ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ವಾಷಿಂಗ್ಟನ್: ಭಾರತಕ್ಕೆ ಐತಿಹಾಸಿಕ ಭೇಟಿ ನೀಡುತ್ತಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈಗ ಬಾಹುಬಲಿ ವೇಷದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದ್ದು, ಅದನ್ನು ಸ್ವತಃ ಅವರೇ ಹಂಚಿಕೊಂಡಿರುವುದು ವಿಶೇಷ.
ಹೌದು… ಬಾಹುಬಲಿ ಚಿತ್ರದ ಯುದ್ಧದ ಸನ್ನಿವೇಷವನ್ನು ಎಡಿಟ್ ಮಾಡಿ ಪ್ರಭಾಸ್ ಮುಖಕ್ಕೆ ಟ್ರಂಪ್ ಮುಖ ಜೋಡಿಸಲಾಗಿದ್ದು, ಇದನ್ನು ಟ್ವೀಟ್ ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ. ಇದನ್ನು ಸ್ವತಃ ಟ್ರಂಪ್ ಶೇರ್ ಮಾಡಿಕೊಂಡಿದ್ದು, ಭಾರತದ ಶ್ರೇಷ್ಠ ಸ್ನೇಹಿತರೊಂದಿಗೆ ಸದಾ ಇರಲು ಬಯಸುತ್ತೇನೆ. ಭಾರತ ಭೇಟಿಯ ಬಗ್ಗೆ ಭಾರೀ ಉತ್ಸುಕನಾಗಿದ್ದೇನೆ ಎಂದಿದ್ದಾರೆ.
Look so forward to being with my great friends in INDIA! https://t.co/1jdk3AW6fG
— Donald J. Trump (@realDonaldTrump) February 22, 2020
ವಿಡಿಯೋದಲ್ಲಿ ಟ್ರಂಪ್ ಪುತ್ರಿ ಇವಾಂಕಾ ಟ್ರಂಪ್ ಹಾಗೂ ಪತ್ನಿ ಮೆಲಾನಿಯಾ ಟ್ರಂಪ್ ಕೂಡ ಇರುವುದು ಕಂಡು ಬಂದಿತ್ತು. ಅಲಲದೆ, ದಾನದಲ್ಲಿ ತೊಡಗಿರುವ ಪ್ರಧಾನಿ ಮೋದಿ ಹಾಗೂ ಅವರ ಪತ್ನಿ ಜಶೋಧಾ ಬೆನ್ ಕೂಡ ಕಂಡು ಬಂದಿದ್ದಾರೆ.
ಈ ಟ್ವೀಟ್ ಭಾರೀ ಪ್ರಶಂಸೆ ವ್ಯಕ್ತವಾಗಿದ್ದು, ಲಕ್ಷಾಂತರ ಮಂದಿ ಇದನ್ನು ಹಂಚಿಕೊಂಡಿದ್ದಾರೆ.
Get in Touch With Us info@kalpa.news Whatsapp: 9481252093
Discussion about this post