ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಗಾಯತ್ರೀ. ಮೂಲ ಮೂಲಿಯಲ್ಲಿ ಸೇರಿದರೆ, ಮೂಲವನ್ನು ಆಶ್ರಯಿಸಿದ ಮಹಲ್ ಕೆಳಕ್ಕುರುಳುವದರಲ್ಲಿ ಸಂಶಯವೇ ಇಲ್ಲ. ಆ ಕಾರಣದಿಂದಾಗಿಯೇ ಇಂದಿನ ಬ್ರಾಹ್ಮಣ ಯುವಕರು ಕೆಳಕ್ಕುರಳಿದ್ದು. ಸಕಲಕ್ಕೆ ಮೂಲವಾದ ಗಾಯತ್ರಿಯನ್ನು ಮೂಲೆಗುಂಪು ಮಾಡಿದ್ದೇ ಮೂಲಕಾರಣ.
ಇಂದು ಪುನಹ ಗಾಯತ್ರಿಯನ್ನು ಮೂಲೆ ಇಂದ ಹೊರತರಬೇಕಾದ ಆವಷ್ಯಕತೆ ಇದೆ. ತರುವ ಮನವರಿಕೆ ಯುವಕರಿಗೆ ಆಗಬೇಕು. ಅನೇಕ ಜ್ಙಾನಿಗಳ ಹಿತೋಪದೇಶದಿಂದ ಆ ಕೆಲಸವೂ ಆಗ್ತಾ ಇದೆ. ಉಪನಿಷತ್ತು ಬಹಳ ಸುಂದರವಾಗಿ ಗಾಯತ್ರಿಯ ಮಹತಿಯನ್ನು ತಿಳಿಸುತ್ತದೆ.
1) ಗಾಯತ್ರೀ ಜಪ ದೇವರಿಗೆ ಭೋಜನದಂತೆ. ಅಂದರೆ ಗಾಯತ್ರೀ ದೇವರಿಗೆ ಅನ್ನವಿದ್ದಂತೆ. ಅನ್ನದಿಂದ ನಮಗೆ ಹೇಗೆ ಪಪ್ರೀತಿಯೋ, ಹಾಗೆ ದೇವರಿಗೆ ಗಾಯತ್ರೀಜಪದಿಂದಲೇ ಪ್ರೀತಿ. ಪ್ರೀತನಾದ ದೇವರು ಎಲ್ಲಿದ್ದರೂ ನಾವು ಮಹಾಬಲಿಷ್ಠರೇ. ಅಪ್ರೀತನಾದ ದೇವರು ಪಕ್ಕದಲ್ಲಿ ಇದ್ದರೂ ನಾವು ಮಹಾ ದುರ್ಬಲರೇ.
2) ಗಾಯಂತಂ ತ್ರಾಯತೇ ಯಸ್ಮಾತ್ ಗಾಯತ್ರೀ ತ್ವಂ ತತಸ್ಮೃತಃ ಯಾರು ಗಾಯತ್ರಿಯನ್ನು ನಿರಂತರ ಕೊಂಡಾಡುತ್ತಾರೆಯೊ ಅವರನ್ನು ಯಾವಕಾಲಕ್ಕೂ ಕಾಪಾಡದೇ ಇರುವದಿಲ್ಲ. ಆದ್ದರಿಂದಲೇ ಈ ಮಂತ್ರಕ್ಕೆ ಗಾಯತ್ರೀ ಎಂದು ಹೆಸರು.
