ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಕೊರೋನಾ ವೈರಸ್ ಮಾರ್ಚ್ 30 ವರೆಗೆ ಏರುಗತಿ ಕಾಣಬಹುದು. ಆದರೂ ಇವತ್ತಿನಿಂದ ಕುಜ ಮಕರಕ್ಕೆ ಪ್ರವೇಶ ಮಾಡುವುದರಿಂದ ಕುಜ ಶನಿ ಗ್ರಹ ಯುದ್ಧ ಆಗುವುದರಿಂದ ರೋಗವು ಬಲಕ್ಷೀಣತೆಯನ್ನು ಕಾಣುತ್ತದೆ. ಮುಂದೆ ಸೆಪ್ಟೆಂಬರ್ 23 ಕ್ಕೆ ಕೇತು ಧನುರಾಶಿ ನಿರ್ಗಮನದ ವರೆಗೆ ಭಯ ಉಳಿಯುತ್ತೆ. 2021 Feb ಗೆ ಶನಿಯೂ ಮಕರದಲ್ಲಿ ಉತ್ತರಾಷಾಡ ನಕ್ಷತ್ರದಿಂದ ಶ್ರವಣ ನಕ್ಷತ್ರ(10° ಪಾಶ ದ್ರೇಕ್ಕಾಣ ದಾಟುವ ಕಾಲ) ಪ್ರವೇಶಿಸುವ ಸಮಯದಿಂದ ಪೂರ್ಣ ನಿರ್ಭಯತ್ವ ಸಿಗುತ್ತದೆ.ಈ ಮದ್ಯೆ ಯುಗಾದಿನಂತರ ವಿಕಾರಿ ಸಂವತ್ಸರದ ಅಂತ್ಯವಾಗಿ ಶಾರ್ವರಿ ಸಂವತ್ಸರ( ಶುಭ ವತ್ಸರ) ಬರುವುದರಿಂದ ರೋಗ ಕ್ಷೀಣತೆಯನ್ನು ಕಾಣಬಹುದು.
ಇದರ ಜೊತೆಯಲ್ಲಿ ಸರ್ಕಾರ ಸೂಚಿಸುವ ಮುಂಜಾಗ್ರತಾ ಕ್ರಮಗಳನ್ನು ಹಾಗೂ ಏನೇ ಆದೇಶ ಹೊರಡಿಸಿದರೂ ಕಟ್ಟುನಿಟ್ಟಾಗಿ ಪಾಲಿಸಿ. ಆಡಳಿತದೊಂದಿಗೆ ಸಹಕರಿಸಿ…
ಆದರೂ ಒಂದು ಸಲ ಒಂದು ವೈರಾಣು ನುಗ್ಗಿದರೆ ಅದರ ನಾಶಕ್ಕೆ ಸ್ವಲ್ಪ ಸಮಯ ಬೇಕೇ ಬೇಕು ಮತ್ತು ನಾವೂ ಬಹಳ ಎಚ್ಚರಿಕೆಯಿಂದ ಇರಲೇಬೇಕು.
ಭಯವನ್ನು ಬಿಡಿ. ತತ್ವವನ್ನು ಪಾಲಿಸಿ. ಪೂರ್ಣ ರೋಗ ಮುಕ್ತಿಯಾಗುವವರೆಗೆ ಮಾಂಸಾಹಾರವನ್ನು ಕಡ್ಡಾಯವಾಗಿ ನಿಷೇಧಿಸಿ. ಮಾಂಸದಲ್ಲಿ ಮೀನಿನ ಮಾಂಸವನ್ನು ಹತೋಟಿಯಲ್ಲಿ ತಿನ್ನುವುದಕ್ಕಡ್ಡಿ ಇಲ್ಲ. ಯಾಕೆಂದರೆ ಮೀನಿಗೆ ರಕ್ಷಣಾ(Defence) ಸಾಮರ್ಥ್ಯ, ಚುರುಕುತನ ಹೆಚ್ಚು ಇರುತ್ತದೆ.
Discussion about this post