ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನಮ್ಮ ಭಾರತ saving economy ಹೊಂದಿದೆ… ವಿಶ್ವದ ಹಲವಾರು ಬೇರೆ ಬೇರೆ ದೇಶಗಳು expenditure economy ಗಳಾಗಿವೆ.
saving economy ಅಂದರೆ ಭಾರತೀಯರು ಮೊದಲಿನಿಂದಲೂ ಮಕ್ಕಳಿಗಾಗಿಯೋ ಅಥವಾ ತನ್ನ ಹತ್ತಿರದವರಿಗಾಗಿ ಅಲ್ಪ ಸ್ವಲ್ಪ ಹಣವನ್ನು ಕುಡಿಡುತ್ತಾರೆ. ಇದರಿಂದಾಗಿ ಭಾರತ ಸುಮಾರು 6 ತಿಂಗಳವರೆಗೆ ಯಾವುದೇ ದುಡಿಮೆ ಇಲ್ಲದೆ ಕೆಲವೊಂದಿಸ್ಟು ದಿನ ಕುಟುಂಬಗಳು ಜೀವನ ನಡೆಸಬಹುದಾಗಿದೆ.
ಆದರೆ ಬೇರೆ ದೇಶಗಳು ಹೀಗಿರಲು ಸಾಧ್ಯವಿಲ್ಲ. ವಿಶ್ವ ಬ್ಯಾಂಕ್ ನ ಅಧ್ಯಯನದ ಪ್ರಕಾರ ಜಗತ್ತು recessionಗೆ ಹೊರಳುವ ಸಾಧ್ಯತೆ ಇದೆ. ಆದರೆ ಚೀನಾ ಹಾಗೂ ಭಾರತ ಇದರ ಹೊಡೆತದ ಪರಿಮಾಮ ಕಡಿಮೆ ಎಂದು ತನ್ನ ಅಧ್ಯಯನದಲ್ಲಿ ತಿಳಿಸಿದೆ.
ಭಾರತ ಒಂದು ದಿನ ಸಂಪೂರ್ಣ ಬಂದ್ ಆದರೆ ಸುಮಾರು ಹತ್ತು ಸಾವಿರ ಕೋಟಿ ನಷ್ಟ ಎಂದು ಹಲವಾರು ಆರ್ಥಿಕ ತಜ್ಞರ ಅಭಿಪ್ರಾಯ.
ಭಾರತಕ್ಕೆ ಆರ್ಥಿಕ ಹೊಡೆತ ಇಂದು ನಿನ್ನೆಯದಲ್ಲ ಇದು GST, ನೋಟ್ ಬ್ಯಾನ್ ಮುಂತಾದ ಕಠಿಣ ನಿರ್ಧಾರಗಳಿಂದ ವ್ಯಾಪಾರ ವ್ಯವಹಾರಗಳ ಮೇಲೆ ಹೊಡೆತ ಬಿದ್ದಿದೆ ಇದರ ನಂತರ ಆರ್ಥಿಕ ಪರಿಸ್ಥಿತಿ ಹಾಗೂ ಷೇರು ಮಾರುಕಟ್ಟೆ ತಲ್ಲಣ , ಬ್ಯಾಂಕ್’ಗಳ NPA(non performing asset), ಕೊಟ್ಟ ಸಾಲಗಳ ಮರು ಪಾವತಿ ಆಗದೆ ಇರುವುದು ಮತ್ತು ಜನರು ಬ್ಯಾಂಕ್’ನಲ್ಲಿ ಇಟ್ಟಿರುವ ಹಣಕ್ಕೆ interest ಕೊಡುವುದು ಬ್ಯಾಂಕ್’ಗಳ ಅನಿವಾರ್ಯ ಆಗಿದೆ.
ಇವೆಲ್ಲಾ ಪರಿಸ್ಥಿತಿಗಳು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಜನರಿಗೆ ಹೊರೆಯಾಗುತ್ತದೆ. ಸದ್ಯ ಜಗತ್ತಿಗೆ ಆಕ್ರಮಿಸಿಕೊಂಡ ಕೊರೋನಾ ಎಂಬ ಭಯಾನಕ ರೋಗ ಇಡಿಯ ಜಗತ್ತನ್ನೇ ಸಂಕಷ್ಟಕ್ಕೆ ಸಿಲುಕಿಸಿದೆ.
ಯಾವುದೇ ವ್ಯಾಪಾರ ವ್ಯವಹಾರ ಉತ್ಪಾದನೆ ಎಲ್ಲವೂ ನಿಂತು ಹೋಗಿದೆ ಆದರೆ ಅಲ್ಲಿ ಕೆಲಸ ಮಾಡುವ ಕೆಲಸಗಾರರಿಗೆ ಸಂಬಳ ಕೊಡುವುದು ಅನಿವಾರ್ಯ ಆಗಿಹೋಗಿದೆ.
ಇವೆಲ್ಲವನ್ನು ಸರಿದೂಗಿಸಲು ಅನಿವಾರ್ಯವಾಗಿ ವಸ್ತುಗಳ ಬೆಲೆ ಏರಿಕೆ ಮಾಡುವುದು ಅನಿವಾರ್ಯ, ಇಲ್ಲವೇ ಮತ್ತೆ ಉತ್ಪಾದಕ ಸಂಘಟನೆಗಳು ನಷ್ಟದ ಹಾದಿಯೋ ಅಥವಾ ಮುಚ್ಚುವ ಹಂತಕ್ಕೆ ತಲುಪುವುದು ನಿಶ್ಚಿತವಾಗಿದೆ.
ಇವೆಲ್ಲಕ್ಕೂ ಕೇವಲ ಒಂದೇ ಮಾರ್ಗ ಉಳಿದಿದೆ. ಅದೇ ಹಣವನ್ನು ಹೇಗಾದರೂ ಮಾಡಿ ಸರ್ಕಾರ ಕ್ರೋಢೀಕರಿಸುವುದು ಹಾಗೂ ಅವರಿಗೆ ಸಹಾಯ ಮಾಡುವುದು.
ಇದು ಸರ್ಕಾರ ತಮ್ಮ ಶಾಸಕರು, ಸಂಸದರು, ಸರ್ಕಾರಿ ನೌಕರರು(ವೈದ್ಯಕೀಯ ಹಾಗೂ ರಕ್ಷಣಾ ಸಿಬ್ಬಂದಿ ಹೊರತುಪಡಿಸಿ), ಇನ್ನಿತರೆ ಶ್ರೀಮಂತರ ಒಳಗೊಂಡಂತೆ ಕೇವಲ 30 ರಿಂದ 40ರಷ್ಟು ತಮ್ಮ ತಿಂಗಳ ಸಂಬಳವನ್ನು ಕಡಿತ ಮಾಡಿದರೆ ಸ್ವಲ್ಪವಾದರೂ ಹಣದ ಕ್ರೋಢೀಕರಣ ಸಾಧ್ಯ. ಬೇರೆಲ್ಲಿಂದಲೂ ಹಣದ ಕ್ರೋಢೀಕರಣ ಕಷ್ಟ ಸಾಧ್ಯವಷ್ಟೇ.
Get in Touch With Us info@kalpa.news Whatsapp: 9481252093
Discussion about this post