ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ಕೋವಿಡ್19ನಿಂದ ತತ್ತರಿಸಿದ ಜನತೆಗೆ ಒಂದೊತ್ತಿನ ಊಟಕ್ಕೆ ಪರದಾಡುವ ಸಮಯದಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ವರದಾನವಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಶಿವಣ್ಣ ಹೇಳಿದ್ದಾರೆ.
ಅವರು ತಾಲೂಕಿನ ಘಟಪರ್ತಿ ಗ್ರಾಮಪಂಚಾಯ್ತಿ ವ್ಯಾಪ್ತಿಯ ಕೆರೆಯೊಂದರಲ್ಲಿ ಹೂಳೆತ್ತುವ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಗ್ರಾಮೀಣ ಭಾಗದ ಜನತೆ ಉದ್ಯೋಗಲ್ಲದೇ ಒಂದೊತ್ತಿನ ಚೀಲ ತುಂಬಿಸಿಕೊಳ್ಳಲು ಪರದಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನು ನೀಡುವುದರ ಮೂಲಕ ಇಲ್ಲಿನ ಗ್ರಾಪಂ ಅಭಿವೃದ್ದಿ ಅಧಿಕಾರಿಯಾದ ಪಿ. ಪಾಲಯ್ಯ ಅವರು ಕಾರ್ಮಿಕರ ನೆರವಿಗೆ ಸಹಾಯ ಹಸ್ತವಾಗಿದ್ದಾರೆ. ಅವರು ಕೆರೆಯಲ್ಲಿ ಹೂಳೆತ್ತುವ ಯೋಜನೆಗೆ ಸುಮಾರು 3 ಲಕ್ಷ ರೂ.ನಷ್ಟು ಕಾಮಗಾರಿಯನ್ನು ಕೈಗೆತ್ತಿಕೊಂಡು ಉದ್ಯೋಗಲ್ಲದೇ ಇರುವ ಹಾಗೂ ಕೆಲಸ ಮಾಡುವ ಆಸಕ್ತರಿಗೆ ಸ್ಥಳದಲ್ಲೇ ಕೆಲಸ ನೀಡುವ ಯೋಜನೆ ಹಾಕಿಕೊಂಡಿದ್ದಾರೆ ಎಂದರು.
ಅಂಬೇಡ್ಕರ್ ಯುವಕ ಸಂಘದ ಯಲ್ಲಪ್ಪ ಮಾತನಾಡಿ, ಇಂತಹ ಕೊರೋನಾ ಸಮಯದಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡುವುದು ಸ್ವಾಗತರ್ಹ. ಕೆಲಸವನ್ನು ಅರಸಿ ಹೊರ ರಾಜ್ಯಗಳಿಗೆ ಗುಳೆ ಹೋಗಿ ಮತ್ತೆ ಲಾಕ್ ಡೌನ್’ನಿಂದ ಮತ್ತೆ ಮರಳಿಗೂಡು ಸೇರಿಕೊಂಡ ಕಾರ್ಮಿಕರ ಕೈಗಳಿಗೆ ಕೆಲಸ ನೀಡಿ ಹಸಿವನ್ನು ನೀಗಿಸುವುದು ಉತ್ತಮ ಬೆಳವಣಿಗೆ. ಸಾಮಾಜಿಕ ಅಂತರ ಕಾಯ್ದುಕೊಂಡು ಸುಮಾರು ಹತ್ತು ಬ್ಯಾಂಚ್‌ಗಳನ್ನಾಗಿ ಮಾಡಿಕೊಂಡು ರ್ಕಾುಕರಿಗೆ ಕೆಲಸ ನೀಡುತ್ತಿದ್ದಾರೆ ಎಂದರು.
ಸಂದರ್ಭದಲ್ಲಿ ಗ್ರಾಪಂ ಅಭಿವೃದ್ದಿ ಅಧಿಕಾರಿ ಪಾಲಯ್ಯ, ಓಬಣ್ಣ, ಇಂಜಿನಿಯಾರ್ ಹಾಗೂ ಯಲ್ಲಪ್ಪ, ಪ್ರಕಾಶ್, ತಿಪ್ಪೇರುದ್ರಪ್ಪ, ರಮೇಶ್, ಶಿವಣ್ಣ, ಇತರರು ಇದ್ದರು.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
Get in Touch With Us info@kalpa.news Whatsapp: 9481252093
















