ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಯಾಕೆ ಕಪೋಲ ಕಲ್ಪಿತ ಬಣ್ಣ ಬಳಿದು, ಸಂಪ್ರದಾಯ, ಜ್ಯೋತಿಷ್ಯ ಶಾಸ್ತ್ರದ ಬಗ್ಗೆ ಕೀಳರಿಮೆ ಮೂಡಿಸುತ್ತೀರೋ ಗೊತ್ತಾಗಲ್ಲ. ಧರ್ಮ ಶಾಸ್ತ್ರಗಳ ಮಹತ್ವ ಹಾಳಾಗುವುದು ಹೀಗೆಯೆ. ಹಲವಾರು ವರ್ಷ ಅಧ್ಯಯನ ಮಾಡಿದ ಜ್ಯೋತಿಷ್ಯ ಶಾಸ್ತ್ರ ನಮ್ಮ ಕಣ್ಣೆದುರಿಗೇ ಹಾಳಾಗೋದನ್ನು ನೋಡಿ ಸಹಿಸಲಾಗದೆ ಈ ಲೇಖನ ಬರೆಯುತ್ತಿದ್ದೇನೆ. ಏನಿದು ದೀಪಾವಳಿ ರಾಹು! ಮೂರ್ಖರ ಕೈಗೆ ಪುಸ್ತಕ ಸಿಕ್ಕಿದರೆ ಹಾಳಾಗೀದು ಹೀಗೆಯೆ. ನಾಳೆ ದೀಪ ಪ್ರಜ್ವಲನೆಯ ನಿಜವಾದ ಮರ್ಮ ಏನು?
ಮೋದಿಯವರು ದೇಶದ ಒಬ್ಬ ಪ್ರಜ್ಞಾವಂತ ಪ್ರಜೆಯಾಗಿ, ಪ್ರಧಾನಿಯಾಗಿ ದೀಪ ಪ್ರಜ್ವಲಿಸಲು ಹೇಳಿದ್ದು ನಿಜ. ಸರಿಯಾಗಿ ನೆನಪಿಡಿ, ಇದು ಅವರು ಜ್ಯೋತಿಷ್ಯರನ್ನು ಕೇಳಿ, ಸಾಧು ಸಂತರ ಸಲಹೆಯನ್ನು ಕೇಳಿ ಹೇಳಿದಂತಹ ಸಂದೇಶ ಖಂಡಿತ ಅಲ್ಲ. ಹಾಗೆ ನೋಡಿದರೆ ನಾನೂ ಹೆದರಿಸಿ ಹಣ ಮಾಡಬಹುದಿತ್ತು. ಇದೊಂದು PEOPLE MOVEMENT.
ಆದರೆ ಇಲ್ಲೊಂದು ದೈವೀ ಪ್ರೇರಣೆ ಇದೆ. ಕೆಲ ಜನರಿಗೆ ದೇಶದ ನಾಶ ಬೇಕಾಗಿರಬಹುದು. ಆದರೆ ಭಗವಂತನಿಗೆ ಬೇಕಾಗಿಲ್ಲ. ನಾಳೆಯ ದಿನ ಮಕರ ರಾಶಿಯಲ್ಲಿ ಶನಿ ಕುಜರು ಉತ್ತರಾಷಾಢ ನಕ್ಷತ್ರದಲ್ಲಿ ಗುರುವಿನೊಡನೆ(ಗುರುವೂ ಅದೇ ನಕ್ಷತ್ರದಲ್ಲಿ ಇದ್ದಾನೆ) ಯುದ್ಧ ಸ್ಥಿತಿಯಲ್ಲಿದ್ದಾನೆ. ಶನಿಯು ಆಯು ಕಾರಕ. ಕುಜನು ನೈಸರ್ಗಿಕ ಕುಂಡಲಿ ಮೇಷ ರಾಶಿಯ ಮರಣ ಕಾರಕ. ಇದನ್ನು ತಡೆಯಲು ಗುರು ಒಬ್ಬನೇ ಸಮರ್ಥ. ಆದರೆ ಗುರುವೂ ದುರ್ಬಲ. ಅಲ್ಲದೆ ನಾಳೆ ದ್ವಾದಶಿ. ದ್ವಾದಶಿ ಅರ್ಕವಾಸರ ಯುಕ್ತಾಯಾಂ ದಗ್ಧ ಯೋಗಃ. ಅಂದರೆ ಸೂತಕ ಸೂಚನೆ. ಕುಜ, ಶನಿ, ಗುರು ಈ ಮೂರೂ ಗ್ರಹರೂ ನೀಗಡ(ಬಂಧನ) ದ್ರೇಕ್ಕಾಣದಲ್ಲಿದ್ದು ಭೂಮಿಗೆ ಯಾವ ಫಲವನ್ನೂ ನೀಡಲು ಅಸಮರ್ಥರಾಗುತ್ತಾರೆ. ಆಗ ಇಂತಹ ದುರ್ಯೋಗವೂ ಬಂದರೆ ಅವಗಡ ನಿಶ್ಚಿತ. ಇದು ಜ್ಯೋತಿಷ್ಯ ವಿಮರ್ಷೆ. ಹಾಗೆಂದು ಯಾವ ಜ್ಯೋತಿಷ್ಯರೂ ಪೂರ್ವಭಾವಿಯಾಗಿ ಹೇಳಲೂ ಆಗುವುದಿಲ್ಲ.
