No Result
View All Result
Minister Somanna Inspects & Inaugurates Road Under Bridges in Tumkur District eliminating level Crossing gates
English Articles

Minister Somanna Inspects & Inaugurates Road Under Bridges in Tumkur District eliminating level Crossing gates

by ಕಲ್ಪ ನ್ಯೂಸ್
February 26, 2026
0

Kalpa Media House  |  Bengaluru  | Union Minister of State for Railways and Jal Shakti, V. Somanna, today inaugurated three...

Read moreDetails
Le Méridien Dehradun in the Foothills of the Himalayas, Inviting Guests to Slow Down and Savour the Good Life

Le Méridien Dehradun in the Foothills of the Himalayas, Inviting Guests to Slow Down and Savour the Good Life

February 25, 2026
From Complex Revisions to Robotic Spine Care: Narayana Health City Marks 10,000 Surgery Milestone

From Complex Revisions to Robotic Spine Care: Narayana Health City Marks 10,000 Surgery Milestone

February 24, 2026
Amazon Opens Its Second Largest Office in Asia in Bengaluru

Amazon Opens Its Second Largest Office in Asia in Bengaluru

February 24, 2026
ಪೊಂಗಲ್ ಹಬ್ಬದ ಪ್ರಯುಕ್ತ ಕೊಟ್ಟಾಯಂ – ಬೆಂಗಳೂರು ಕ್ಯಾಂಟೋನ್ಮೆಂಟ್ ನಡುವೆ ವಿಶೇಷ ರೈಲು ಸಂಚಾರ

SWR Opens Makajipalli–Dharmavaram Double Line Project

February 23, 2026
  • Advertise With Us
  • Grievances
  • About Us
  • Contact Us
Thursday, February 26, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Editorial

ಸಿದ್ದರಾಮಯ್ಯನವರ ನುಡಿ ನೈತಿಕ ರಾಜಕಾರಣದ ಪಠ್ಯಕ್ಕೆ ಸೇರಲಿ

ಯಡಿಯೂರಪ್ಪ ಜನ್ಮದಿನ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಹಾಜರಿ, ರಾಜಕಾರಣದ ಸಿದ್ದಾಂತ ಮೀರಿದ ಮಾನವ ಸಂಬಂಧ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
March 7, 2020
in Editorial
0
ಸಿದ್ದರಾಮಯ್ಯನವರ ನುಡಿ ನೈತಿಕ ರಾಜಕಾರಣದ ಪಠ್ಯಕ್ಕೆ ಸೇರಲಿ

Image Courtesy: Internet

Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಮನುಷ್ಯ ಯಾವಾಗಲೂ ದ್ವೇಷಾಸೂಯೆಗಳ ಮೂಟೆಯಲ್ಲ. ಪರಿಸ್ಥಿತಿಗಳು ಆತನನ್ನು ಸಹಜ ಪ್ರೀತಿ ಸೌಹಾರ್ದ ಮರೆತು ಮನಸ್ಸಿನಲ್ಲಿ ಕೋಲಾಹಲವೆಬ್ಬಿಸುತ್ತವೆ. ಈ ಮಾತು ಹಲವು ನ್ಯಾಯ ತೀರ್ಪುಗಳ ಹಿನ್ನೆಲೆಯಲ್ಲೂ ನೋಡಿದ್ದೇವೆ. ಮನಃಶ್ಶಾಸ್ತ್ರದ ಹಿನ್ನೆಲೆಯಲ್ಲೂ ಕೇಳಿದ್ದೇವೆ.

