ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನವದೆಹಲಿ: ಡೆತ್ ವಾರೆಂಟ್ ಜಾರಿಯಾಗಿರುವ ನಿರ್ಭಯಾ ಪ್ರಕರಣ ಆರೋಪಿ ವಿನಯ್ ಶರ್ಮಾ, ಜೈಲಿನ ಗೋಡೆಗೆ ತಲೆ ಹೊಡೆದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತತಕ್ಷಣ ಗಮನಿಸಿದಮ ಜೈಲು ಸಿಬ್ಬಂದಿಗಳು ಇದನ್ನು ತಡೆದಿದ್ದಾರೆ.
ಫೆ.16ರಂದು ಜೈಲಿನ ಗೋಡೆಗೆ ಜೋರಾಗಿ ತಲೆ ಹೊಡೆದುಕೊಂಡು ಅತ್ಮಹತ್ಯೆ ಮಾಡಿಕೊಳ್ಳಲು ಈತ ಯತ್ನಿಸಿದ್ದ ಎನ್ನಲಾಗಿದ್ದು, ಈ ವಿಚಾರ ಇಂದು ಬಹಿರಂಗಗೊಂಡಿದೆ.
ವಿನಯ್ ಶರ್ಮಾ ಜೈಲಿನಲ್ಲಿ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾನೆ ಎಂದು ಆತನ ವಕೀಲರು ಈ ವಾರದ ಆರಂಭದಲ್ಲಿ ಕೋರ್ಟ್‌ಗೆ ತಿಳಿಸಿದ್ದರು.
Get in Touch With Us info@kalpa.news Whatsapp: 9481252093















