುವ ಜಾತ್ರಾ ಸಮಿತಿ, ಇದನ್ನು ಸಾಧ್ಯವಾದಷ್ಟು ಪಾಲಿಸುವಂತೆ ನಗರದ ನಾಗರಿಕರಲ್ಲಿ ಮನವಿ ಮಾಡಿದೆ.
Get in Touch With Us info@kalpa.news Whatsapp: 9481252093















