No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
  • Advertise With Us
  • Grievances
  • About Us
  • Contact Us
Tuesday, October 6, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಉದ್ಯಮಗಳಿಗೆ ಸುರಕ್ಷಿತ, ಸದೃಢ ಡಿಜಿಟಲ್ ಮೂಲಸೌಕರ್ಯ ನಿರ್ಮಾಣಕ್ಕೆ ನೆರವಾಗುತ್ತಾ ಮ್ಯಾನೇಜ್‌ಇಂಜಿನ್

kalpa News by kalpa News
February 21, 2026
in Special Articles
0
ಉದ್ಯಮಗಳಿಗೆ ಸುರಕ್ಷಿತ, ಸದೃಢ ಡಿಜಿಟಲ್ ಮೂಲಸೌಕರ್ಯ ನಿರ್ಮಾಣಕ್ಕೆ ನೆರವಾಗುತ್ತಾ ಮ್ಯಾನೇಜ್‌ಇಂಜಿನ್
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  |

ಝೋಹೋ ಕಾರ್ಪೊರೇಶನ್‌ ನ ಎಂಟರ್‌ ಪ್ರೈಸ್ ಐಟಿ ನಿರ್ವಹಣಾ ವಿಭಾಗವಾದ ಮ್ಯಾನೇಜ್‌ಇಂಜಿನ್, ವೇಗವಾಗಿ ಡಿಜಿಟಲ್’ಗೆ ರೂಪಾಂತರಗೊಳ್ಳುತ್ತಿರುವ ಸಂಸ್ಥೆಗಳಿಗೆ ವಿಶ್ವಾಸಾರ್ಹ ಐಟಿ ನಿರ್ವಹಣೆ ಮತ್ತು ಸೈಬರ್ ಸೆಕ್ಯೂರಿಟಿ ಪಾಲುದಾರನಾಗಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಳ್ಳುತ್ತಿದೆ.

ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳಿಗಾಗಿ ಸರಳ ಹಾಗೂ ಸುಲಭವಾಗಿ ಅಳವಡಿಸಬಹುದಾದ ಟೂಲ್ (ಪರಿಕರ) ಗಳನ್ನು ನಿರ್ಮಿಸುವ ದೃಷ್ಟಿಯೊಂದಿಗೆ 2002ರಲ್ಲಿ ಸ್ಥಾಪನೆಯಾದ ಮ್ಯಾನೇಜ್‌ಇಂಜಿನ್ ಸಂಸ್ಥೆಯು, ಇಂದು ಭಾರತದಲ್ಲಿ 10,000ಕ್ಕೂ ಹೆಚ್ಚು ಗ್ರಾಹಕರನ್ನು ಹೊಂದಿರುವ ಸಮಗ್ರ ‘ಎಂಡ್-ಟು-ಎಂಡ್’ ಐಟಿ ನಿರ್ವಹಣಾ ವೇದಿಕೆಯಾಗಿ ಬೆಳವಣಿಗೆ ಹೊಂದಿದೆ.

ಚೆನ್ನೈನಲ್ಲಿ #Chennai ಪ್ರಧಾನ ಕಚೇರಿಯನ್ನು ಹೊಂದಿರುವ ಮ್ಯಾನೇಜ್‌ಇಂಜಿನ್‌ ಸಂಸ್ಥೆಯು ನಿಜವಾಗಿ ಆರಂಭವಾಗಿದ್ದು 1996ರಲ್ಲಿ. ಆಗ ಕಂಪನಿ ಹೆಸರು ಅಡ್ವೆಂಟ್‌ನೆಟ್ ಎಂಬುದಾಗಿತ್ತು. 2002ರಲ್ಲಿ, ಐಟಿ ನಿರ್ವಹಣಾ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವ ಮತ್ತು ಪರಿಪೂರ್ಣಗೊಳಿಸುವ ಉದ್ದೇಶದೊಂದಿಗೆ ಕಂಪನಿಯನ್ನು ‘ಮ್ಯಾನೇಜ್‌ಇಂಜಿನ್’ ಎಂದು ಮರುನಾಮಕರಣ ಮಾಡಲಾಯಿತು. ಇಂದು, ಈ ಸಂಸ್ಥೆ ಭಾರತದಾದ್ಯಂತ 38ಕ್ಕೂ ಹೆಚ್ಚು ಮತ್ತು ಜಾಗತಿಕವಾಗಿ 35ಕ್ಕೂ ಹೆಚ್ಚು ಕಚೇರಿಗಳನ್ನು ಹೊಂದಿದ್ದು, 180ಕ್ಕೂ ಹೆಚ್ಚು ದೇಶಗಳಲ್ಲಿ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿದೆ.