ನಾನು ಶನಿಯ ಫಲ ಹೇಳುವಾಗ,’ ಮೋದಿಯವರು CAA ವಿಚಾರ ಒಮ್ಮೆ ತೆಗೆದುಕೊಂಡ ನಿರ್ಧಾರವನ್ನು ಹಿಂದೆ ತೆಗೆದುಕೊಳ್ಳುವ ಜಾಯಮಾನದವರಲ್ಲ. ಗೌರವಾನ್ವಿತ, ಸಂಸದರು, ರಾಷ್ಟ್ರಪತಿಗಳ ಅಂಕಿತ ಬಿದ್ದರೆ ಮುಗಿಯಿತು. ಒಂದು ವೇಳೆ ವಾಪಾಸ್ ತೆಗೆದುಕೊಳ್ಳುವುದಿದ್ದರೂ ಇದು ಅಸಾಧ್ಯ. ನೀರಿಗೆ ಉಪ್ಪು ಹಾಕಿದಂತೆ. ಇದರ ವಿಚಾರದಲ್ಲಿ ಪ್ರಜೆಗಳು ಪ್ರತಿಭಟನೆ ನಿಲ್ಲಿಸದಿದ್ದರೆ, ಮೋದಿಗೆ ಪರವಾಗಿ ಇನ್ನೊಂದು ಅಸ್ತ್ರ ಬರಲಿದೆ’ ಎಂದಿದ್ದೆ. ಅದುವೇ ಕರೋನಾಸ್ತ್ರವಾಗಿ ಬಂದಿದೆ. ಈಗ ಎಲ್ಲಿದೆ ಪ್ರತಿಭಟನೆ, ಮೆರವಣಿಗೆ? ಇದು ದೇವರೇ ಇಳಿಸಿದ್ದು. ಆದರೆ ಈ ಸಂದರ್ಭದಲ್ಲಿ ಇಂತಹ ಯೋಗವೂ ಬಂದು ಬಿಟ್ಟರೆ ಅಲ್ಲಿಗೆ ಕಥೆ ಮುಗಿಯುತ್ತೆ ಎಂದು ದೇವರು, ಮೋದಿಗರಿವಿಲ್ಲದೆ ದೀಪ ಬೆಳಗಿಸಿ ದೋಷ ಶಮನಕ್ಕೆ ಒಂದು ಸಂದೇಶ ನೀಡಿದರೇ ಹೊರತು, ಯಾವ ಜ್ಯೋತಿಷ್ಯಾಧಾರ ಇಲ್ಲ.
ಒಬ್ಬನಿಗೆ ನಾಳೆ ಸಾವು ಖಚಿತ ಎಂದಿದ್ದರೆ, ಬದುಕುವ ಯೋಗಕ್ಕೂ ದೈವ ಬಲ ಇದ್ದರೆ ಆದಿನ ಅವನನ್ನು ಮನೆಯಿಂದ ಹೊರ ಹೋಗದಂತೆ ಯಾವುದೋ ಕಾರಣಗಳು ಬಂಧಿಸಬಹುದು. ಅದೇ ರೀತಿ ದೇಶಕ್ಕೆ ಅಪಾಯ ಬರುವುದನ್ನು ತಡೆಯಲು ಮೋದಿಯ ಮೂಲಕ ದೀಪ ಪ್ರಜ್ವಾಲನೆಯ ಸಂದೇಶ ನೀಡಿರಬಹುದು. ಹಾಗಾಗಿ ಕಪೋಲ ಕಲ್ಪಿತ ನಿಲ್ಲಿಸಿ. ಪ್ರಧಾನಿಯ ಸಂದೇಶದಂತೆ, ಅದನ್ನು ಪ್ರಶ್ನಿಸದೆ ಕಾರ್ಯಪ್ರವೃತ್ತರಾಗಿ. ಕಪೋಲ ಕಲ್ಪತ ವಿಚಾರಗಳನ್ನು ಹೇಳಿ ರೋಗ ಇಲ್ಲವರನ್ನೂ ಸಹ ಸಾಯಿಸಬೇಡಿ…. ವಚನಾತ್ ಪ್ರವೃತ್ತಿಃ ವಚನಾತ್ ನಿವೃತ್ತಿಃ
Get in Touch With Us info@kalpa.news Whatsapp: 9481252093
Discussion about this post