ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ವಾಷಿಂಗ್ಟನ್: ಇಡಿಯ ವಿಶ್ವವನ್ನೇ ಅಲ್ಲೋಲಕಲ್ಲೋಲ ಮಾಡುತ್ತಿರುವ ಮಾರಕ ಕೋವಿಡ್-19 ವೈರಸ್ ಸೋಂಕಿತರ ಸಂಖ್ಯೆಯಲ್ಲಿ ಅಮೆರಿಕಾ ದೇಶವು ಚೀನಾ ಹಾಗೂ ಇಟಲಿಯನ್ನು ಹಿಂದಿಕ್ಕಿದ್ದು, ಆ ದೇಶದಲ್ಲಿ ಈವರೆಗೂ ವೈರಸ್ ದೃಢಪಟ್ಟವರ ಸಂಖ್ಯೆ 82 ಸಾವಿರ ದಾಟಿದೆ.
ಅಮೆರಿಕಾದ ಪತ್ರಿಕೆಯೊಂದು ವರದಿ ಮಾಡಿರುವ ಪ್ರಕಾರ, ಜಾನ್ಸ್ ಹಾಪ್ ಕಿನ್ಸ್ ವಿಶ್ವವಿದ್ಯಾಲಯವು ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದ್ದು, ಗುರುವಾರ ರಾತ್ರಿಯವರೆಗೂ 82,404 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಇಟಲಿಯಲ್ಲಿ 80,589 ಜನರು ಸೋಂಕು ಪೀಡಿತರಾಗಿದ್ದು, ಚೀನಾದಲ್ಲಿ 81,782 ಮಂದಿಗೆ ಕೋವಿಡ್ 19 ತಗುಲಿತ್ತು.
ಈ ಹಿನ್ನೆಲೆಯಲ್ಲಿ ಅಮೆರಿಕಾದಲ್ಲಿ ಸಾಲು ಸಾಲಾಗಿ ಜನರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದ್ದು, ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿರುವುದು ಅಲ್ಲಿನ ವೈದ್ಯರನ್ನು ಕಂಗಾಲು ಮಾಡಿದೆ.
ಅಮೆರಿಕಾದಲ್ಲಿನ ರೆಸ್ಟೋರೆಂಟ್, ಶಾಪ್, ಸಿನಿಮಾ ಥಿಯೇಟರ್ಸ್ಸ್ ಸೇರಿದಂತೆ ಬಹುತೇಕ ಎಲ್ಲವೂ ಸ್ತಬ್ಧವಾಗಿದ್ದು, ಹಲವಾರು ಮಂದಿಯನ್ನು ದೊಡ್ಡ, ದೊಡ್ಡ ಕಂಪನಿಗಳು ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡತೊಡಗಿದೆ. ದೇಶವೇ ಶಟ್’ಡೌನ್ ಆಗಿರುವ ಹಿನ್ನೆಲೆಯಲ್ಲಿ ಅಮೆರಿಕಾದ ಆರ್ಥಿಕತೆ ಕುಸಿಯತೊಡಗಿದ್ದು, ಸರ್ಕಾರವನ್ನು ಚಿಂತೆಗೆ ಈಡು ಮಾಡಿದೆ.
Get in Touch With Us info@kalpa.news Whatsapp: 9481252093
Discussion about this post