ಚಳ್ಳಕೆರೆ: ಜಾನಪದ ಬುಡಕಟ್ಟು ಸಂಸ್ಕೃತಿಯ ತವರು ಚಿತ್ರದುರ್ಗ ಜಿಲ್ಲೆಯ ನಾಯಕನಹಟ್ಟಿ ಶ್ರೀ ತಿಪ್ಪೇರುದ್ರ ಸ್ವಾಮಿಯವರ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನೆರವೇರಿತು.
ಪ್ರತಿ ವರ್ಷದಂತೆ ಮುಕ್ತಿ ಬಾವುಟ ಹಾರಾಜು ಹಾಕಿದ ನಂತರ ದೊಡ್ಡರಥಕ್ಕೆ ಚಾಲನೆ ನೀಡಲಾಯಿತು.
ಮುಕ್ತಿ ಬಾವುಟವನ್ನು ಉದ್ಯಮಿ ಮತ್ತು ಕೆಎಂಎಫ್’ನ ನಿರ್ದೇಶಕ ಸಿ. ವೀರಭದ್ರಬಾಬು 26 ಲಕ್ಷ ರೂ.ಗಳಿಗೆ ಹಾರಾಜಿನಲ್ಲಿ ಪಡೆದುಕೊಂಡರು. ಮುಕ್ತಿ ಬಾವುಟ ಹಾರಾಜು ನಂತರ ಸಂಪ್ರದಾಯದಂತೆ ಮುಂಜಾಯಿಂದಲೇ ದೇವತಾ ಕಾರ್ಯಗಳು ಸಾಗಿದವು. ಹೂವಿನಿಂದ ಅಲಂಕಾರಗೊಂಡ ದೊಡ್ಡ ರಥಕ್ಕೆ ವಿಶೇಷ ಪೂಜೆ ಸಲ್ಲಿಸುವುದರ ಮೂಲಕ ಚಾಲನೆ ನೀಡಲಾಯಿತು.
ಬಿರು ಬಿಸಿಲನ್ನು ಲೆಕ್ಕಿಸದೆ ಮಧ್ಯಾಹ್ನದ ವೇಳೆಗೆ ಇಡೀ ನಾಯಕನಹಟ್ಟಿಯನ್ನು ಆವರಿಸಿಕೊಂಡು ದಶದಿಕ್ಕುಗಳಿಂದ ಕಾಯಕ ಯೋಗಿ ಹಟ್ಟಿ ತಿಪ್ಪೇಶನ ಜಯಘೋಷ ಮೊಳಗಿಸುತ್ತಾ ತೇರು ಎಳೆದು ಭಕ್ತರು ಧನ್ಯರಾದರು.
ಅಪಾರ ಸಂಖ್ಯೆಯ ಭಕ್ತರು ಜಾತ್ರೆಗೆ ಎತ್ತಿ ಬಂಡಿಯಲ್ಲಿ ಟ್ಯಾಕ್ಟರ್’ನಲ್ಲಿ ಟಾಟ ಏಸ್‌ನಲ್ಲಿ, ಕಾರಿನಲ್ಲಿ ದ್ವಿಚಕ್ರ ವಾಹನಗಳಲ್ಲಿ ಜಾತ್ರೆಗೆ ಆಗಮಿಸಿದ್ದರು. ಚಳ್ಳಕೆರೆ ಡಿಪೋದಿಂದ 40 ಕೆಎಸ್’ಆರ್’ಟಿಸಿ ಬಸ್’ಗಳನ್ನು ಜಾತ್ರೆಗೆ ವಿಶೇಷವಾಗಿ ಬಿಡಲಾಗಿತ್ತು. ಜಾತ್ರೆಗೆ ಬಂದ ಭಕ್ತರಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು.
