ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಹೊಸಪೇಟೆ: ವಿಶ್ವದಾದ್ಯಂತ ಮಾರಕ ಕೊರೋನಾ ವೈರಸ್ ಸಾಲು ಸಾಲು ಬಲಿ ಪಡೆಯುತ್ತಿದ್ದು, ದೇಶ ಹಾಗೂ ರಾಜ್ಯದಲ್ಲೂ ಸಹ ಪರಿಸ್ಥಿತಿ ಗಂಭೀರವಾಗಿದೆ. ಈ ಹಿನ್ನೆಲೆಯಲ್ಲಿ ಲಾಕ್’ಡೌನ್ ಘೋಷಣೆ ಮಾಡಿದ್ದು, ಹೊಸಪೇಟೆ(ವಿಜಯನಗರ ಕ್ಷೇತ್ರ)ದಲ್ಲಿ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಸಿಟಿ ರೌಂಡ್ಸ್ ನಡೆಸಿದ್ದು, ಗ್ರೌಂಡ್ ರಿಪೋರ್ಟ್ ಇಲ್ಲಿದೆ.
ಇದುವರೆಗೆ ಕೊರೋನಾ ಸಂಬಂಧಸಿದಂತೆ ಹೊಸಪೇಟೆ ಭಾಗದಲ್ಲಿ ಯಾವುದೇ ರೀತಿಯ ಪಾಸಿಟೀವ್ ಕೇಸ್ ಇದುವರೆಗೂ ಇರುವುದಿಲ್ಲ. ಇದೇ ರೀತಿಯಲ್ಲಿ ಎಲ್ಲಾ ಕಟ್ಟುನಿಟ್ಟಿನ ಕ್ರಮ ಮುಂದುವರೆ ಮಾತ್ರ ಕೊರೋನಾ ವೈರಸ್ ತಡೆಗಟ್ಟಬಹುದು. ಈ ನಿಟ್ಟಿನಲ್ಲಿ ಸಾರ್ವಜನಿಕರು ಭಯಪಡುವ ಅವಶ್ಯಕತೆ ಇಲ್ಲ. ಅತಿ ಹೆಚ್ಚು ಸಂಖ್ಯೆಯಲ್ಲಿ ವಿದೇಶಿ ಪ್ರವಾಸಿಗರು ಬರುವ ಹೊಸಪೇಟೆ ಮತ್ತು ಹಂಪೆ, ಆನೆಗೊಂದಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಯಾವುದೇ ವಿದೇಶಿ ಪ್ರವಾಸಿಗರ ಸುಳಿವು ಇರುವುದಿಲ್ಲ ಮತ್ತು ಈ ಭಾಗದ ಸುತ್ತಮುತ್ತಲಿನ ಕೈಗಾರಿಕೆಗಳಿಗೆ ಬಂದಿರುವ ವಿದೇಶಿ ಉದ್ಯೋಗಿಗಳು ಸಹ ಸಾರ್ವಜನಿಕ ಸ್ಥಳಗಳಲ್ಲಿ ಓಡಾಟ ಮಾಡದೇ ಇರುವುದರಿಂದ ಈ ಭಾಗದಲ್ಲಿ ಇಲ್ಲಿಯವರೆಗೆ ಯಾವುದೇ ರೀತಿಯಿಂದ ಕರೋನಾ ಬಗ್ಗೆ ಸುಳಿವು ಸಿಕ್ಕಿರುವುದಿಲ್ಲ.
ಮುಖ್ಯವಾಗಿ ಹೊಸಪೇಟೆ ಮತ್ತು ಕೊಪ್ಪಳ ಭಾಗದ ಕೈಗಾರಿಕೆಗಳು ಉತ್ತಮವಾದ ಸಹಕಾರ ನೀಡಿ ಕೈಗಾರಿಕೆಗಳನ್ನು ಸಂಪೂರ್ಣವಾಗಿ ಬಂದ್ ಮಾಡಿದ್ದಾರೆ.
ಪೋಲಿಸ್ ಇಲಾಖೆ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದು, ಅನುಮಾನ ಬಂದ ವ್ಯಕ್ತಿಯ ವಿಚಾರಣೆ ನಂತರ ಲಾಠಿ ಏಟು ನೀಡಿ ಮನೆಗೆ ಕಳುಹಿಸುತ್ತಿದ್ದಾರೆ.