ಇಂದಿನ ತಮ್ಮ ರಕ್ಷಣೆ ತಮ್ಮಿಂದ ಆಗಲು ಸಾಧ್ಯವೇ ಇಲ್ಲ ಎಂದು ಮನವರಿಕೆಯಾಗಿ, ಅನಾಥರಂತೆ ಅಲೆಮಾರಿಗಳ ತರಹ ಬಿದ್ದಿದ್ದರೂ, ಈಗಿನ ಯುವಕರಿಗೆ ಇರುವ ಗಾಯತ್ರೀಯ ಬಗ್ಗೆ ತಾತ್ಸಾರವೇನಿದೆ ನಿಜವಾಗಲೂ ಹಾಸ್ಯಾಸ್ಪದ ಅನಿಸುವಂತಹದ್ದೇ. 2) ಅಲೇಪಂ ಸರ್ವಪಾಪಾಣಾಂ ವಿಶೇಷೇಣ ಪ್ರತಿಗ್ರಹಾತ್ ಕಂಡದ್ದು ಬೇಡುವದು. ಕಂಡದ್ದು ತಿನ್ನುವದು. ಕಂಡದ್ದು ಅನುಭವಿಸುವದು ಇದು ಯುವಕರ ಸಾಮಾನ್ಯ ಪ್ರವೃತ್ತಿ. ಇದು ಒಂದಾದರೆ ಧರ್ಮದ ಫಲಬೇಕು, ಧರ್ಮ ಮಾಡಲಾರೆ ಇದು ಮತ್ತೊಂದು. ಇವೆರಡೂ ಮಹಾ ಅನರ್ಥಾಕಾರಿ, ಮಹಾಮಾರಿ ಎಂದೂ, ಅದೂ ತಮಗೆ ಎಂಬ ಪರಿಜ್ಙಾನವೂ ಅಷ್ಟೇ ಅವರಿಗೆ ಮನವರಿಯಾಗಬೇಕು. ಕಂಡದ್ದು ಬೇಡುವದಿರಿಂದ ಪಾಪ. ಕಂಡದ್ದು ತಿನ್ನುವದರಿಂದ ಪಾಪ. ಕಂಡದ್ದು ಅನುಭವಿಸುವದರಿಂದ ಮಹಾಪಾಪ.
ಪಾಪವಿರುವಾಗ ಬೇಡಿದ್ದು ಸಿಗುವದು ದುರ್ಲ್ಲಭ. ಸಿಕ್ಕಿದ್ದು ಅನುಭವಿಸುವದು ಕಷ್ಟದ ಮಾತೇ. ಪಾಪಕಳೆದು ಕೊಳ್ಳಲು ಸುಲಭ ಮಾರ್ಗ ಗಾಯತ್ರೀ.
3) ಸಂಹರ್ತಾ ಸರ್ವದೋಷಾಣಾಂ ಅಗ್ನಿಸ್ಥಃ ಸರ್ವದಾಹಕಃಯುವಕರ ಏಳಿಗೆಗೆ ಪ್ರತಿಬಂಧಕವಾದ ಪಿತೃದೋಷ, ಮಾತೃದೋಷ, ಗ್ರಹದೋಷ, ಪ್ರೇತದೋಷ, ಸ್ತ್ರೀದೋಷ, ಕುಲದೇವತಾ ದೋಷ, ಸರ್ಪದೋಷ, ಬ್ರಾಹ್ಮಣದೋಷ, ಸಜ್ಜನದೋಷ, ದೇವತಾ ದೋಷ, ಗುರುದೋಷ, ಬ್ರಹ್ಮಹತ್ಯಾದಿ ಪಾಪಗಳಿಂದ ಉಂಟಾದ ದೋಷ, ಎಲ್ಲ ದೋಷಗಳನ್ನೂ ಭಸ್ಮಮಾಡಿ ಹಾಕುವ ಏಕೈಕ ಬ್ರಹ್ಮಾಸ್ತ್ರ ಗಾಯತ್ರೀ ಮಾತ್ರ. ಇದು ಶ್ರೀಮದಚಾರ್ಯರ ಮಾತು. ಪಾಲಿಸುವದು ನಮಗೆ ಬಿಟ್ಟಿದ್ದು. ಪಾಲಿಸಿದವರು ಜಗತ್ತಿನಲ್ಲಿಯೇ ಮಾನ್ಯರು. ಸುಖಿಗಳು. ಸಮೃದ್ಧರು.
ನಾಳೆ: ಉಪನಯನ ಎಂದರೇನು? ಲೇಖನ ಸರಣಿ-5: ಯಜ್ಞೋಪವೀತ(ಜನಿವಾರ)
Get in Touch With Us info@kalpa.news Whatsapp: 9481252093
Discussion about this post