ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಇಡಿಯ ನಾಡಿನಲ್ಲಿ ನಿತ್ಯೋತ್ಸವ ಜ್ಯೋತಿಯನ್ನು ಪ್ರಜ್ವಲಿಸಿ, ಕರುನಾಡಿನ ಕೀರ್ತಿಯನ್ನು ಮುಗಿಲೆತ್ತರಕ್ಕೆ ಹಾರಿಸಿ, ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದ ಹಿರಿಯ ಸಾಹಿತಿ ನಿಸಾರ್ ಅಹಮದ್ ಇಹಲೋಕ ತ್ಯಜಿಸಿದ್ದಾರೆ.
ಬೆಂಗಳೂರಿನ ದೇವನಹಳ್ಳಿಯಲ್ಲಿ 1956ರ ಫೆ.3ರಂದು ಜನಿಸಿದ ಪ್ರೊ.ನಿಸಾರ್ ಅಹಮದ್ ಅವರು, 1959ರಲ್ಲಿ ಭೂವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು. 1994ರ ವರೆಗೆ ವಿವಿಧ ಸರಕಾರಿ ಕಾಲೇಜುಗಳಲ್ಲಿ ಅಧ್ಯಾಪಕ ಹಾಗೂ ಪ್ರಾಧ್ಯಾಪಕರಾಗಿ ಕೆಲಸ ಮಾಡಿ ನಿವೃತ್ತರಾದರು.
ನಿಸಾರ್ ಅಹಮದ್ 1 ಅವರ ಸಾಹಿತ್ಯಾಸಕ್ತಿ 10ನೇ ವಯಸ್ಸಿನಲ್ಲೇ ಆರಂಭವಾಯಿತು. ಜಲಪಾತದ ಬಗ್ಗೆ ಬರೆದ ಕವನ ಕೈಬರಹದ ಪತ್ರಿಕೆಯಲ್ಲಿ ಅಚ್ಚಾಗಿತ್ತು. ಅವರು ಇಲ್ಲಿಯವರೆಗೆ (2018) 21 ಕವನ ಸಂಕಲನಗಳು, 14 ವೈಚಾರಿಕೆ ಕೃತಿಗಳು, 5 ಮಕ್ಕಳ ಸಾಹಿತ್ಯ ಕೃತಿಗಳು, 5 ಅನುವಾದ ಕೃತಿಗಳು, 13 ಸಂಪಾದನಾ ಗ್ರಂಥಗಳನ್ನು ಹೊರತಂದಿದ್ದಾರೆ.
ಮನಸು ಗಾಂಧಿಬಜಾರು ಹಾಗೂ ನಿತ್ಯೋತ್ಸವ ಇವು ಪ್ರಸಿದ್ಧ ಕವನ ಸಂಕಲನಗಳಾಗಿದ್ದು,. ಸಂವೇದನಾಶೀಲ ಹಾಗೂ ಜನಪ್ರಿಯ ಕವಿ ಎಂದೇ ಖ್ಯಾತರಾದವರು.
1978ರಲ್ಲಿ ಇವರ ಮೊದಲ ಭಾವಗೀತೆಗಳ ಧ್ವನಿಮುದ್ರಿಕೆ ನಿತ್ಯೋತ್ಸವ ಹೊರಬಂದು, ಕನ್ನಡ ಲಘುಸಂಗೀತ (ಸುಗಮ ಸಂಗೀತ) ಕ್ಷೇತ್ರದಲ್ಲಿ ಭರ್ಜರಿ ಯಶಸ್ಸು ಪಡೆಯಿತು. ಇದುವರೆಗೂ 13 ಧ್ವನಿಸುರುಳಿಗಳ ಮೂಲಕ ಅವರು ರಚಿಸಿದ ಕವನಗಳು, ಗೀತೆಗಳು ಸಂಗೀತದೊಂದಿಗೆ ಪ್ರಚುರಗೊಂಡಿವೆ.
ಕುರಿಗಳು ಸಾರ್ ಕುರಿಗಳು, ರಾಜಕೀಯ ವಿಡಂಬನೆ ಕವನ, ಭಾರತವು ನಮ್ಮ ದೇಶ (ಸರ್ ಮೊಹಮದ್ ಇಕ್ಬಾಲ್ ಅವರ ಸಾರೆ ಜಹಾಂ ಸೆ ಅಚ್ಚಾ ಕವನದ ಕನ್ನಡ ಭಾಷಾಂತರ). ಬೆಣ್ಣೆ ಕದ್ದ ನಮ್ಮ ಕೃಷ್ಣ ಕವನ ಕವಿಯ ಬಹುಮುಖ ಪ್ರತಿಭೆಗೆ ಸಾಕ್ಷಿಯಾಗಿವೆ.
ನಿಸಾರರ ಕವನ ಸಂಕಲನಗಳು
- ಮನಸು ಗಾಂಧಿ ಬಜಾರು (1960)
- ನೆನೆದವರ ಮನದಲ್ಲಿ (1964)
- ಸುಮಹೂರ್ತ (1967)
- ಸಂಜೆ ಐದರ ಮಳೆ (1970)
- ನಾನೆಂಬ ಪರಕೀಯ (1972)
- ಆಯ್ದ ಕವಿತೆಗಳು (1974)
- ನಿತ್ಯೋತ್ಸವ (1976)
- ಸ್ವಯಂ ಸೇವೆಯ ಗಿಳಿಗಳು (1977)
- ಅನಾಮಿಕ ಆಂಗ್ಲರು(1982)
- ಬರಿರಂತರ (1990)
- ಸಮಗ್ರ ಕವಿತೆಗಳು (1991)
- ನವೋಲ್ಲಾಸ (1994)
- ಆಕಾಶಕ್ಕೆ ಸರಹದ್ದುಗಳಿಲ್ಲ (1998)
- ಅರವತ್ತೈದರ ಐಸಿರಿ(2001)
- ಸಮಗ್ರ ಭಾವಗೀತೆಗಳು(2001)
- ಪ್ರಾತಿನಿಧಿಕ ಕವನಗಳು(2002)
- ನಿತ್ಯೋತ್ಸವ ಕವಿತೆ 4
ಶ್ರೀಯುತರ ಗದ್ಯ ಸಾಹಿತ್ಯ
- ’ಅಚ್ಚುಮೆಚ್ಚು’
- ’ಇದು ಬರಿ ಬೆಡಗಲ್ಲೊ ಅಣ್ಣ’
- ಷೇಕ್ಸ್ ಪಿಯರ್‌ನ ಒಥೆಲ್ಲೊದ ಕನ್ನಡಾನುವಾ
ಪ್ರಶಸ್ತಿ ಪುರಸ್ಕಾರಗಳು
- 2006 ರ ಮಾಸ್ತಿ ಪ್ರಶಸ್ತಿ
- ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
- ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
- ಗೊರೂರು ಪ್ರಶಸ್ತಿ
- ಅಕೃ ಪ್ರಶಸ್ತಿ
- ಕೆಂಪೇಗೌಡ ಪ್ರಶಸ್ತಿ
- ಪಂಪ ಪ್ರಶಸ್ತಿ
- 1981 ರ ರಾಜ್ಯೋತ್ಸವ ಪ್ರಶಸ್ತಿ
- 2003 ರ ನಾಡೋಜ ಪ್ರಶಸ್ತಿ
- 2006 ರ ಅರಸು ಪ್ರಶಸ್ತಿ
- 2006 ಡಿಸೆಂಬರಿನಲ್ಲಿ ಶಿವಮೊಗ್ಗದಲ್ಲಿ ನಡೆದ 73ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು
Get in Touch With Us info@kalpa.news Whatsapp: 9481252093
Discussion about this post