ಸಾರ್ವಜನಿಕ ಆರೋಗ್ಯ ದೃಷ್ಟಿಯಿಂದ ಹೊಸಪೇಟೆ ನಗರದ ಪ್ರಮುಖ ಸ್ಥಳದಲ್ಲಿ ತರಕಾರಿ ಮಾರಾಟ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಶುಚಿಯಾಗಿ ಪರಿಸರ ಮತ್ತು ಆರೋಗ್ಯಕ್ಕೆ ಹಾನಿಯಾಗದಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ವಿತರಣೆ ಮಾಡಲು ಉದ್ದೇಶಿಸಲಾಗಿದೆ ಮತ್ತು ಅದಕ್ಕೆ ಬೇಕಾದ ಏರ್ಪಾಡು ಮಾಡಲಾಗುತ್ತಿದೆ.
ಸದಾಕಾಲ ತುಂಬಿ ತುಳುಕುತ್ತಿದ್ದ ವಿಜಯನಗರ ಕಾಲೇಜು ಮೈದಾನ ಇಂದು ಖಾಲಿಖಾಲಿಯಾಗಿ ಇತ್ತು. ರಸ್ತೆಯಲ್ಲಿ ಜನರ ಓಡಾಟ ನಿಂತಿದೆ ಕೇವಲ ಶಾಪಿಂಗ್ ಮಾಲ್, ಬಜಾರ್ ಹಾಗೂ ಮೆಡಿಕಲ್ ಶಾಪ್’ಗಳು ಪೂರ್ಣವಾಗಿ ತೆಗೆದು ಕಾರ್ಯ ನಿರ್ವಹಿಸುತ್ತಿದ್ದ ದೃಶ್ಯವನ್ನು ವೀಕ್ಷಿಸಲಾಯಿತು.
ಸಂಜೆ ಅನೇಕ ಮನೆಗಳಲ್ಲಿ ಕೂರೋನಾ ತಡೆಗಟ್ಟಲು ವಿಷ್ಣು ಸಹಸ್ರನಾಮ ಪಠಣ ಮಾಡಲಾಗುತ್ತಿತ್ತು.
ವಿದೇಶಗಳಿಂದ ಹೊಸಪೇಟೆಗೆ ಬಂದವರ ಪಟ್ಟಿಯಲ್ಲಿ ಸುಮಾರು 43 ಜನರನ್ನು ಹೊರಗಡೆ ತಿರುಗಾಡದಂತೆ ನಿರ್ಬಂಧ ಹೇರಿ ಮನೆಯಲ್ಲಿ ಇರಿಸಲಾಗಿದೆ ಮತ್ತು ಅವರ ಮೇಲೆ ನಿಗಾ ಇಡಲಾಗಿದೆ. ತಿರುಗಾಡಿದರೆ ತಕ್ಷಣ ಪೊಲೀಸರಿಗೆ ತಿಳಿಸಲು ಪೋಲಿಸ್ ಪ್ರಕಟಣೆ ಸಹ ಮಾಡಲಾಗಿದೆ.
ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿ ಬೆಳಿಗ್ಗೆ 9-11 ಮತ್ತು ಸಂಜೆ 6-7 ಘಂಟೆ ತನಕ ದಿನಸಿ ಅಂಗಡಿಗಳಲ್ಲಿ ಸಾಮಾಗ್ರಿಗಳನ್ನು ಮಾಸ್ಕ್ ಹಾಕಿಕೊಂಡ ತೆಗೆದುಕೊಳ್ಳುವ ವ್ಯವಸ್ಥೆ ಇತ್ತು.
ಪೋಲಿಸ್ ಸಿಬ್ಬಂದಿಗೆ ಇಂದು ಹೊಸಪೇಟೆಯ ಎಸ್’ವಿಎಸ್ ನೀಡ್ಸ್ ಮಾಲೀಕರಾದ ಶ್ರೀ ವೆಂಕಟೇಶ ಸುರಕ್ಷತಾ ಮಾಸ್ಕ್ ನೀಡುತ್ತಿದ್ದ ದೃಶ್ಯ ಸೆರೆ ಹಿಡಿಯಲಾಯಿತು.
ವರದಿ: ಎಂ.ಎಂ. ನಾಡಿಗೇರ್, ಹೊಸಪೇಟೆ
Get in Touch With Us info@kalpa.news Whatsapp: 9481252093
Discussion about this post