ಮ್ಯಾನೇಜ್‌ಇಂಜಿನ್ #ManageEngine ವಿಶ್ವಾದ್ಯಂತ 6,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ. ಭಾರತದ ಚೆನ್ನೈ ಮತ್ತು ಮುಂಬೈನಲ್ಲಿರುವ ಎರಡು ಡೇಟಾ ಸೆಂಟರ್‌ ಗಳು ಸೇರಿದಂತೆ ಜಾಗತಿಕವಾಗಿ ಸುಮಾರು 20 ಡೇಟಾ ಸೆಂಟರ್‌ ಗಳ ಬೆಂಬಲದೊಂದಿಗೆ ಆನ್- ಪ್ರಿಮೈಸ್ ಮತ್ತು ಕ್ಲೌಡ್ #Cloud ಉತ್ಪನ್ನಗಳನ್ನು ಒದಗಿಸುತ್ತಿದೆ. ಬೆಂಗಳೂರಿನಲ್ಲಿಯೇ ಈ ಕಂಪನಿಯು ಸ್ಥಳೀಯ ಕಾರ್ಯಾಚರಣೆ ಮತ್ತು ಬೆಂಬಲ ತಂಡದ ಮೂಲಕ 1,000ಕ್ಕೂ ಹೆಚ್ಚು ಗ್ರಾಹಕರಿಗೆ ಸೇವೆ ನೀಡುತ್ತಿದೆ.ಈ ಕುರಿತು ಮ್ಯಾನೇಜ್‌ಇಂಜಿನ್‌ ನ ರೆವೆನ್ಯೂ ಮತ್ತು ಗ್ರೋತ್ ವಿಭಾಗದ ಪ್ರಾದೇಶಿಕ ಉಪಾಧ್ಯಕ್ಷರಾದ ಅರುಣ್ ಕುಮಾರ್ ಅವರು ಮಾತನಾಡಿ, “ಎಐ ತಂತ್ರಜ್ಞಾನವು ಉದ್ಯಮಗಳಿಗೆ ವೇಗವಾಗಿ ಹೊಸತನ ಒದಗಿಸುತ್ತಿದೆ. ಆದರೆ, ಜೊತೆಗೆ ಸೈಬರ್ ಅಪಾಯಗಳನ್ನೂ ಹೆಚ್ಚಿಸುತ್ತಿದೆ. ಸಂಸ್ಥೆಗಳು ಇತರರಿಗಿಂತ ಮುಂದಿರಲು ಬಲವಾದ, ವಿಶ್ವಾಸಾರ್ಹ ಮತ್ತು ದೃಢವಾದ ಮೂಲಸೌಕರ್ಯ ವ್ಯವಸ್ಥೆ ಹೊಂದುವುದು ಅಗತ್ಯವಿದೆ. ಉದ್ಯಮಗಳು ತಮ್ಮ ಬೆಳವಣಿಗೆಗೆ ಪೂರಕವಾದ ಸುರಕ್ಷಿತ ಐಟಿ ಅಡಿಪಾಯದೊಂದಿಗೆ ಆತ್ಮವಿಶ್ವಾಸದಿಂದ ಹೊಸ ಆವಿಷ್ಕಾರಗಳನ್ನು ಅಳವಡಿಸಿಕೊಳ್ಳುವಂತೆ ನೋಡಿಕೊಳ್ಳುವುದು ನಮ್ಮ ಗುರಿಯಾಗಿದೆ” ಎಂದು ತಿಳಿಸಿದರು.

ಕಳೆದ ಕೆಲವು ವರ್ಷಗಳಲ್ಲಿ, ಮ್ಯಾನೇಜ್‌ಇಂಜಿನ್ ಎಐ ಟೂಲ್ ಗಳಿಂದ ಸಮಗ್ರ ಉತ್ಪನ್ನಗಳ ಶ್ರೇಣಿಯಾಗಿ ಬೆಳೆದು ನಿಂತಿದೆ. ಐಟಿ ಸೇವಾ ನಿರ್ವಹಣೆ (ಐಟಿಎಸ್ಎಂ), ಮೂಲಸೌಕರ್ಯ ಮತ್ತು ನೆಟ್‌ ವರ್ಕ್ ಮಾನಿಟರಿಂಗ್, ಯೂನಿಫೈಡ್ ಎಂಡ್‌ ಪಾಯಿಂಟ್ ಮ್ಯಾನೇಜ್‌ ಮೆಂಟ್, ಸೈಬರ್ ಸೆಕ್ಯೂರಿಟಿ, ಆಕ್ಟಿವ್ ಡೈರೆಕ್ಟರಿ ಮ್ಯಾನೇಜ್‌ಮೆಂಟ್, ಐಟಿ ಅನಾಲಿಟಿಕ್ಸ್ ಮತ್ತು ಕಂಪ್ಲೈಯನ್ಸ್ ರಿಪೋರ್ಟಿಂಗ್ ಸೇರಿದಂತೆ 60ಕ್ಕೂ ಹೆಚ್ಚು ಉತ್ಪನ್ನಗಳನ್ನು ಒಳಗೊಂಡಿದೆ. ಇದರ ಏಕೀಕೃತ ವೇದಿಕೆಯು ಎಂಟರ್‌ ಪ್ರೈಸ್ ಐಟಿಯ ಐದು ನಿರ್ಣಾಯಕ ಸ್ತಂಭಗಳಾದ: ಜನರು, ಎಂಡ್‌ ಪಾಯಿಂಟ್‌ ಗಳು, ಅಪ್ಲಿಕೇಶನ್‌ ಗಳು, ಮೂಲಸೌಕರ್ಯ ಮತ್ತು ಡೇಟಾದ ಮೇಲೆ ಸಂಪೂರ್ಣ ನಿಯಂತ್ರಣವನ್ನು ಒದಗಿಸುತ್ತದೆ. ಇದು ಸಂಸ್ಥೆಗಳಿಗೆ ಹಾರ್ಡ್‌ ವೇರ್ ಮತ್ತು ಸಾಫ್ಟ್‌ ವೇರ್ ಗಳನ್ನು ಟ್ರ್ಯಾಕ್ ಮಾಡಲು, ಪರವಾನಗಿ ಪಡೆದ ಮತ್ತು ನವೀಕರಿಸಿದ ಸಿಸ್ಟಮ್‌ ಗಳನ್ನು ಹೊಂದಲು, ಪಾಸ್‌ ವರ್ಡ್ ನೀತಿಗಳನ್ನು ಜಾರಿಗೊಳಿಸಲು, ಪ್ಯಾಚ್‌ ಗಳನ್ನು ನಿರ್ವಹಿಸಲು, ಸೆಷನ್ ರೆಕಾರ್ಡಿಂಗ್‌ ನೊಂದಿಗೆ ಸುರಕ್ಷಿತ ರಿಮೋಟ್ ಪ್ರವೇಶವನ್ನು ಒದಗಿಸಲು ಮತ್ತು ಒಂದೇ ವ್ಯವಸ್ಥೆಯಡಿ ಬದಲಾವಣೆಗಳಿಗೆ ಅನುಮೋದನೆ ನೀಡುವ ಪ್ರಕ್ರಿಯೆಗಳನ್ನು ಸುಗಮಗೊಳಿಸಲು ಸಹಾಯ ಮಾಡುತ್ತದೆ.

ತನ್ನ ಎಐ- ಚಾಲಿತ ಸಾಮರ್ಥ್ಯಗಳನ್ನು ಬಲಪಡಿಸುವ ನಿಟ್ಟಿನಲ್ಲಿ, ಮ್ಯಾನೇಜ್‌ಇಂಜಿನ್ ಇತ್ತೀಚೆಗೆ ತನ್ನ ‘ಫುಲ್-ಸ್ಟ್ಯಾಕ್ ಅಬ್ಸರ್ವೇಬಿಲಿಟಿ’ ವೇದಿಕೆಯಾದ ಸೈಟ್24×7 ನಲ್ಲಿ ‘ಕಾಸಲ್ ಇಂಟೆಲಿಜೆನ್ಸ್’ ಮತ್ತು ಸ್ವಾಯತ್ತ ಎಐ ಅನ್ನು ಪರಿಚಯಿಸಿದೆ. ಈ ಸುಧಾರಣೆಗಳು ಅಸಹಜತೆಗಳನ್ನು ಮೊದಲೇ ಪತ್ತೆಹಚ್ಚುವ (ಪ್ರಿಡಿಕ್ಟಿವ್ ಅನಾಮಲಿ ಡಿಟೆಕ್ಷನ್) ಮತ್ತು ಡೊಮೇನ್- ಅವೇರ್ ಈವೆಂಟ್ ಕೋರಿಲೇಶನ್ ಅನ್ನು ಒಳಗೊಂಡಿವೆ. ಈ ವ್ಯವಸ್ಥೆಗಳು ಐಟಿ ತಂಡಗಳಿಗೆ ಅನಗತ್ಯ ಅಲರ್ಟ್‌ ಗಳ ಗದ್ದಲವನ್ನು ಕಡಿಮೆ ಮಾಡಲು, ಮೂಲ ಕಾರಣಗಳನ್ನು ವೇಗವಾಗಿ ಪತ್ತೆಹಚ್ಚಲು ಮತ್ತು ಸಿಸ್ಟಮ್ ಚೇತರಿಸಿಕೊಳ್ಳುವ ಸಮಯವನ್ನು (ಎಂಟಿಟಿಆರ್) ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಝೋಹೋದ ಆರ್ಕೆಸ್ಟ್ರೇಶನ್ ಪ್ಲಾಟ್‌ ಫಾರ್ಮ್ ಆದ Qntrl ಮೂಲಕ ನಿಯಂತ್ರಿತ ಪರಿಹಾರ ಕಾರ್ಯಗಳನ್ನು ಸಂಯೋಜಿಸುವ ಮೂಲಕ, ಕಂಪನಿಯು ಉದ್ಯಮ-ದರ್ಜೆಯ ಆಡಳಿತ ಮತ್ತು ಆಡಿಟಿಂಗ್ ಸಾಮರ್ಥ್ಯವನ್ನು ಕಾಯ್ದುಕೊಳ್ಳುವುದರ ಜೊತೆಗೆ, ಹೆಚ್ಚು ಸ್ವಾಯತ್ತ ಮತ್ತು ಸ್ವಯಂ-ಗುಣಪಡಿಸುವ ಐಟಿ ಕಾರ್ಯಾಚರಣೆ ನಡೆಯುವಂತೆ ಅನುವು ಮಾಡಿಕೊಡುತ್ತದೆ.ಈ ಕುರಿತು ಮ್ಯಾನೇಜ್‌ಇಂಜಿನ್‌ನ ತಂತ್ರಜ್ಞಾನ ವಿಭಾಗದ ನಿರ್ದೇಶಕರಾದ ರೋಮಾನಸ್ ಪ್ರಭು ರೇಮಂಡ್ ಅವರು ಮಾತನಾಡಿ, “ಐಟಿ ಪರಿಸರಗಳು ಹೆಚ್ಚು ಹೈಬ್ರಿಡ್ ಮತ್ತು ಪರಸ್ಪರ ಇಂಟರ್ ಕನೆಕ್ಟ್ ಆಗುತ್ತಿರುವಂತೆ, ಸ್ಪಷ್ಟತೆ ಮತ್ತು ಸಂದರ್ಭೋಚಿತ ಮಾಹಿತಿ ಅತ್ಯಂತ ನಿರ್ಣಾಯಕವಾಗುತ್ತವೆ. ಅದು ಡಿಪಿಡಿಪಿ ಅಡಿಯಲ್ಲಿನ ಅನುಸರಣೆಯಾಗಿರಲಿ ಅಥವಾ ‘ಕಾಸಲ್ ಇಂಟೆಲಿಜೆನ್ಸ್’ ಮೂಲಕ ವೇಗವಾಗಿ ಘಟನೆಗಳಿಗೆ ಪ್ರತಿಕ್ರಿಯಿಸುವುದಾಗಿರಲಿ, ಎಂಡ್‌ ಪಾಯಿಂಟ್‌ ಗಳು, ಅಪ್ಲಿಕೇಶನ್‌ ಗಳು ಮತ್ತು ಮೂಲಸೌಕರ್ಯಗಳಲ್ಲಿ ಏನಾಗುತ್ತಿದೆ ಎಂದು ತಿಳಿದುಕೊಳ್ಳುವುದಾಗಲಿ ಹೀಗೆ ಎಲ್ಲದರ ಕುರಿತು ಸಂಸ್ಥೆಗಳಿಗೆ ಸ್ಪಷ್ಟತೆ ಬೇಕು. ನಮ್ಮ ವೇದಿಕೆಯು ಉದ್ಯಮಗಳಿಗೆ ಕೇವಲ ಸಮಸ್ಯೆಗಳನ್ನು ಪತ್ತೆಹಚ್ಚಲು ಮಾತ್ರವಲ್ಲದೆ, ಅವುಗಳ ಪ್ರಭಾವವನ್ನು ಅರ್ಥಮಾಡಿಕೊಂಡು ಆತ್ಮವಿಶ್ವಾಸದಿಂದ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ” ಎಂದು ಹೇಳಿದರು.

ಭಾರತದ ಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣಾ (ಡಿಪಿಡಿಪಿ) ಕಾಯ್ದೆ ಜಾರಿಗೆ ಬರುತ್ತಿರುವುದರಿಂದ, ಉದ್ಯಮಗಳು ಗ್ರಾಹಕರ ಸ್ಪಷ್ಟ ಸಮ್ಮತಿ, ಉದ್ದೇಶದ ಮಿತಿ, 72 ಗಂಟೆಗಳೊಳಗೆ ಡೇಟಾ ಸೋರಿಕೆಯ ವರದಿ ಮತ್ತು ಡೇಟಾ ನಿರ್ವಹಣೆಯಲ್ಲಿ ಹೆಚ್ಚಿನ ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳಬೇಕು. ಮ್ಯಾನೇಜ್‌ಇಂಜಿನ್ ಈಗಾಗಲೇ ಜಾಗತಿಕ ಚೌಕಟ್ಟುಗಳಾದ ಜಿಡಿಪಿಆರ್ (ಯುರೋಪ್), ಸೈಬರ್ ಎಸೆನ್ಷಿಯಲ್ಸ್ (ಯುಕೆ) ಮತ್ತು ಎಸೆನ್ಷಿಯಲ್ ಏಯ್ಟ್ (ಆಸ್ಟ್ರೇಲಿಯಾ) ನಂತಹ ನಿಯಮಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿದ್ದು, ಈಗ ತನ್ನ ಆಂತರಿಕ ಪ್ರಕ್ರಿಯೆಗಳು ಮತ್ತು ಉತ್ಪನ್ನದ ಸಾಮರ್ಥ್ಯಗಳನ್ನು ಭಾರತದ ಹೊಸ ಕಾಯ್ದೆಗೆ ಅನುಗುಣವಾಗಿ ರೂಪಿಸುತ್ತಿದೆ. ಇದರ ಉತ್ಪನ್ನಗಳು ವಿವರವಾದ ವರದಿಗಳು, ಟೆಲಿಮೆಟ್ರಿ ವಿಶ್ಲೇಷಣೆ ಮತ್ತು ಪಾಲಿಸಿ ಜಾರಿಗೊಳಿಸುವಿಕೆಯ ಮೂಲಕ ನಿಯಮಾನುಸರಣೆಯನ್ನು ಪಾಲಿಸಲು ಬೆಂಬಲ ನೀಡುತ್ತವೆ.

