ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಕೋಟೆ ಆಂಜನೇಯ ದೇವಾಲಯದ ಎದುರಿನ ಮಸಾಲೆ ಮಂಡಕ್ಕಿ ಅಂಗಡಿಯಲ್ಲಿ ಅಗ್ನಿ ಅನಾಹುತ ಸಂಭವಿಸಿದ್ದು, ಅಂಗಡಿ ಬಹುತೇಕ ಬೆಂಕಿಗೆ ಆಹುತಿಯಾಗಿದೆ.
ರಾಧಾಕೃಷ್ಣ ಕಾಮತ್ ಹಾಗೂ ಗಣಪತಿ ಕಾಮತ್ ಎನ್ನುವರಿಗೆ ಸೇರಿದ ಈ ಅಂಗಡಿಯಲ್ಲಿ ಇಂದು ನಸುಕಿನಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ ಪರಿಣಾಮ ಬೆಂಕಿ ಹೊತ್ತಿಕೊಂಡಿದ್ದು, ಬಹುತೇಕ ಸುಟ್ಟು ಭಸ್ಮವಾಗಿದೆ.
ಅಂಗಡಿಯ ಇಬ್ಬರೂ ಮಾಲೀಕರು ಅದರ ಮೇಲ್ಬಾಗದಲ್ಲಿಯೇ ವಾಸವಾಗಿದ್ದರು. ಮರದ ಅಂಗಡಿ ಹಾಗೂ ಮೆಟ್ಟಿಲುಗಳಾದ ಕಾರಣ ಬಹುತೇಕ ಬೆಂಕಿ ವ್ಯಾಪಿಸಿದ ಪರಿಣಾಮ ಮೇಲಿನ ಮನೆಯಲ್ಲಿದ್ದ ಕೆಲವರು ಹೊರಬರಲಾರದೇ ಸಿಲುಕಿದ್ದರು. ಅಗ್ನಿ ಶಾಮಕ ಸಿಬ್ಬಂದಿಗಳು ಇವರನ್ನು ಪಾರು ಮಾಡಿದ್ದು, ಯಾರಿಗೂ, ಯಾವ ರೀತಿಯಲ್ಲೂ ಸಹ ಹಾನಿಯಾಗಿಲ್ಲ.
ಆದರೆ, ಅಂಗಡಿ ಹಾಗೂ ಸಾಮಾನು-ಸರಂಜಾಮು ಸಂಫೂರ್ಣ ಬೆಂಕಿಗೆ ಆಹುತಿಯಾಗಿದ್ದು, ಸುಮಾರು 4 ಲಕ್ಷ ರೂ.ಗಳಷ್ಟು ನಷ್ಟವಾಗಿದೆ ಎನ್ನಲಾಗಿದೆ.
Get in Touch With Us info@kalpa.news Whatsapp: 9481252093

