ಜೀವಮಾನದಲ್ಲಿ ಸಿಗುವ ಅವಕಾಶವನ್ನು ಸಾರ್ಥಕವಾಗಿ ಬಳಸಿಕೊಳ್ಳುವವ ಕುಶಲಿಗ. ಏಕೆಂದರೆ ಅವಕಾಶಗಳ ಬಾಗಿಲು ಎಲ್ಲರಿಗೂ ಒಂದೊಂದು ರೀತಿಯದ್ದಾಗಿರುತ್ತದೆ. ಅದನ್ನು ಛಂಗನೆ ಹಿಡಿದು ಕೊಳ್ಳುವ ಚೈತನ್ಯ ಬೇಕಷ್ಟೆ! ಆತ್ಮವಿಶ್ವಾಸವೇ ಆ ಚೈತನ್ಯದ ಗೊಂಚಲನ್ನು ರೂಪಿಸುತ್ತದೆ. ಕೆಲವರು ಸುಲಭವಾಗಿ ಅವಕಾಶ ದಕ್ಕಿಸಿಕೊಳ್ಳುತ್ತಾರೆ. ಮತ್ತೆ ಕೆಲವರು ಹೋರಾಟ ಮಾಡಿ ಪಡೆಯುತ್ತಾರೆ. ಈಗ ಪ್ರಮುಖ ವಿಷಯಕ್ಕೆ ಪ್ರವೇಶ ಮಾಡುತ್ತೇನೆ. ಶ್ರೀ ಬಿ.ಎಸ್. ಯಡಿಯೂರಪ್ಪನವರ ಎಪ್ಪತ್ತೆಂಟನೆಯ ವರ್ಷದ ಪಾದಾರ್ಪಣೆ ಸಂದರ್ಭದ ಜನ್ಮ ದಿನಾಚರಣೆ ವರದಿ ನೋಡಿದೆ. ಮಾಧ್ಯಮಗಳು ಕೆಲವು ಒಂದು ಅಚ್ಚರಿಯನ್ನೇ ವ್ಯಕ್ತಪಡಿಸಿದವು.

ರಾಜಕೀಯ ಮರೆತು ಒಂದೇ ವೇದಿಕೆಯಲ್ಲಿ ಹಲವು ಪಕ್ಷದ ನಾಯಕರು ಉಪಸ್ಥಿತರಿದ್ದರು. ಅದರಲ್ಲಂತೂ ವಿರೋಧ ಪಕ್ಷದ ನಾಯಕ ಶ್ರೀ ಸಿದ್ಧರಾಮಯ್ಯ ಅವರ ಉಪಸ್ಥಿತಿ ಬಹಳಷ್ಟು ರೀತಿಯಲ್ಲಿ ವ್ಯಾಖ್ಯಾನಕ್ಕೆ ಕಾರಣವಾಯಿತು. ಇಲ್ಲಿ ಮಾಧ್ಯಮಗಳು ಹಾರೈಸಿದ ಒಂದು ಒಳ್ಳೆಯ ಅಭಿಪ್ರಾಯ ನಿಜಕ್ಕೂ ಪ್ರಸ್ತುತ ವರದಿಗಾರಿಕಾ ವೃತ್ತಿಯ ಪಾವಿತ್ರ್ಯವನ್ನು ಎತ್ತಿ ಹಿಡಿಯುವಂತಿತ್ತು. ಅದಕ್ಕೆ ಸಿದ್ದು ಅವರ ಮಾತುಗಳೂ ಕೂಡ ಕಿರೀಟಪ್ರಾಯ.

ರಾಜಕಾರಣ ಸಿದ್ಧಾಂತಗಳು ಬೇರೆ. ಮನುಷ್ಯ ಸಂಬಂಧಗಳು ಬೇರೆ. ಪ್ರಜೆಗಳ ಎದುರು ನಮ್ಮ ನಮ್ಮ ಪಕ್ಷಗಳ ಸಿದ್ಧಾಂತಗಳನ್ನು ಮುಂದಿಡುತ್ತೇವೆ. ಕೊನೆಗೆ ತೀರ್ಮಾನ ಕೊಡುವವರು ಪ್ರಜೆಗಳು. ರಾಜಕಾರಣ ಯಾವಾಗಲೂ ಮನುಷ್ಯ ಸಂಬಂಧಕ್ಕೆ ಅಡ್ಡಿಬರಬಾರದು. ಸಿದ್ದರಾಮಯ್ಯನವರ ಈ ನುಡಿಗಳು ಇಂದಿನ ರಾಜಕಾರಣದ ನೈತಿಕ ಪಠ್ಯಕ್ಕೆ ಸೇರಬೇಕಾದ ವಾಕ್ಯಗಳಾಗಿವೆ.

ಈ ಸಂದರ್ಭವನ್ನು ಕರ್ನಾಟಕ ಕಂಡ ರಾಜಕೀಯ ಇತಿಹಾಸದ ಒಂದು ಅಪರೂಪದ ಕ್ಷಣ ಎಂದು ಭಾವಿಸಲಾಗುತ್ತಿದೆ.

