ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಮಾನವನ ಜೀವನದಲ್ಲಿ ಅಳವಡಿಸಿಕೊಂಡಿರುವ ಊಟ, ನಿದ್ದೆ, ಉಪಹಾರಗಳು ಎಷ್ಟು ಮುಖ್ಯವೋ ಆತನ ಬಾಳು ಬೆಳಗಲು ಉತ್ತಮ ಪುಸ್ತಕಗಳು ಸಹ ಅಷ್ಟೇ ಮುಖ್ಯ ಎಂದು ಕೊಣ್ಣನೂರಿನ ದಂತ ವೈದ್ಯ ಹಾಗೂ ವಿವೇಕ ಜಾಗೃತ ಬಳಗದ ಡಾ. ನಟರಾಜ್ ತಿಳಿಸಿದರು.
ನಗರದ ವಿವೇಕ ಜಾಗೃತ ಬಳಗವು ಹುತ್ತಾದಲ್ಲಿನ ಶ್ರೀ ಭದ್ರೇಶ್ವರ ದೇವಸ್ಥಾನದಲ್ಲಿ ಏರ್ಪಡಿಸಿದ್ದ ವಿವೇಕ ಸಂಪದ – ವಿವೇಕ ವೀಣಾ ಓದುಗರ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರತಿಯೊಂದು ಕುಟುಂಬವು ಜೀವನ ನಡೆಸಲು ಎಲ್ಲಾ ರೀತಿಯ ಐಷಾರಾಮಿ ವಸ್ತುಗಳನ್ನು ಹೊಂದಿರುವಂತೆ, ಕಡ್ಡಾಯವಾಗಿ ಪುಸ್ತಕ ಭಂಡಾರವನ್ನು ಹೊಂದುವುದು ಅವಶ್ಯಕವಾಗಿದೆ. ಮನುಷ್ಯನ ಮನಸ್ಸನ್ನು ಕೆರಳಿಸುವಂತಹ ಸಂಗತಿಗಳಿಗಿಂತ ಅರಳಿಸುವ ಸಂಗತಿಗಳ ಬಗ್ಗೆ ಹೆಚ್ಚು ಗಮನ ಕೇಂದ್ರೀಕರಿಸಿದಾಗ ಮನಸ್ಸು ಪ್ರಪುಲ್ಲವಾಗುತ್ತದೆ. ಭಗವದ್ಗೀತೆ, ವೇದ ಉಪನಿಷತ್, ರಾಮಾಯಣಾ ದಂತಹ ಭಾರತೀಯರ ಸನಾತನ ಗ್ರಂಥಗಳು ಹಾಗು ಸಂಸ್ಕ್ರತ ಭಾಷೆಯ ಹಿನ್ನಲೆಯ ಬಗ್ಗೆ ವಿದೇಶಿಯರು ವೈಜ್ಞಾನಿಕ ಮಹತ್ವ ಇದೆ ಎಂದು ಸಂಶೋಧಿಸಿ ಅವುಗಳ ಮಹತ್ವವನ್ನು ಅರಿತಿದ್ದಾರೆ. ಅದರೆ ನಮ್ಮ ದೇಶದ ಜನರೆ ಅವುಗಳ ಬಗ್ಗೆ ಮಹತ್ವದ ಬಗ್ಗೆ ಆನಾಧಾರ ತಿರಸ್ಕಾರ ಮನೋಭಾವದಿಂದ ಕಾಣುವುದು ದುರ್ದೈವದ ಸಂಗತಿಯಾಗಿದೆ ಎಂದರು.
ಸಾಮೂಹಿಕ ಶ್ರೀರಾಮ ರಕ್ಷಾ ಸ್ತೋತ್ರದೊಂದಿಗೆ ಪ್ರಾರ್ಥನೆ ನಡೆದ ಕಾರ್ಯಕ್ರಮದಲ್ಲಿ ಸತೀಶ್ ಕುಮಾರ್ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರೆ, ಲೋಕೇಶ್ ವಂದಿಸಿ, ಲೀಲಾವತಿ ನಿರೂಪಿಸಿದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Get in Touch With Us info@kalpa.news Whatsapp: 9481252093







Discussion about this post