ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಆರೋಗ್ಯ ವಿಮೆ ಏಕೆ ಮಾಡಿಸಬೇಕು? ನಾವು ಕಟ್ಟಿದ ಹಣ ವಾಪಸ್ಸು ಬರುವುದಿಲ್ಲ. ಕಂಪನಿಗಳು ಹಣ ಮಾಡುತ್ತವೆ ಎಂಬ ಅಭಿಪ್ರಾಯ ಸಾರ್ವಜನಿಕರಲ್ಲಿ ಇರುವುದು ಸಹಜ.
ಹಾಗೆಯೆ ಜೀವ ವಿಮೆಯಲ್ಲೂ ಸಹ ಪಾಶ್ಚಾತ್ಯ ದೇಶಗಳಲಿ ಕೇವಲ ಟರ್ಮ್ ಇನ್ಷೂರೆನ್ಸ್ ತೆಗೆದುಕೊಂಡು ನಿಜವಾದ ವಿಮೆ ಮಾಡಿಸುತ್ತಾರೆ. ನಮ್ಮ ದೇಶದಲ್ಲಿ ಜೀವವಿಮೆಯನ್ನು ಒಂದು ಹೂಡಿಕೆ ಎಂದು ಪರಿಗಣಿಸಿರುವುದರಿಂದ ಹೆಚ್ಚಿನ ಜನ ಕೇವಲ 10 ಪಟ್ಟು ಕವರೇಜ್‌ಗೆ ಪಾಲಿಸಿ ಮಾಡಿಸುತ್ತಾರೆ. ಆದರೆ, ಟರ್ಮ್ ಇನ್ಷೂರೆನ್ಸ್ 100 ಪಟ್ಟು ಕವರೇಜ್ ಇರುತ್ತದೆ ಹಾಗೂ ಪ್ರೀಮಿಯಂ ಕಡಿಮೆ ಇರುತ್ತದೆ. ಉಳಿದ ಹಣವನ್ನು ಡಿಪಾಜಿಟ್ ಅಥವಾ ಮ್ಯೂಚ್ಯುಯಲ್ ಫಂಡ್ಸ್’ಗಳಲ್ಲಿ ತೊಡಗಿಸಿ ಅಧಿಕ ಹಣ ಗಳಿಸಬಹುದು.
ಆರೋಗ್ಯ ವಿಮೆಯಲ್ಲಿ ನಾವು ಕಟ್ಟಿದ ಹಣ ವಾಪಾಸ್ಸು ಬರುವುದಿಲ್ಲ ಎಂಬ ಅಭಿಪ್ರಾಯವಿದೆ. ಆದರೆ, ನಾವು ವಾಹನ ವಿಮೆ ಮಾಡಿಸುತ್ತೇವೆ. ಅದರ ಪ್ರೀಮಿಯಂ ವಾಪಾಸ್ಸು ಬರುವುದಿಲ್ಲ. ಆದರೆ, ಅದನ್ನು ಸರ್ಕಾರ ಕಡ್ಡಾಯ ಮಾಡಿದೆ. ವಿದೇಶಗಳಲ್ಲಿ ವಿಮೆ ಕಡ್ಡಾಯವಾಗಿ ಮಾಡಿಸಬೇಕಾಗುತ್ತದೆ. ಆದರೆ, ಭಾರತದಲ್ಲಿ ಕೇವಲ ವಾಹನ ವಿಮೆ ಜನರಲ್ ವಿಮೆ ಕಡ್ಡಾಯವಾಗಿ ಮಾಡಿಸಬೇಕಾಗಿದೆ.
ಆರೋಗ್ಯ ವಿಮೆಯ ಪ್ರೀಮಿಯಂನ ಹೆಚ್ಚು ಕಡಿಮೆ 20ರಷ್ಟು ಕವರೇಜ್ ಸಿಗುತ್ತದೆ. ಈ ಕಾಲದಲ್ಲಿ ಸಣ್ಣ ಅಪಘಾತ, ಕಾಲು ಜಾರುವುದು, ಎಡವುವುದು, ಮರದಿಂದ ಬೀಳುವುದು, ವಾಹನ ಅಫಘಾತ, ಹಾವುಕಡಿತ, ಇನ್ಯಾವುದೇ ರೀತಿಯ ಅಫಘಾತಗಳಿಗೆ ಒಂದು ಸಣ್ಣ ಪ್ರೀಮಿಯಂಗೆ ರೂ. 1.00ಲಕ್ಷಗಳವರೆಗೆ ಕ್ಯಾಶ್‌ಲೆಸ್ ಚಿಕಿತ್ಸೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲೂ ದೊರೆಯುತ್ತದೆ.