ಹೌದು !. ಪಕ್ಷ ಪಕ್ಷಗಳು ಪರಸ್ಪರ ಮಸೆಯುವ ಮನೋಭಾವವಿರುವಾಗ ನಾಯಕರ ಈ ರೀತಿಯ ನಡವಳಿಕೆಗಳು ರಾಜಕಾರಣದ ನವೀನ ಭಾಷ್ಯಗಳನ್ನೇ ದಾಖಲಿಸುತ್ತವೆ.

ಇಲ್ಲಿ ಬಿಎಸ್ ವೈ ಅವರದ್ದು ತಲಸ್ಪರ್ಶಿಯಾದ ರಾಜಕೀಯ ಪಯಣ. ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಬೆಳೆದು ಹಂತಹಂತವಾಗಿ ಪಕ್ಷವನ್ನೇ ಭದ್ರ ಮಾಡಿದ ಪ್ರಕ್ರಿಯೆ. ಪಕ್ಷಕ್ಕೆ ಮತ್ತೆ ಮರುಹುಟ್ಟು ನೀಡಿದೆ ಅವರ ಸಮಯಾವಧಾನ ರಾಜಕಾರಣ. ಕುಮಾರಣ್ಣ ಅವರಿಗೆ ಪಟ್ಟಗಟ್ಟಿದ ಅವರ ಚಾಣಾಕ್ಷತನ ಮೆಚ್ಚುವಂಥದ್ದು. ಪಕ್ಷಕ್ಕೆ ರಾಜ್ಯವ್ಯಾಪಿ ಇಮೇಜನ್ನು ತರುವಲ್ಲಿ ಅಂದಿನ ನಡೆ ಬಿಎಸ್ ವೈ ಪ್ರಯತ್ನಶೀಲತೆಗೆ ಸಾಕ್ಷಿ.

ವಿರೋಧ ಪಕ್ಷದ ನಾಯಕರಾಗಿ ಅವರಿಗೆ ರಾಜ್ಯದ ರೈತರ, ಎಲ್ಲ ಸಮುದಾಯದ ನಾಡಿಮಿಡಿತ ಬಲ್ಲವರು. ರಾಜ್ಯ ನಾಯಕತ್ವದ ಚರಿಷ್ಮಾ ಅವರಿಗಿದೆ. ಬಂದ ಒಂದೊಂದೂ ಅವಕಾಶವನ್ನ ಬಿಗಿಯಾಗಿ ಹಿಡಿಯುತ್ತಲೇ ನಡೆದವರು. ಪಕ್ಷದ ಕಾರ್ಯಕರ್ತ, ಪುರಸಭಾ ಸದಸ್ಯ, ಶಾಸಕ, ಉಪಮುಖ್ಯಮಂತ್ರಿ, ಸಂಸದ ಕೊನೆಗೆ ಮುಖ್ಯಮಂತ್ರಿ. ಈ ಪಯಣ ಅವರ ಛಲವನ್ನೇ ಅನುಸರಿಸಿದೆ. ಜೈಲಿಗೆ ಹೋಗಿಬಂದ ಕಪ್ಪು ಚುಕ್ಕೆಯನ್ನೂ ಕೂಡ ಈಗ ಜನ ಪಕ್ಕಕ್ಕೆ ಸರಿಸಿ ಅವರ ವ್ಯಕ್ತಿತ್ವ ನೋಡಿದ್ದಾರೆ. ಕೆಲವೊಮ್ಮೆ ಸಮುದಾಯ ಕೆಲವರ ಬಗ್ಗೆ ಬಹಳ ಉದಾರಿಯಾಗಿ ಬಿಡುತ್ತದೆ. ಆ ಗ್ರೇಸ್ ಮಾರ್ಕ್ಸ್‌ ಬಿಎಸ್’ವೈ ಅವರಿಗೆ ಸಿಕ್ಕಿರುವುದು ಒಂದು ಅದೃಷ್ಟವೇ ಸರಿ.ಇದು ಎಲ್ಲರಿಗೂ ಸಿಗುವುದು ಅಪರೂಪ.