ಜಾತ್ರ ಬಂದೋಬಸ್ತ್’ಗಾಗಿ 07 ಡಿವೈಎಸ್‌ಪಿ, 19 ವೃತ್ತ ನಿರೀಕ್ಷಕರು, 50 ಪಿಎಸ್‌ಐ, 109 ಎಸ್‌ಐ, 271 ಮುಖ್ಯಪೇದೆಗಳು, 710 ಪೇದೆಗಳು, 71 ಮಪ್ತಿ ಪಿಸಿಗಳು, 553 ಹೋಮ್‌ಗಾಡ್ಸ್’ಗಳು, 02 ಡಿಆರ್‌ಡಿಓ, ಕೆಎಸ್’ಆರ್’ಪಿ ಸಿಬ್ಬಂದಿಗಳು, 150 ಎನ್’ಎಸ್’ಎಸ್ ವಿದ್ಯಾರ್ಥಿಗಳನ್ನು ನಿಯೋಜಿಸಲಾಗಿತ್ತು.
ಸಂಚಾರಿ ಕತ್ಯವಕ್ಕೆ ಇನ್ನು ಹೆಚ್ಚಿನ 04 ಇಂಟರ್ ಸೆಪ್ಟರ್ ವಾಹನ, 06 ಹೈವೇ ಮೊಬೈಲ್, 25 ಮೋಟರ್ ಸೈಕಲ್, 03 ಟೈಗರ್ ವಾಹನಗಳು, 01 ಕ್ರೇನ್, 03 ವಜ್ರವಾಹನ, 02 ಎಎಸ್’ಸಿ ಟೀಮ್ ನಿಯೋಜಿಸಲಾಗಿತ್ತು. ಹಲವೆಡೆ ಸಿಸಿ ಕ್ಯಾಮೆರಾ, ವಿದ್ಯುತ್ ದೀಪಗಳ ವ್ಯವಸ್ಥೆ, ಪೋಲೀಸ್ ಬಂದೋಬಸ್ತ್’ ಮಾಡಿಕೊಳ್ಳಲಾಗಿತ್ತು.
ಪ್ರಾಣಿ ಬಳಿ ನಿಷೇದ ಇರುವಿದ್ದರಿಂದ ದೇವಸ್ಥಾನದ ಸುತ್ತಮುತ್ತ ಪ್ರಾಣಿ ಬಲಿ ಕೊಡದಂತೆ ಹೆಚ್ಚಿನ ನಿಗಾ ವಹಿಸಲಾಗಿತ್ತು. ಭಕ್ತರು ಕೊಬ್ಬರಿಯನ್ನು ಸುಡದೆ ದೇವಸ್ಥಾನಕ್ಕೆ ನೀಡಲು ಮನವಿ ಮಾಡಿರು ಸಹ ಭಕ್ತರು ಕೊಬ್ಬರಿಯನ್ನು ಸುಡುತ್ತಿದ್ದು ಕಾಣಿಸುತ್ತಿತ್ತು.
ಸಾಧುಸಂತರು, ಮಠಾಧೀಶರು, ಶಾಸಕ ಟಿ. ರಘುಮೂರ್ತಿ, ಮಾಜಿ ಶಾಸಕ ಡಿ. ಸುಧಾಕರ್ ಸೇರಿದಂತೆ ಜಿಲ್ಲಾ ಪಂಚಾಯ್ತಿ ಸದಸ್ಯರು, ತಾಲೂಕು ಪಂಚಾಯ್ತಿ ಸದಸ್ಯರು ಪಟ್ಟಣ ಪಂಚಾಯ್ತಿ ಸದಸ್ಯರು, ಜನಪತ್ರಿನಿಧಿಗಳು, ಜಿಲ್ಲಾ ರಕ್ಷಣಾಧಿಕಾರಿ, ಜಿಲ್ಲಾಧಿಕಾರಿ, ತಹಶೀಲ್ದಾರ್, ತಾಲೂಕು ಅಧಿಕಾರಿಗಳು ಜಾತ್ರೆಯಲ್ಲಿ ಪಾಲ್ಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾದರು.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
Discussion about this post