ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಜ್ಯೋತಿರಾದಿತ್ಯ ಸಿಂಧ್ಯಾ corrupt ಅಲ್ಲ. ವಿಪರೀತ ಆಸೆ ಬುರುಕನೂ ಅಲ್ಲ. ಸಂಕೋಚ, ಈಗೊ ಜಾಸ್ತಿ ಆಗಿದ್ದುದರಿಂದ ಕಾಂಗ್ರೆಸ್ಸಿನಲ್ಲಿ ಅವಕಾಶ ಸಿಕ್ಕದೆ ಹಿಂದೆ ಬಿದ್ದರು.
ಕಾಂಗ್ರೆಸಿನ ಜಾಯಮಾನ ಹೇಗೆಂದರೆ, ಗಂಜಿಗಾಗಿ ಮಾಡಬಾರದ್ದನ್ನು ಮಾಡಬೇಕು. ಎಲ್ಲಾ ನಾಯಕರು ಈ ಜಾಯಮಾನದವರಲ್ಲ. ಆದರೆ ಕಾಂಗ್ರೆಸ್ ಪಕ್ಷದ ಅಧಿನಾಯಕರ ಗುಣ ಹೀಗೆ. ಈಗಾಗಲೇ ಇವರನ್ನು ಮುಖ್ಯ ಮಂತ್ರಿ ಮಾಡಬೇಕಿತ್ತು. ಆದರೆ ಕಳ್ಳರು ಬಿಡಲಿಲ್ಲ. ಹಿಂದೆ ತಳ್ಳಿದರು. ದೈವ ಭಕ್ತನೂ, ಹಿಂದು ಮುಂದಿನ ಸತ್ಪರಿಜ್ಞಾನ ಉಳ್ಳವರೂ ಆಗಿದ್ದಾರೆ.
ಇದೇ ಪ್ರಾಯದ ರಾಹುಲ್ ಗಾಂಧಿಗೂ ಮೇಷದಲ್ಲಿ ಶನಿ 21°ಯಲ್ಲಿರೋದು. ಅವರಿಗೂ ಹಿಂದು ಮುಂದಿನ ಪರಿಜ್ಞಾನ ಇದೆ. ಇವರ ಪರಿಜ್ಞಾನ ಹೇಗಿದೆ ಎಂದರೆ, ತಮಾಷೆ, ಆಟ, ಅಸಂಭದ್ದ ಮಾತು. ಅಂದರೆ trollಗೆ ಒಳಗಾಗುವ ಭಾಷಾ ಪರಿಜ್ಞಾನ. ಒಟ್ಟಿನಲ್ಲಿ ತಮಾಷೆಯಾಗಬೇಕು ತನ್ನ ಭಾಷಣ, ವಿದ್ವತ್ತಿನಿಂದಿರಬೇಕು ಎಂದುಕೊಂಡು ಇವನಾರವ ಎಂಬುದರ ಬದಲು ಇವನರ್ವ ಎಂದು ರಂಜಿಸಿ ನಗಿಸಬೇಕು ಎಂಬುದು.

ಜಾತಕದ ಫಲ ಪ್ರಾಪ್ತಿಯ ಕಾಲ
ಲಗ್ನಕ್ಕೆ ಏಕಾದಶ ಸ್ಥಾನದಲ್ಲಿ ನಿಪುಣ ಯೋಗವಿದ್ದು ಇದು ಉನ್ನತಾಧಿಕಾರದ ಯೋಗ. ಆ ನಿಪುಣ ಯೋಗ ಪ್ರಾಪ್ತಿಯ ಸ್ಥಾನದಲ್ಲಿ ಗುರು ಸಂಚಾರ ಮಾಡುವಾಗ ಫಲ ಪ್ರಾಪ್ತಿಯಾಗುತ್ತದೆ. ಇದು ಸರಿಯಾದ ಸಮಯವೂ, ಬಿಜೆಪಿಗೆ ಸೇರುವ ಕಾಲವೂ ಆಗಿದ್ದು, ಮುನ್ನಡೆಸುವ ಯೋಗವೂ ಇದೆ. Term complete ಮಾಡುವ ಯೋಗವೂ ಇದೆ.
Get in Touch With Us info@kalpa.news Whatsapp: 9481252093







Discussion about this post