ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವ್ ಬಂದಿರುವ ಗ್ರಾಮಗಳಿಗೆ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಅವರು ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪಾಸಿಟಿವ್ ಬಂದಿರುವ ಗ್ರಾಮಗಳಾದ ಬಾಳೆಕೊಪ್ಪ ಹಾಗೂ ತರಲಘಟ್ಟಗಳಿಗೆ ಭೇಟಿ ನೀಡಿದ ಅವರು, ಸದ್ಯದ ಪರಿಸ್ಥಿತಿಗಳನ್ನು ಅವಲೋಕಿಸಿದರು.
ಅಲ್ಲದೇ, ಮುಂದಿನ ನಿರ್ಧಾರಗಳ ಕುರಿತು ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಕಂದಾಯ ಇಲಾಖೆಯ ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತೆಯರೊಂದಿಗೆ ಪರಿಶೀಲನೆ ನಡೆಸಿ ಮುನ್ನೆಚ್ಚರಿಕೆಯಿಂದ ಕಾರ್ಯ ನಿರ್ವಹಣೆ ಕೈಗೊಳ್ಳುವಂತೆ ಮಾರ್ಗದರ್ಶನ ನೀಡಿದರು.
ಶಿವಮೊಗ್ಗ, ಶಿಕಾರಿಪುರ ತಹಶೀಲ್ದಾರರು ಜೊತೆಗಿದ್ದರು.
Get in Touch With Us info@kalpa.news Whatsapp: 9481252093
















