ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ಕೋವಿಡ್ 19 ನಿಯಂತ್ರಣ ಹಿನ್ನೆಲೆ ವಿಧಿಸಲಾಗಿರುವ ಲಾಕ್‍ಡೌನ್‍ನಿಂದ ಜಿಲ್ಲೆಯ ಹೂವಿನ ಬೆಳೆಗಾರರಿಗೆ ಉಂಟಾದ ನಷ್ಟಕ್ಕೆ ಪರಿಹಾರ ನೀಡಲು ಅರ್ಹ ಫಲಾನುಭವಿಗಳಿಂದ ತೋಟಗಾರಿಕೆ ಇಲಾಖೆ ಅರ್ಜಿ ಆಹ್ವಾನಿಸಿದೆ.
ಕೂರೋನ ವೈರಸ್ ಹರಡದಂತೆ ತಡೆಯುವ ನಿಟ್ಟಿನಲ್ಲಿ ಲಾಕ್‍ಡೌನ್ ಹಿನ್ನೆಲೆ (ಮಾರ್ಚ್ 24ರಿಂದ ಮೇ 15 ರವರೆಗೆ) ಎಲ್ಲಾ ಬಗೆಯ ಹೂವು ಬೆಳೆ ಕಟಾವಿಗೆ ಬಂದು ಬೇಡಿಕೆ ಇಲ್ಲದೇ, ಬೆಲೆ ಕುಸಿತದಿಂದ ನಷ್ಟ ಅನುಭವಿಸಿದ ಹೂವು ಬೆಳೆಗಾರರು ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ.
ಪ್ರತಿ ಫಲಾನುಭವಿಗೆ 1 ಹೆಕ್ಟೇರಿಗೆ ರೂ.25000 (ಇಪ್ಪತ್ತೈದು ಸಾವಿರ ಮಾತ್ರ)ರಂತೆ ಗರಿಷ್ಟ ಒಂದು ಹೆಕ್ಟೇರ್‍ವರೆಗೆ ಪರಿಹಾರ ನೀಡಲಾಗುವುದು. ಮೇ 13 ರಿಂದ 28 ರವರೆಗೆ ಚಳ್ಳಕೆರೆ ತೋಟಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಸಲ್ಲಿಸಬೇಕು. ಅರ್ಜಿಯೊಂದಿಗೆ 1.ಪಹಣಿ, ಆಧಾರ್ ಕಾರ್ಡ್, ರೈತರ ಬ್ಯಾಂಕ್ ಖಾತೆ ಪುಸ್ತಕದ ಜೆರಾಕ್ಸ್ ಪ್ರತಿ ಮತ್ತು ದೂರವಾಣಿ ಸಂಖ್ಯೆಯನ್ನು ನಮೂದಿಸಬೇಕೆಂದು ಚಳ್ಳಕೆರೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಆರ್. ವಿರುಪಾಕ್ಷಪ್ಪ ತಿಳಿಸಿದ್ದಾರೆ.
Get in Touch With Us info@kalpa.news Whatsapp: 9481252093














