ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಮೈಸೂರು: ಕನ್ನಡ ನಾಡಿನಲ್ಲಿ ನಿತ್ಯೋತ್ಸವದ ವೈಭವ ಸಾರಿದ ಹಿರಿಯ ಸಾಹಿತಿ ಪ್ರೊ.ಕೆ.ಎಸ್. ನಿಸಾರ್ ಅಹ್ಮದ್ ನಮ್ಮನ್ನಗಲಿದ್ದು, ಇಡಿಯ ಸಾಹಿತ್ಯ ಲೋಕವನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ.
ಇಂತಹ ಒಂದು ಸಂದರ್ಭದಲ್ಲಿ ಮೈಸೂರಿನ ಯುವ ಬರಹಗಾರ, ಅಂಕಣಕಾರ ಪುನೀತ್ ಜಿ. ಕೂಡ್ಲೂರು ಅವರು ನಿಸಾರರೊಂದಿಗಿನ ತಮ್ಮ ಒಡನಾಟವನ್ನು ಬರೆದಿದ್ದಾರೆ ಓದಿ…
ಅದು 2015ರ ಮಾರ್ಚ್ 22ರ ಸಂಜೆ ನನ್ನ ಪಾಲಿನ ಅದೃಷ್ಠದ ಗಳಿಗೆ. ಮೈಸೂರಿನ ನಿತ್ಯೋತ್ಸವದಲ್ಲಿ ನಿಸಾರ್ ಅಹ್ಮದ್ ಅವರನ್ನು ಭೇಟಿಯಾಗುವ ಸುವರ್ಣಾವಕಾಶ ಒದಗಿತ್ತು. ಮೊದಲಿಂದಲೂ ಅವರ ಓದುಗ ಅಭಿಮಾನಿಯಾದ ನನಗೆ ಅವರ ಮೇಲೆ ವಿಶೇಷ ಗೌರವ, ಅವರನ್ನು ಭೇಟಿ ಮಾಡಲು ಹೋದಾಗ ಸ್ಥಳದಲ್ಲಿಯೇ ಅವರ ಮೇಲೆಯೇ ಒಂದು ಕವಿತೆ ಬರೆದು ಅವರ ಕೈಗೆ ಒಪ್ಪಿಸಿದೆ.
ಓದಿ ಸಂತಸ ಗೊಂಡ ಕವಿಗಳು ಜೇಬಿನಿಂದ ಚೀಟಿ ತೆಗೆದು ಸಹಿ ಹಾಕಿ ಅವರ ಫೋನ್ ನಂಬರ್ ಬರೆದು ನಾಳೆ ಸಂಜೆ ಕರೆ ಮಾಡು ಎಂದರು. ಕರೆ ಮಾಡಿದಾಗ ಬಹಳ ಪರಿಚಯ ಇರುವ ವ್ಯಕ್ತಿಯ ಹಾಗೆ ಮಾತನಾಡಿಸಿದರು. ನನ್ನ ಹವ್ಯಾಸ ಬರಹ ಎಲ್ಲವನ್ನೂ ಆಲಿಸಿದರು, ಲೇಖನಗಳನ್ನು ಕಳಿಸಿದಾಗ ಓದಿ ಅಭಿನಂದಿಸುತ್ತಿದ್ದರು. ಇಡಿಯ ದೇಶವೇ ಗೌರವಿಸುವ ಶ್ರೇಷ್ಠ ಸಾಹಿತಿ, ನನ್ನಂತಹ ಸಣ್ಣವನೊಂದಿಗೂ ಸಂಭಾಷಿಸುತ್ತಿದ್ದ ರೀತಿ ನಿಜಕ್ಕೂ ಇಡಿಯ ಸಾಹಿತ್ಯ ಲೋಕಕ್ಕೆ ಮಾದರಿ…
Get in Touch With Us info@kalpa.news Whatsapp: 9481252093
Discussion about this post