ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ತಾಲೂಕಿನ ಕಲಮರಹಳ್ಳಿ ಹಾಗೂ ಹುಲಿಕುಂಟೆ, ಬೋವಿಕಾಲೋನಿ ಗ್ರಾಮದಲ್ಲಿ ಬಿಸಿದ ಬಿರುಗಾಳಿಗೆ ಅಡಿಕೆ, ಪರಂಗಿ ಬೆಳೆ, ಗುಡಿಸಲುಗಳು, ಕುರಿ ಶೆಡ್ ಹಾಗೂ ದನದ ಕೊಟ್ಟಿಗೆ ಹಾನಿಗೊಳಗಾಗಿವೆ.
ಕಲಮರಹಳ್ಳಿ ಯಂಜೇರಪ್ಪ ಎಂಬ ರೈತನ ಜಮೀನಿನಲ್ಲಿ ಬೆಳೆಯಲಾಗಿದ್ದ 30 ಅಡಿಕೆ ಮರಗಳು ಬಿದ್ದಿದ್ದು, 1000 ಪಪ್ಪಾಯಿ ಗಿಡಗಳು ಬಾಗಿವೆ. ರಂಗಸ್ವಾಮಿ ಎನ್ನುವವರ ರೈತನ ತೋಟದಲ್ಲಿ 30 ಅಡಿಕೆ ಹಾಗೂ ತೆಂಗಿನ ಮರ ಬಿದ್ದಿವೆ.
ಜಾಲಿ ಗೊಲ್ಲರಹಟ್ಟಿಯಲ್ಲಿ ಸುಮಾರು 40 ಅಡಿಕೆ ಮರ ತೆಂಗಿನ ಮರ, ಬೇವಿನ ಮರಗಳು ನೆಲಕ್ಕುರುಳಿದ್ದರೆ, ತಿಪ್ಪೇಸ್ವಾಮಿ ಎನ್ನುವವರ ವಾಸದ ಶೆಡ್ ಬಿದ್ದಿದೆ. ಹುಲಿಕುಂಟೆ ಭೋವಿಕಾಲೋನಿಯಲ್ಲಿ ಹನುಮಂತಪ್ಪ ಎನ್ನುವವರ ಕುರಿ ಶೆಡ್ ಬಿದ್ದಿದ್ದು, ಆದಿನಾರಾಯಣ ಎನ್ನುವ ರೈತನ ದನದ ಶೆಡ್ ಗಾಳಿಗೆ ಹಾರಿಹೋಗಿದೆ. ನಾರಾಣಮ್ಮ ಎನ್ನುವವರ ವಾಸದ ಮನೆ ಶೀಟ್ ಒಡೆದುಹೋಗಿದ್ದು, ಚಂದ್ರಪ್ಪ ಬಯಲಪ್ಪ ಎನ್ನುವ ರೈತನ ಈರುಳ್ಳಿ ಶೆಡ್ ಬಿದ್ದು ನಷ್ಟವಾಗಿದೆ.
ಅದೃಷ್ಟವಶಾತ್ ಯಾವುದೇ ಪ್ರಾಣಿಹಾನಿ ಸಂಭವಿಸಿಲ್ಲ. ಹಾನಿಗೊಳಗಾದ ಜಮೀನುಗಳಿಗೆ ತೋಟಗಾರಿಕೆ ಸಹಾಯಕ ನಿರ್ದೇಶಕ ಆರ್. ವಿರೂಪಾಕ್ಷಪ್ಪ, ಸಹಾಯಕ ತೋಟಗಾರಿಕಾ ಅಧಿಕಾರಿ ರಾಘವೇಂದ್ರ, ಗ್ರಾಮ ಲೆಕ್ಕಿಗ ಕಾಡೇಶ ಗಾಯಕವಾಡ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
Get in Touch With Us info@kalpa.news Whatsapp: 9481252093
Discussion about this post