ಆಧುನಿಕ ಯುಗದಲ್ಲಿ ನಾವು ಸೇವಿಸುವ ನೀರು, ಆಹಾರ ಹಾಗೂ ಉಸಿರಾಡುವ ಗಾಳಿ ಯಾವುದೂ ಶೇ.100ರಷ್ಟು ಶುದ್ಧವಾಗಿರುವುದಿಲ್ಲ. ಹಾಗೂ ಎಲ್ಲಾ ರೀತಿಯ ಕೆಲಸಗಾರರು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ. ರಕ್ತದೊತ್ತಡ, ಮಧುಮೇಹ ಮುಂತಾದ ಕಾಯಿಲೆಗಳಿಗೆ ತುತ್ತಾಗುತ್ತಾರೆ. ಅಲ್ಲದೆ ಹೆಚ್ಚಿನ ವಾಹನಗಳು ಸಂಚರಿಸುವುದರಿಂದ ಅನೇಕ ಕಾರಣಗಳಿಂದಾಗಿ ಅಪಘಾತಗಳು ಸಾಮಾನ್ಯವಾಗಿವೆ. ಹಾಗಾಗಿ ಯಾವ ಸಮಯದಲ್ಲಿ ಅಪಘಾತವಾಗುವುದೊ ತಿಳಿಯುವುದಿಲ್ಲ. ಒತ್ತಡದ ಬದುಕಿನಲ್ಲಿ ಹೃದಯಾಘಾತ ಸಹಜವೆನಿಸಿದೆ.
ಯಾರಿಗೇ ಆಗಲಿ, ಸ್ವತಃ ತಮಗೆ ಕಾಯಿಲೆಗಳಾಗಲೀ ಅಥವಾ ಇತರ ಕಷ್ಟಗಳು ಬರುವತನಕ ಅದರ ಕಷ್ಟ-ನಷ್ಟಗಳು ಅರ್ಥವಾಗುವುದು ಕಷ್ಟವೇ. ಶ್ರೀಮಂತ ವ್ಯಕ್ತಿಗಳಿಗೆ ಆಸ್ಪತ್ರೆ ಖರ್ಚು ಎಷ್ಟಾದರೂ ಭರಿಸುವ ಶಕ್ತಿ ಇರುತ್ತದೆ. ಆದರೆ, ಮಧ್ಯಮ ವರ್ಗದ ಮತ್ತು ಬಡಜನರ ಅದರಲ್ಲೂ ಕಡುಬಡವರು ಗಂಭೀರ ಸ್ವರೂಪದ ಕಾಯಿಲೆಗಳಾದರೆ ಆಸ್ಪತ್ರೆ ಖರ್ಚು ಭರಿಸುವ ಶಕ್ತಿ ಹೊಂದಿರುವುದಿಲ್ಲ. ಆದರೂ ಸರ್ಕಾರದ ಆಯುಷ್ಮಾನ್ ಭಾರತ್, ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬಗಳ ಸದಸ್ಯರಿಗೆ 5 ಲಕ್ಷ ರೂ.ಗಳವರೆಗೆ, ಎಪಿಎಲ್ ಕುಟುಂಬದ ಸದಸ್ಯರಿಗೆ ಶೇ.70ರಷ್ಟು ಖರ್ಚು ನೀಡುವ ಸೌಲಭ್ಯ ಸಿಗುತ್ತಿದೆ. ಆದರೆ, ರೋಗಿಗಳು, ಸರ್ಕಾರಿ ಆಸ್ಪತ್ರೆಗಳಲ್ಲೇ ಚಿಕಿತ್ಸೆ ಪಡೆಯಬೇಕೆಂಬ ನಿಯಮವಿದೆ. ಅಲ್ಲಿ ವ್ಯವಸ್ಥೆ ಇಲ್ಲದಿದ್ದಲ್ಲಿ ಮಾತ್ರ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ. ಗಂಭೀರ ಖಾಯಿಲೆಗಳ ಚಿಕಿತ್ಸೆಗೆ ಸಮಯ ಹಾಳು ಮಾಡಿದರೆ ಜೀವಕ್ಕೆ ಅಪಾಯ ಇರುವುದರಿಂದ ನೇರವಾಗಿ ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗುತ್ತಾರೆ.