ಪಕ್ಷದ ಒಳ ಬೆಳವಣಿಗೆಗಳ ಕಾರಣ ಅವರು ಬೇರೆ ಪಕ್ಷದ ಅಸ್ತಿತ್ವ ಕಂಡುಕೊಳ್ಳ ಬೇಕಾಯಿತು. ಆದರೆ ಅದೇ ಕೊನೆಯಾಗಲಿಲ್ಲ. ಮತ್ತೆ ರಾಜಿಯಾಗಿ ಮಾತೃ ಪಕ್ಷಕ್ಕೇ ಬಂದರು. ಈ ಇತಿಹಾಸವನ್ನು ಮಾತ್ರ ಹಿರಿಯ ನಾಯಕರು ಭೂತಗಣ್ಣಿನಿಂದ ನೋಡುತ್ತಿದ್ದಾರೆ. ಅದೊಂದು ಪ್ರಸ್ತುತ ವಿದ್ಯಮಾನದ ವಿಪರ್ಯಾಸ.
ಅನರ್ಹರ ಮರುಚುನಾವಣಾ ಪ್ರವೇಶ. ಅವರ ಗೆಲುವು, ರಾಜ್ಯದಲ್ಲಿ ಇನ್ನೂ ಬಿಎಸ್ ವೈ ಪ್ರಭಾವವಿದೆ ಎನ್ನುವ ಸಂದೇಶವನ್ನು ದೆಹಲಿಗೆ ಮುಟ್ಟಿಸಿದೆ. ಇಂತಹ ನಾಯಕನ ಬಗ್ಗೆ ಸಿದ್ದು ತೋರಿದ ಸ್ನೇಹ , ಪ್ರೀತಿ ಬಹಳ ದೊಡ್ಡದೇ.

ಇಲ್ಲಿ ಬಿಎಸ್ ವೈ ಅಂತಹ ಹಿರಿಯರೆದುರು ಸಿದ್ದು ತಮ್ಮ ವರ್ತನೆಯಿಂದ ಇನ್ನಷ್ಟೂ ದೊಡ್ಡತನ ಪಡೆದರು. ಪಕ್ಷವೇನೂ ಬಡವಾಗಲಿಲ್ಲ. ಬಿಜೆಪಿಯೂ ಜಂಭ ಕೊಚ್ಚಿಕೊಳ್ಳಲಿಲ್ಲ. ಆದರೆ ಕಾಂಗ್ರೆಸ್’ನ ಕೆಲವರು ಮುಖ ಕಿವುಚಿಕೊಂಡು ಸಣ್ಣವರಾದರಷ್ಟೆ. ಜನ್ಮದಿನ, ಮದುವೆ, ಇತ್ಯಾದಿಗಳು ವ್ಯಕ್ತಿಗಳ ನಡುವಿನ ಮನುಷ್ಯ ಸಂಬಂಧಗಳನ್ನು ಉಜ್ಜಿ ನೋಡುವ ಸಾಣೆಯಂತೆ. ಈ ಸಂಗತಿಯನ್ನು ಒಬ್ಬ ಮನುಷ್ಯನಾಗಿ ಮಾತಾಡಿದ ಅವರ ಅನಿಸಿಕೆಗಳನ್ನ ಸಹಮನುಷ್ಯರೇ ತೆರೆದ ಮನಸ್ಸಿನಿಂದ ಒಪ್ಪಿಕೊಳ್ಳದಿರುವುದು ದುರಂತವೇ ಸರಿ!

ಈಗ ಮತ್ತೆ ಪಕ್ಷಕ್ಕೆ ಹೊಸ ಧಿರಿಸು ತೊಡಿಸುವ ಪ್ರಮುಖ ಪ್ರಾಸಾಧನ ಕೆಲಸ ಬಿಎಸ್’ವೈ ಮಾಡಬೇಕಿದೆ. ಏಕೆಂದರೆ ಮಹದಾಯಿ ಒಲಿದು ಬಂದಿದ್ದಾಳೆ. ಉಕದ ಮಂದಿಯ ಕರುಕಲಾದ ಮನಸ್ಸಿಗೆ ಮುಲಾಮು ಸವರಿ ಪಕ್ಷದ ತೆಕ್ಕೆಗೆ ತೆಗೆದುಕೊಳ್ಳಬೆಕು. ಘನವಾದ ನೀಲನಕ್ಷೆ ಸಿದ್ಧವಾಗಲಿ ಎಂದು ಹಾರೈಸೋಣ.


