ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನವದೆಹಲಿ: ಕೊರೋನಾ ವೈರಸ್ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ದೇಶದ ಎಲ್ಲ ಭಾಗದ ರೈಲುಗಳ ಸಂಚಾರವನ್ನು ರದ್ದುಗೊಳಿಸಿ, ಭಾರತೀಯ ರೈಲ್ವೆ ಇಲಾಖೆ ಆದೇಶ ಹೊರಡಿಸಿದೆ.
ಈ ಕುರಿತಂತೆ ರೈಲ್ವೆ ಇಲಾಖೆ ಮಾಹಿತಿ ನೀಡಿದ್ದು, ದೂರ ಸಂಚರಿಸುವ ಮೇಲ್/ಎಕ್ಸ್’ಪ್ರೆಸ್, ಇಂಟರ್’ಸಿಟಿ, ಪ್ಯಾಸೆಂಜರ್ ಸೇರಿದಂತೆ ಎಲ್ಲ ರೀತಿಯ ರೈಲುಗಳ ಸಂಚಾರವನ್ನು ತತಕ್ಷಣದಿಂದಲೇ ಜಾರಿಗೆ ಬರುವಂತೆ ಸ್ಥಗಿತಗೊಳಿಸಲು ಸೂಚಿಸಲಾಗಿದೆ. ಆದರೆ, ಈಗಾಗಲೆ ಸಂಚಾರ ಆರಂಭಿಸಿರುವ ರೈಲುಗಳು ನಿಗದಿತ ಸ್ಥಳ ತಲುಪುವ ಸಲುವಾಗಿ ಆ ರೈಲುಗಳಿಗೆ ಮಾತ್ರ ಮಾರ್ಚ್ 22ರ ಇಂದ ಸಂಜೆಯವರೆಗೂ ಕಾಲವಕಾಶ ನೀಡಲಾಗಿದೆ.
ಗೂಡ್ಸ್ ರೈಲುಗಳ ಸಂಚಾರಕ್ಕೆ ಮಾತ್ರ ದೇಶದಲ್ಲಿ ಅವಕಾಶವಿದ್ದು, ಮಾರ್ಚ್ 31ರವರೆಗೂ ಪ್ರಯಾಣಿಕರು ಸಂಚರಿಸುವ ಯಾವುದೇ ರೈಲುಗಳ ಓಡಾಟ ಇರುವುದಿಲ್ಲ.
ದೇಶದಾದ್ಯಂತ ಕೊರೋನಾ ವೈರಸ್ ಹರಡುವಿಕೆ ಹೆಚ್ಚಾಗುತ್ತಿದ್ದು, ಬಿಹಾರದ ಪಾಟ್ನಾದ ಏಮ್ಸ್ ಆಸ್ಪತ್ರೆಯಲ್ಲಿ 38 ವರ್ಷದ ಪುರುಷನೊಬ್ಬ ಇಂದು ಸಾವನ್ನಪ್ಪಿದ್ದಾನೆ. ಆತನಲ್ಲಿ ಕೋವಿಡ್19 ಪಾಸಿಟಿವ್ ಬಂದಿದ್ದು, ಕಿಡ್ನಿ ವೈಫಲ್ಯದಿಂದಾಗಿ ಆತ ಸಾವನ್ನಪ್ಪಿದ್ದಾನೆ. ಈ ಹಿನ್ನೆಲೆಯಲ್ಲಿ ದೇಶದ ಎಲ್ಲ ರೈಲುಗಳ ಸಂಚಾರವನ್ನು ಮಾರ್ಚ್ 31ರವರೆಗೂ ಸ್ಥಗಿತಗೊಳಿಸಲು ಇಲಾಖೆ ನಿರ್ಧರಿಸಿದೆ.
Get in Touch With Us info@kalpa.news Whatsapp: 9481252093
















