ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನವದೆಹಲಿ: ಜಮ್ಮು ಕಾಶ್ಮೀರದ ಗಡಿ ಪ್ರದೇಶದ ಎಲ್’ಒಸಿ ರೇಖೆಯಲ್ಲಿ ಗೂಗಲ್ ತನ್ನ ಮ್ಯಾಪ್’ನಿಂದ ತೆಗೆದುಹಾಕಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಚರ್ಚಿತ ವಿಚಾರವಾಗಿದೆ.
ಎಲ್’ಒಸಿ ಎಂದು ಗೂಗಲ್ ಮ್ಯಾಪ್ ಸರ್ಚ್ ಮಾಡಿದರೆ ನಿಯಂತ್ರಣ ರೇಖೆ ಕಾಣಿಸದೇ ಜಮ್ಮು ಕಾಶ್ಮೀರ ಸಂಫೂರ್ಣವಾಗಿ ಗೋಚರಿಸುತ್ತಿದೆ. ಇದು ಭಾರತದ ಪರಿಷ್ಕೃತ ನಕ್ಷೆಯಾಗಿದ್ದು, ಎಲ್’ಒಸಿಯನ್ನು ಉಳಿಸದೇ ಭಾರತವನ್ನು ಸಂಫೂರ್ಣವಾಗಿ ತೋರಿಸುತ್ತಿದ್ದು, ಇದು ದೇಶವಾಸಿಗಳಲ್ಲಿ ಹೊಸ ಭರವಸೆಯನ್ನು ಹುಟ್ಟುಹಾಕಿದೆ.
https://www.google.com/maps/search/line+of+control+jammu+kashmir/@33.7187362,74.3168463,7z
ಗೂಗಲ್‌ನಲ್ಲಿ ಗೋಚರಿಸುವ ನಕ್ಷೆಗಳನ್ನು ವಿಭಿನ್ನ ಭೌಗೋಳಿಕ ಸ್ಥಳಗಳ ಪ್ರಕಾರ ಕಸ್ಟಮೈಸ್ ಮಾಡಲಾಗಿದೆ. ವಿವಾದಿತ ಗಡಿಗಳನ್ನು ಡ್ಯಾಶ್ ಮಾಡಿದ ಬೂದು ರೇಖೆಯಂತೆ ಪ್ರದರ್ಶಿಸಲಾಗುತ್ತದೆ. ಒಳಗೊಂಡಿರುವ ಸ್ಥಳಗಳು ಗಡಿಯನ್ನು ಒಪ್ಪುವುದಿಲ್ಲ ಎಂದು ಗೂಗಲ್ ನಕ್ಷೆಗಳ ಅಧಿಕೃತ ಪುಟದಲ್ಲಿ ಮಾನದಂಡವನ್ನು ಉಲ್ಲೇಖಿಸಲಾಗಿದೆ.
ಇನ್ನು, ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಇದು ಭಾರತದ ಮೊದಲ ಜಯ ಎಂದು ಬಿಂಬಿಸಲಾಗುತ್ತಿದ್ದು, ಎಲ್’ಒಸಿ ಭಾರತದ್ದೇ ಎಂಬುದಕ್ಕೆ ಇದು ಸೂಚನೆ ಎಂಬ ಕುರಿತಾಗಿ ಚರ್ಚೆಗಳು ನಡೆಯುತ್ತಿವೆ.
Get in Touch With Us info@kalpa.news Whatsapp: 9481252093
