Get in Touch With Us info@kalpa.news Whatsapp: 9481252093

Tags: birthdayBJPCM B S YediyurappacongressDr SudheendraEditorialKannada News WebsiteKarnataka politicsLatestNewsKannadaSiddaramaiahಕರ್ನಾಟಕ ರಾಜಕೀಯಕಾಂಗ್ರೆಸ್ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಸಿದ್ದರಾಮಯ್ಯ
Share209Tweet123Send
Previous Post

ಮುಖ್ಯಮಂತ್ರಿಗಳೇ, ಚಾಮರಾಜನಗರವೂ ನಿಮ್ಮ ಆಡಳತದ ವ್ಯಾಪ್ತಿಯಲ್ಲಿದೆ ಎಂಬುದು ನೆನಪಿದೆಯೇ?

Next Post

ಸೊರಬ ತಾಲೂಕು ಬಿಜೆಪಿ ಅಧ್ಯಕ್ಷರಾಗಿ ಗುರುಪ್ರಸಾದ್, ಜಿಲ್ಲಾ ಕಾರ್ಯದರ್ಶಿಯಾಗಿ ನಿರಂಜನ್ ಆಯ್ಕೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಸೊರಬ ತಾಲೂಕು ಬಿಜೆಪಿ ಅಧ್ಯಕ್ಷರಾಗಿ ಗುರುಪ್ರಸಾದ್, ಜಿಲ್ಲಾ ಕಾರ್ಯದರ್ಶಿಯಾಗಿ ನಿರಂಜನ್ ಆಯ್ಕೆ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ಪೊಂಗಲ್ ಹಬ್ಬದ ಪ್ರಯುಕ್ತ ಕೊಟ್ಟಾಯಂ – ಬೆಂಗಳೂರು ಕ್ಯಾಂಟೋನ್ಮೆಂಟ್ ನಡುವೆ ವಿಶೇಷ ರೈಲು ಸಂಚಾರ

ಈ ಎಲ್ಲಾ ದಿನಗಳು ಮೈಸೂರು-ಶಿವಮೊಗ್ಗ ಎಕ್ಸ್’ಪ್ರೆಸ್, ಅರಸೀಕೆರೆ ರೈಲುಗಳ ಬಿಗ್ ಅಪ್ಡೇಟ್

February 6, 2026
ಮನೆ ನಿರ್ಮಾಣ ಸಾಮಗ್ರಿ ಕಳ್ಳತನ | ಓರ್ವನ ಬಂಧನ

ಮನೆ ನಿರ್ಮಾಣ ಸಾಮಗ್ರಿ ಕಳ್ಳತನ | ಓರ್ವನ ಬಂಧನ

February 26, 2026
Minister Somanna Inspects & Inaugurates Road Under Bridges in Tumkur District eliminating level Crossing gates

Minister Somanna Inspects & Inaugurates Road Under Bridges in Tumkur District eliminating level Crossing gates

February 26, 2026
ಟಿಕೆಟ್ ಟು ಹಾಲಿವುಡ್ | ಬೆಂಗಳೂರಿನ 2026ರ ಅತಿದೊಡ್ಡ ಹೋಳಿ ಸಂಭ್ರಮದ ಟಿಕೆಟ್‌ಗಳು ಈಗ ಬುಕ್‌ಮೈಶೋನಲ್ಲಿ!

ಟಿಕೆಟ್ ಟು ಹಾಲಿವುಡ್ | ಬೆಂಗಳೂರಿನ 2026ರ ಅತಿದೊಡ್ಡ ಹೋಳಿ ಸಂಭ್ರಮದ ಟಿಕೆಟ್‌ಗಳು ಈಗ ಬುಕ್‌ಮೈಶೋನಲ್ಲಿ!

February 26, 2026
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಹತ್ಯೆ | ಅತ್ಯಂತ ಕಠಿಣ ಶಿಕ್ಷೆಗೆ ಸಂಸದ ರಾಘವೇಂದ್ರ ಆಗ್ರಹ

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಹತ್ಯೆ | ಅತ್ಯಂತ ಕಠಿಣ ಶಿಕ್ಷೆಗೆ ಸಂಸದ ರಾಘವೇಂದ್ರ ಆಗ್ರಹ

February 26, 2026
ಸುಸ್ಥಿರ ಕೃಷಿಗೆ ಜೇನು ಸಾಕಾಣೆ ಸಹಕಾರಿ: ಗೌತಮ ಬಿಚ್ಚುಗತ್ತಿ

ಸುಸ್ಥಿರ ಕೃಷಿಗೆ ಜೇನು ಸಾಕಾಣೆ ಸಹಕಾರಿ: ಗೌತಮ ಬಿಚ್ಚುಗತ್ತಿ

February 26, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL