ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನವದೆಹಲಿ: ದೇಶ ಹಾಗೂ ವಿದೇಶಗಳಲ್ಲಿ ಮಾರಕವಾಗಿ ಕಾಡುತ್ತಿರುವ ಮಾರಕ ಕೊರೋನಾ ವೈರಸ್ ಭಾರತೀಯ ಸೇನೆಗೂ ಸಹ ತಗುಲಿದ್ದು, ಯೋಧರೊಬ್ಬರಲ್ಲಿ ಸೋಂಕು ಇರುವುದು ಪರೀಕ್ಷೆಯಿಂದ ದೃಢಪಟ್ಟಿದೆ.
ಲಡಾಕ್ ಪ್ರದೇಶದಲ್ಲಿ ಕರ್ತವ್ಯದಲ್ಲಿದ್ದ ಯೋಧರೊಬ್ಬರಲ್ಲಿ ಸೋಂಕು ಇರುವುದು ಖಚಿತಗೊಂಡಿದೆ ಎಂದು ವರದಿಗಳು ತಿಳಿಸಿದ್ದು, ಇವರ ತಂದೆ ಇತ್ತೀಚೆಗೆಷ್ಟೇ ಯೋಧನ ತಂದೆ ಇರಾಕ್’ನಿಂದ ಆಗಮಿಸಿದ್ದರು. ಅವರಲ್ಲೂ ಸಹ ಸೋಂಕು ಪತ್ತೆಯಾಗಿತ್ತು. ಈಗ ತಂದೆಯಿಂದ ಮಗನಿಗೆ ಇದು ಹರಡಿದೆ.
ಈ ಹಿನ್ನೆಲೆಯಲ್ಲಿ ಇಡಿಯ ಕುಟುಂಬದ ಸದಸ್ಯರನ್ನು ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಏತನ್ಮಧ್ಯೆ, ಭಾರತ ಪ್ರಸ್ತುತ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಭಾರತವು ಪ್ರಸ್ತುತ 2 ನೇ ಹಂತದಲ್ಲಿದೆ ಮತ್ತು ವೈರಸ್ ಸಾಂಕ್ರಾಮಿಕದ 3 ನೇ ಹಂತವಲ್ಲ ಎಂದು ಪ್ರತಿಪಾದಿಸಿದೆ. ಪರಿಸ್ಥಿತಿಯನ್ನು ನಿಭಾಯಿಸಲು ಐಸಿಎಂಆರ್ ಪರೀಕ್ಷೆಗೆ ಸರ್ಕಾರಿ ವಲಯದಲ್ಲಿ 72 ಕ್ರಿಯಾತ್ಮಕ ಪ್ರಯೋಗಾಲಯಗಳನ್ನು ಹೊಂದಿದೆ. ಈ ವಾರದ ಅಂತ್ಯದ ವೇಳೆಗೆ ಇನ್ನೂ 49 ಮಂದಿ ಸಕ್ರಿಯರಾಗಲಿದ್ದಾರೆ ಎಂದು ಐಸಿಎಂಆರ್ ಮಹಾ ನಿರ್ದೇಶಕ ಡಾ. ಬಲರಾಮ್ ಭಾರ್ಗವ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಇನ್ನು, ಜಾಗತಿಕ ಮಟ್ಟದಲ್ಲಿ ಈವರೆಗೂ 1,87,689 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ನಿನ್ನೆ ರಾತ್ರಿಯರೆಗೂ ಇದಕ್ಕೆ 7,866 ಮಂದಿ ಬಲಯಾಗಿದ್ದಾರೆ.
Get in Touch With Us info@kalpa.news Whatsapp: 9481252093






Discussion about this post