ಈ ಕುರಿತು ಮ್ಯಾನೇಜ್‌ಇಂಜಿನ್‌ ನ ಪ್ರಾಡಕ್ಟ್ ಹೆಡ್ ರಾಕೇಶ್ ಜಯಪ್ರಕಾಶ್ ಮಾತನಾಡಿ, “ಡಿಜಿಟಲ್ ಗೆ ರೂಪಾಂತರಗೊಂಡ ಸಂಸ್ಥೆಗಳು ತಾವು ಯಾವಾಗಲೂ ಸೈಬರ್ ದಾಳಿಯ ಅಪಾಯದಲ್ಲಿದ್ದೇವೆ ಎಂಬ ಕಲ್ಪನೆಯೊಂದಿಗೆ ಕಾರ್ಯನಿರ್ವಹಿಸಬೇಕು. ನಮ್ಮ ವಿಧಾನವು ಉದ್ಯಮಗಳನ್ನು ಚದುರಿದ ರಕ್ಷಣಾ ವ್ಯವಸ್ಥೆಗಳಿಂದ ಏಕೀಕೃತ ದೃಢ ವ್ಯವಸ್ಥೆಯತ್ತ ಕೊಂಡೊಯ್ಯುತ್ತದೆ. ಈ ವ್ಯವಸ್ಥೆಯು ಸ್ಪಷ್ಟತೆ, ಎಂಡ್‌ ಪಾಯಿಂಟ್ ಮ್ಯಾನೇಜ್‌ಮೆಂಟ್, ಅನಾಲಿಟಿಕ್ಸ್, ಜೀರೋ-ಟ್ರಸ್ಟ್ ಆಕ್ಸೆಸ್ ಮತ್ತು ಸ್ವಯಂಚಾಲಿತ ವರ್ಕ್‌ ಫ್ಲೋಗಳನ್ನು ಒಂದು ಸುಸಂಘಟಿತ ಮತ್ತು ಸುರಕ್ಷಿತ ವೇದಿಕೆಯಾಗಿ ಸಂಯೋಜಿಸುತ್ತದೆ” ಎಂದರು.ಇಂದಿನ ದಿನಗಳಲ್ಲಿ ಉದ್ಯಮಗಳು ಗುತ್ತಿಗೆದಾರರು, ಪೂರೈಕೆದಾರರು ಮತ್ತು ಗಿಗ್ ವರ್ಕರ್‌ಗಳೊಂದಿಗೆ ಹೆಚ್ಚಾಗಿ ಸಹಯೋಗ ಮಾಡಿಕೊಳ್ಳುತ್ತಿವೆ. ಇಂತಹ ಸಂದರ್ಭದಲ್ಲಿ ಹಳೆಯ ವಿಪಿಎನ್ (ವಿಪಿಎನ್) ಮಾದರಿಗಳು ಇಡೀ ನೆಟ್‌ ವರ್ಕ್ ಅನ್ನು ಅಪಾಯಕ್ಕೆ ಒಡ್ಡುತ್ತವೆ. ಮ್ಯಾನೇಜ್‌ಇಂಜಿನ್ ‘ಜೀರೋ-ಟ್ರಸ್ಟ್ ಆಕ್ಸೆಸ್’ ಮಾದರಿಗಳನ್ನು ಸಕ್ರಿಯಗೊಳಿಸಲಿದ್ದು, ಇದು ಇಡೀ ನೆಟ್‌ ವರ್ಕ್ ಪ್ರವೇಶದ ಬದಲಿಗೆ ಕೇವಲ ಅಪ್ಲಿಕೇಶನ್ ಮಟ್ಟದ ಪ್ರವೇಶವನ್ನು ಮಾತ್ರ ಒದಗಿಸುತ್ತದೆ. ಇದರಿಂದ ಮೇಲ್ವಿಚಾರಣೆ ಸುಲಭವಾಗುತ್ತದೆ ಮತ್ತು ಅಪಾಯಗಳು ಕಡಿಮೆಯಾಗುತ್ತವೆ. ಈ ವೇದಿಕೆಯು ಆರ್‌ಬಿಐ ನಿಯಮಾವಳಿಗಳನ್ನು ಮತ್ತು ಬಿಎಫ್‌ಎಸ್‌ಐ, ಐಟಿ ಮತ್ತು ಐಟಿಇಎಸ್, ಉತ್ಪಾದನೆ, ಆರೋಗ್ಯ, ಶಿಕ್ಷಣ ಮತ್ತು ಸರ್ಕಾರಿ ವಲಯಗಳ ಇತರ ಅಗತ್ಯತೆಗಳನ್ನು ಬೆಂಬಲಿಸುತ್ತದೆ.

