ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಇಂದು ವಿಶ್ವವೇ ಕೊರೋನಾ ವೈರಸ್ ನಿಂದಾಗಿ ಸಾರ್ವಜನಿಕರು ಭಯ ಭೀತಿಗೊಳಗಾಗಿದ್ದಾರೆ. ಸರ್ಕಾರ ಲಾಕ್ ಡೌನ್ ಮಾಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಸಂಕಷ್ಟಕೊಳಗಾಗಿದ್ದಾರೆ.
ಅದರಲ್ಲೂ ಕೂಲಿ ಕಾರ್ಮಿಕರ, ಸ್ವಯಂಸೇವಕರು, ಹಗಲು ರಾತ್ರಿ ಜೀವದ ಹಂಗು ತೊರೆದು ಶ್ರಮಿಸುತ್ತಿರುವ ವೈದ್ಯರು, ಸಿಬ್ಬಂದಿಗಳು, ಪೊಲೀಸ್ ಹಾಗೂ ಗೃಹ ರಕ್ಷಕ ದಳ ಗಳಿಗೆ ಕನಿಷ್ಠ ನೀರು ಒದಗಿಸುವುದಕ್ಕೆ ಮುಂದಾಗದ ಇಂತಹ ಪರಿಸ್ಥಿತಿಯಲ್ಲಿ ಕನಿಷ್ಠ ಸಹಾಯ ಮಾಡುವಂತಹ ಅನೇಕ ಸೇವಾನಿರತ
ಸಂಘ ಸಂಸ್ಥೆಗಳು ನಿರಾಶ್ರಿತರಿಗೆ ಆಶರ್ಯವಾಗಲು ಮುಂದಾಗಿ ತಮ್ಮ ಕೈಲಾದ ಸೇವೆ ಸಲ್ಲಿಸಲು ಮುಂದಾಗಿದ್ದಾರೆ.
ಇದಕ್ಕೆ ವಿಭಿನ್ನವಾಗಿ ತಂಡಕ್ಕೆ ಸ್ನೇಹಜೀವಿ ಬಳಗದ ಸ್ನೇಹಜೀವಿ ಉಮೇಶ್ ರವರು ಸ್ವತಃ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತ ನಿರಾಶ್ರಿತರಿಗೆ ಹಾಗೂ ಹಸಿದವರಿಗೆ ಏನನ್ನಾದರೂ ಸೇವೆ ಸಲ್ಲಿಸಬೇಕೆಂಬ ಉದ್ದೇಶದಿಂದ ಈ ಹಿಂದೆ ಸಾರ್ವಜನಿಕರ ಉಚಿತ ಸೇವೆಗೆಂದು ಅಂಬ್ಯುಲೆನ್ಸ್ ಒಂದನ್ನು ಲೋಕಾರ್ಪಣೆ ಮಾಡಿದ್ದರು.
ಈಗ ಅದೇ ವಾಹನದಲ್ಲಿ ಸುಮಾರು 20 ಸಾವಿರ ಮೌಲ್ಯದ ಅಕ್ಕಿ ವಿತರಿಸಿ ಮಾನವೀಯತೆ ಮೆರೆದಿದ್ದಾರೆ.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Get in Touch With Us info@kalpa.news Whatsapp: 9481252093
Discussion about this post