ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಗಾಝಿಯಾಬಾದ್: ಸಾಮೂಹಿಕ ಸಭೆಯಲ್ಲಿ ಪಾಲ್ಗೊಂಡು ಕ್ವಾರಂಟೈನ್’ನಲ್ಲಿರುವ ತಬ್ಲಿಘಿ ಜಮಾತ್ ಮಸೀದಿ ಸದಸ್ಯರು ನರ್ಸ್‌ಗಳ ಮೇಲೆ ಅಶ್ಲೀಲ ದೌರ್ಜನ್ಯ ನಡೆಸಿರುವುದು ಸತ್ಯ ಎಂಬ ಅಂಶ ತನಿಖೆಯಿಂದ ಹೊರಬಿದ್ದಿದೆ.
ಗಾಝಿಯಾಬಾದ್ ಎಡಿಎಂ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಮಾರ್ಗದರ್ಶನದಲ್ಲಿ ಜಂಟಿ ತನಿಖೆ ನಡೆದಿದ್ದು, ಇದರ ವರದಿಯಲ್ಲಿ ಝೀ ನ್ಯೂಸ್ ಪ್ರಕಟಿಸಿದೆ.
ದೌರ್ಜನ್ಯಕ್ಕೆ ಒಳಗಾದ ನರ್ಸ್‌ಗಳು ಜಂಟಿ ತನಿಖಾ ತಂಡದ ಅಧಿಕಾರಿಗಳ ಮುಂದೆ ಹೇಳಿಕೆ ದಾಖಲಿಸಿದ್ದು, ಈ ಹಿನ್ನೆಲೆಯಲ್ಲಿ ತಬ್ಲಿಘಿ ಜಮಾತ್’ನ ಐವರು ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ತನಿಖಾ ವರದಿ ಜಿಲ್ಲಾ ದಂಡಾಧಿಕಾರಿಯವರಿಗೆ ಸಲ್ಲಿಕೆಯಾಗಿದ್ದು, ತತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.
ಆಸ್ಪತ್ರೆಯಲ್ಲಿ ಬಂಧನಕ್ಕೊಳಗಾದ ಜಮಾಅತ್‌ನ ಕೆಲವು ಸದಸ್ಯರು ದಾದಿಯರೊಂದಿಗೆ ಕೆಟ್ಟದಾಗಿ ವರ್ತಿಸಿದ್ದಾರೆ, ಅಶ್ಲೀಲ ಮಾತುಗಳನ್ನಾಡಿದರು ಮತ್ತು ಆಸ್ಪತ್ರೆಯಲ್ಲಿ ಬೆತ್ತಲೆಯಾಗಿ ಸುತ್ತಾಡಿದರು ಎಂದು ನರ್ಸ್‌ಗಳು ಆರೋಪಿಸಿದ್ದನ್ನು ಇಲ್ಲಿ ನೆನಪಿಸಬಹುದು.
Get in Touch With Us info@kalpa.news Whatsapp: 9481252093
