ನಾವೆಲ್ಲ ತಿಳಿದಂತೆ ಆಸ್ಪತ್ರೆ ಖರ್ಚಿಗೋಸ್ಕರ ಸಾಲ ಮಾಡಿಕೊಂಡು ಮನೆ-ಮಠ ಮಾರಿಕೊಂಡು ದಿವಾಳಿ ಆಗಿರುವವರನ್ನು ಕಂಡಿದ್ದೇವೆ. ಹೀಗಾಗಿ ಒಂದು ಉತ್ತಮ ಸೇವೆ ನೀಡುವ ಆರೋಗ್ಯ ವಿಮೆ ಕಂಪನಿಯಲ್ಲಿ ವಿಮೆ ಮಾಡಿಸುವುದು ಉತ್ತಮ. ಬ್ಯಾಂಕುಗಳಲ್ಲಿ ಆರೋಗ್ಯ ಕಂಪನಿಗಳ ಒಡಂಬಡಿಕೆ ಇರುತ್ತದೆ. ಆದರೆ, ಪಾಲಿಸಿದಾರರು ಬ್ಯಾಂಕುಗಳ ಮುಖಾಂತರ ಕ್ಲೈಮ್ ಮಾಡಬೇಕಾಗಿರುವುದರಿಂದ ಅವರು ಪಾಲಿಸಿ ಮಾಡಿದ ಸಮಯದಲ್ಲಿ ಇದ್ದ ಸಿಬ್ಬಂದಿಯಾಗಲೀ, ವ್ಯವಸ್ಥಾಪಕರು ಇಲ್ಲದ ಕಾರಣ ತುಂಬಾ ತೊಂದರೆ ಅನುಭವಿಸುತ್ತಾರೆ.
ಹೀಗಾಗಿ ನೇರವಾಗಿ ಹೆಲ್ತ್ ಪಾಲಿಸಿ ನೀಡುವ ಕಂಪನಿಗಳಲ್ಲೇ ಪಾಲಿಸಿ ಮಾಡುವುದು ಉತ್ತಮ. ಬೇರೆ-ಬೇರೆ ಕಂಪನಿಗಳಲ್ಲಿ ಬೇರೆ-ಬೇರೆ ಹೆಸರಿನಿಂದ ಪಾಲಿಸಿಗಳು ದೊರೆಯುತ್ತವೆ. ಮುಖ್ಯವಾಗಿ ಇಡೀ ಕುಟುಂಬಕ್ಕೆ ಸೇರುವ ಹಾಗೆ ಪಾಲಿಸಿ ಮಾಡಿದರೆ ಉತ್ತಮ. ಯಾರು ಬೇಕಾದರೂ ಆಸ್ಪತ್ರೆ ಖರ್ಚಿನ, ನಗದುರಹಿತ ಸೌಲಭ್ಯ ಪಡೆಯಬಹುದಾಗಿದೆ. ಇತ್ತೀಚೆಗೆ ಆಕರ್ಷಕ ದರದಲ್ಲಿ 1 ಕೋಟಿ ಇಂಪ್ರೆಸ್ಸಿವ್ ವಿಮೆ, ಸೀನಿಯರ್ ಸಿಟಿಜೆನ್ ಪಾಲಿಸಿ, ಯಂಗಸ್ಟರ್ಸ್ ಪಾಲಿಸಿ, ಡಯಾಬಿಟಿಕ್, ಕ್ಯಾನ್ಸರ್ ಕೇರ್ ಪಾಲಿಸಿ, ಕಡಿಮೆ ಪ್ರೀಮಿಯಂನಲ್ಲಿ ಗ್ರಾಮೀಣ ಜನರಿಗೆ ರೂರಲ್ ಪಾಲಿಸಿ ಇತ್ಯಾದಿ ಪಾಲಿಸಿಗಳಿವೆ.
ಉತ್ತಮ ಸಲಹೆಗಾರರಿಂದ ಸಲಹೆ ಪಡೆದು ಪಾಲಿಸಿ ಮಾಡಬಹುದಾಗಿದೆ. ನಾವು ಕಟ್ಟಿದ ಹಣ ವಾಪಾಸು ಬರುವುದಿಲ್ಲ ನಿಜ. ಆದರೆ ಪರೋಕ್ಷವಾಗಿ ನಾವೂ ಸಹ ಸಾಮಾಜಿಕ ಸೇವೆ ನೀಡಿದ ಹಾಗೆ ಆಗುತ್ತದೆ. ಆದರೆ, ಕೆಲವು ಕಂಪನಿಗಳು ನೋ ಕ್ಲೈಮ್ ಬೋನಸ್ ಪಾಲಿಸಿ ಅವಲಂಬಿಸಿ ಶೇ.100ರಷ್ಟು ಬೋನಸ್ ಕವರೇಜ್ ನೀಡುತ್ತವೆ. ಅಲ್ಲದೆ ಕರಪಾವತಿದಾರರು, ಆದಾಯಕರ ವಿನಾಯಿತಿ ಸೆಕ್ಷನ್ 80ಡಿ ಯಲ್ಲಿ ಸೆಕ್ಷನ್ 80ಸಿ ಯ ರೂ. 1,50,000/- ಹೊರತಾಗಿಯೂ ಪಡೆಯಬಹುದಾಗಿದೆ.