ಸಂಸ್ಥೆಗಳು ಆನ್-ಪ್ರಿಮೈಸ್ ವ್ಯವಸ್ಥೆಗಳಿಂದ ಕ್ಲೌಡ್, ಹೈಬ್ರಿಡ್ ಮತ್ತು ಎಐ- ಚಾಲಿತ ಪರಿಸರಕ್ಕೆ ಬದಲಾಗುತ್ತಿರುವಂತೆ, ಮ್ಯಾನೇಜ್‌ಇಂಜಿನ್ ಏಕೀಕೃತ, ಸುರಕ್ಷಿತ ಮತ್ತು ಬುದ್ಧಿವಂತ ಐಟಿ ನಿರ್ವಹಣಾ ವ್ಯವಸ್ಥೆ ಒದಗಿಸುವ ಮೂಲಕ ಉದ್ಯಮಗಳನ್ನು ಸಬಲೀಕರಣಗೊಳಿಸುತ್ತಿದೆ. ಇದು ಅವರ ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸಲು, ಉದ್ಯೋಗಿಗಳ ಅನುಭವವನ್ನು ಸುಧಾರಿಸಲು ಮತ್ತು ಭವಿಷ್ಯಕ್ಕಾಗಿ ಸದೃಢ ಡಿಜಿಟಲ್ ಉದ್ಯಮಗಳನ್ನು ನಿರ್ಮಿಸಲು ಸಹಾಯ ಮಾಡುತ್ತಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news   
Kalahamsa Infotech private limited

https://kalpa.news/wp-content/uploads/2024/04/VID-20240426-WA0008.mp4

Tags: BENGALURUChennaiCloudEnd to EndKannada News WebsiteLatest News KannadaManageEngineZoho Corporationಎಂಡ್-ಟು-ಎಂಡ್ಕ್ಲೌಡ್ಚೆನ್ನೈಝೋಹೋ ಕಾರ್ಪೊರೇಶನ್‌ಡಿಪಿಡಿಪಿಬೆಂಗಳೂರುಮ್ಯಾನೇಜ್‌ಇಂಜಿನ್‌
Share198Tweet124Send
Aniruddha Vasishta S R

Aniruddha Vasishta S R

Editor-in-Chief

Previous Post

ಮುಸಲ್ಮಾನ ಗೂಂಡಾಗಳಿಗೆ ಕಾಂಗ್ರೆಸ್ ಸರ್ಕಾರ ಬೆಂಬಲ ನೀಡುತ್ತಿರುವುದೇ ಗಲಭೆಗೆ ಕಾರಣ | ಈಶ್ವರಪ್ಪ ಕಿಡಿ

Next Post

ManageEngine Continues Strong Growth, Enabling Enterprises to Build Secure & Resilient Digital Infrastructures

kalpa News

kalpa News

Next Post
ಉದ್ಯಮಗಳಿಗೆ ಸುರಕ್ಷಿತ, ಸದೃಢ ಡಿಜಿಟಲ್ ಮೂಲಸೌಕರ್ಯ ನಿರ್ಮಾಣಕ್ಕೆ ನೆರವಾಗುತ್ತಾ ಮ್ಯಾನೇಜ್‌ಇಂಜಿನ್

ManageEngine Continues Strong Growth, Enabling Enterprises to Build Secure & Resilient Digital Infrastructures

Leave a Reply Cancel reply

Your email address will not be published. Required fields are marked *

No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL