ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಲಾಕ್ ಡೌನ್ ಕೊಂಚ ಸಡಿಲಿಕೆ ಮಾಡಿ ಬೆಂಗಳೂರಿನಲ್ಲಿ ಸಿಲುಕಿದ್ದ ಉತ್ತರ ಭಾರತದ ಹಲವು ರಾಜ್ಯಗಳ ಜನರನ್ನು ಅವರ ಊರುಗಳಿಗೆ ತಲುಪಿಸುವ ಸಲುವಾಗಿ ರಾಜ್ಯ ರಾಜಧಾನಿಯಿಂದ ಇಂದು ಹಲವು ವಿಶೇಷ ರೈಲುಗಳು ಹೊರಟವು.
643 ಪ್ರಯಾಣಿಕರನ್ನು ಹೊತ್ತ ವಿಶೇಷ ರೈಲು ಚಿಕ್ಕಬಾಣಾವರದಿಂದ ಹಿಮಾಚಲ ಪ್ರದೇಶಕ್ಕೆ ಪ್ರಯಾಣ ಆರಂಭಿಸಿದರೆ, 1520 ಪ್ರಯಾಣಿಕರನ್ನು ಹೊತ್ತ ರೈಲು ಮಾಲೂರಿನಿಂದ ಬಿಹಾರಕ್ಕೆ ತೆರಳಿತು.
ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆ, ಮಾಸ್ಕ್ ಧರಿಸಿದ್ದು ಸೇರಿದಂತೆ ರೈಲು ನಿಲ್ದಾಣಗಳಲ್ಲಿ ಅತ್ಯಂತ ಶಿಸ್ತುಬದ್ದವಾಗಿತ್ತು. ರೈಲ್ವೆ ಪೊಲೀಸರು ಹೆಜ್ಜೆ ಹೆಜ್ಜೆಗೂ ಜಾಗ್ರತೆ ವಹಿಸಿದ್ದು, ಪ್ರತಿ ಪ್ರಯಾಣಿಕರಿಗೂ ತಾವು ಪಾಲಿಸಬೇಕಾದ ನಿಯಮಗಳನ್ನು ತಿಳಿಸಿ ಹೇಳುತ್ತಿದ್ದರು.
ಮಾಲೂರಿನಿಂದ ವಿಶೇಷ ರೈಲು ಬಿಹಾರಕ್ಕೆ ಪ್ರಯಾಣ ಆರಂಭಿಸುತ್ತಿದ್ದಂತೆಯೇ ನಿಲ್ದಾಣದಲ್ಲಿದ್ದ ಕೊರೊನಾ ವಾರಿಯರ್ಸ್ ಹಾಗೂ ರೈಲ್ವೆ ಪೊಲೀಸರು ಭಾರತ್ ಮಾತಾಕಿ ಜೈ ಎಂದು ಘೋಷಣೆ ಕೂಗಿ ಚಪ್ಪಾಳೆ ತಟ್ಟಿ ಬೀಳ್ಕೊಟ್ಟಿದ್ದು ವಿಶೇಷವಾಗಿತ್ತು.
Enthusiastic chants of Bharat mata ki Jai at #Malur as train leaves for #Barauni, Bihar@RailMinIndia @PiyushGoyalOffc @GMSWR @drmsbc#IndianRailways #Karnataka #IndiaFightsCorona #FightAgainstCorona #Bengaluru #ShramikSpecials #ShramikSpecialTrains pic.twitter.com/Q00HBnrfBs
— SouthWestern Railway (@SWRRLY) May 11, 2020
ಇನ್ನು, ಲಾಕ್ ಡೌನ್ ನಡುವೆಯೇ ತಮ್ಮೂರಿಗೆ ಪ್ರಯಾಣ ಆರಂಭಿಸಿರುವ ಪ್ರಯಾಣಿಕರು ಸಂತಸ ವ್ಯಕ್ತಪಡಿಸಿದ್ದು, ರೈಲ್ವೆ ಇಲಾಖೆ ಧನ್ಯವಾದ ಹೇಳಿದ್ದಾರೆ.
A passenger thanking Railways profusely!@RailMinIndia@PiyushGoyalOffc @SureshAngadi_ @GMSWR @drmsbc#IndianRailways #Karnataka #ShramikSpecials #ShramikSpecialTrain #Bengaluru #CoronaWarriors #FightAgainstCorona #IndiaFightsCorona #ServingtheNation pic.twitter.com/BM8cgHBblV
— SouthWestern Railway (@SWRRLY) May 11, 2020
Get in Touch With Us info@kalpa.news Whatsapp: 9481252093
Discussion about this post