ಅಲ್ಲದೆ ಅಪಘಾತ ಸಂಬಂಧ ಆಸ್ಪತ್ರೆ ಖರ್ಚು ಕೇವಲ ರೂ.472/-ರಲ್ಲಿ ರೂ.1.00 ಲಕ್ಷಗಳವರೆಗೆ ನಗದು ರಹಿತ ಲಭ್ಯ. ಅಪಘಾತ ವಿಮೆ ರೂ.826/-ಕ್ಕೆ 10 ಲಕ್ಷ ಕವರೇಜ್ ಇದೆ. ಇದರಲ್ಲಿ ಅಂಗಾಂಗಗಳನ್ನು ಕಳೆದುಕೊಂಡಲ್ಲಿ ಪರಿಹಾರವಿದೆ. ಪರ್ಮನೆಂಟ್ ಡಿಸೆಬಿಲಿಟಿಗೆ ಪಾಲಿಸಿಯ 150% ಪರಿಹಾರವಿದೆ. ಅಲ್ಲದೆ ಇದು ವಿಶ್ವದೆಲ್ಲೆಡೆ ಅನ್ವಯ. ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ಖರ್ಚು-ವೆಚ್ಚ ಹೆಚ್ಚುತ್ತಿರುವುದರಿಂದ ನಮ್ಮ ಉಳಿತಾಯವನ್ನು ಆಸ್ಪತ್ರೆ ಖರ್ಚಿಗೆ ಬಳಸಬೇಕಾಗುತ್ತದೆ. ಇದಕ್ಕೆ ಪರಿಹಾರ ಆರೋಗ್ಯ ವಿಮೆ.
ಹೀಗಾಗಿ ಅವರವರ ಅನುಕೂಲಕ್ಕೆ ತಕ್ಕಂತೆ ಆರ್ಥಿಕ ಪರಿಸ್ಥಿತಿ ನೋಡಿಕೊಂಡು ಪಾಲಿಸಿ ಮಾಡಿಕೊಂಡಲ್ಲಿ ಉತ್ತಮ. ಏಕೆಂದರೆ, ಕೆಲವು ಕಾಯಿಲೆಗಳಿಗೆ ಅಂದರೆ, ಪೈಲ್ಸ್, ಹರ್ನಿಯಾ, ಹಿಸ್ಟೆಕ್ಟಮಿ, ಡಿಸ್ಕ್‌ಕೊಲ್ಯಾಪ್ಸ್, ವೆರಿಕೋಸ್‌ವೇನ್ಸ್, ಕಿಡ್ನಿಸ್ಟೋನ್, ಜಾಯಿಂಟ್ ರಿಪ್ಲೇಸ್‌ಮೆಂಟ್ ಮುಂತಾದ ಮಾರಣಾಂತಿಕವಲ್ಲದ ಕಾಯಿಲೆಗಳಿಗೆ ಪಾಲಿಸಿ ಮಾಡಿದ 2 ವರ್ಷ ಕವರೇಜ್ ಇರುವುದಿಲ್ಲ. ಅಪಘಾತ ಸಂಬಂಧ ಪಾಲಿಸಿ ಪಡೆದ ದಿನದಿಂದಲೇ ಲಭ್ಯ. ಉಳಿದಂತೆ ಕೊರೋನಾ ಸೇರಿದಂತೆ ಎಲ್ಲಾ ಕಾಯಿಲೆಗಳಿಗೂ ಕ್ಯಾಶ್‌ಲೆಸ್ ಸೌಲಭ್ಯ ಪಾಲಿಸಿ ದಿನದಿಂದ 30 ದಿನಗಳ ನಂತರದಿಂದ ಅನ್ವಯವಾಗುತ್ತದೆ. ಕೆಲವು ಕಂಪನಿಗಳಲ್ಲಿ 2 ಬಾರಿ ರೀಚಾರ್ಜ್ ಸೌಲಭ್ಯ ಇರುತ್ತದೆ.
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಜಿ. ಶಶಿಧರ್ ರಾನಡೆ, ಆರ್ಥಿಕ ಸಲಹೆಗಾರರು, ಮೊ.9110237707 ಅಥವಾ 9449623311ನ್ನು ಸಂಪರ್ಕಿಸಬಹುದು.
Get in Touch With Us info@kalpa.news Whatsapp: 9481252093
Discussion about this post