ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಆಕೆ 10 ವರ್ಷದ ಕಾಸರಗೋಡಿನ ಪ್ರತಿಭಾನ್ವಿತ ಬಾಲಕಿ. ಯೋಗಾಸನವೇ ಆಕೆಯ ಉಸಿರು ಎಂಬುದನ್ನು ಆರಂಭದಲ್ಲೇ ಹೇಳಲು ಬಯಸುತ್ತೇನೆ.
ಕಾಸರಗೋಡು ಕರಂದಕ್ಕಾಡ್ ಹರೀಶ್ ಮತ್ತು ತೇಜಕುಮಾರಿ ದಂಪತಿಗಳ ಮುದ್ದಿನ ಏಕೈಕ ಮಗಳು ಅಭಿಜ್ಞಾ.
ಕಾಸರಗೋಡಿನ ಶ್ರೀ ಲಕ್ಷ್ಮೀ ವೆಂಕಟೇಶ ವಿದ್ಯಾಲಯದ 4ನೆಯ ತರಗತಿಯಲ್ಲಿ ಕಲಿಯುತ್ತಿದ್ದು, ಈ ವಯಸ್ಸಿನಲ್ಲಿಯೇ ಯೋಗಾಸನದಲ್ಲಿ ಈಕೆಯ ಸಾಧನೆ, ಇವಳ ಸಾಲಿನ ಮಕ್ಕಳಿಗೆ ಪ್ರೇರಣಾದಾಯಕವೇ.
ಎಳವೆಯಲ್ಲಿಯೇ ಅಂದರೆ ತನ್ನ ಒಂದೂವರೆ ವರ್ಷದಲ್ಲಿಯೇ ವೇದಿಕೆಯಲ್ಲಿ ಶ್ರೀಕೃಷ್ಣ ವೇಷದಲ್ಲಿ ಕಾಣಿಸಿಕೊಂಡ ಅದ್ಬುತ ಪ್ರತಿಭೆ.
ತನ್ನ ನಾಲ್ಕನೆಯ ವಯಸ್ಸಿನಲ್ಲಿ ತನ್ನ ತಾಯಿ ಯೋಗ ಶಿಕ್ಷಕಿಯಾದ ತೇಜಕುಮಾರಿ ಅವರಿಂದ ಯೋಗಾಭ್ಯಾಸಗಳನ್ನು ಕಲಿತ ಈಕೆ ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿದ ಪ್ರತಿಭಾನ್ವಿತೆ. 2018ರಲ್ಲಿ ಮಡಿಕೇರಿಯಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಒಲಂಪಿಕ್ ಯೋಗಾಸನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಮತ್ತು ಚಿನ್ನದ ಪದಕ ಮತ್ತು 2019 ತಮಿಳುನಾಡಿನ ಪುದುಚೇರಿಯಲ್ಲಿ ರಾಷ್ಟ್ರಮಟ್ಟದ Sports yoga championshipನಲ್ಲಿ ಪ್ರಥಮ ಬಹುಮಾನ ಮತ್ತು ಚಿನ್ನದ ಪದಕ ಪಡೆದು ಮುಂದಕ್ಕೆ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ ಯೋಗಪಟು ಇವಳು.
2019 ನವೆಂಬರ್ 1ರಂದು ದಕ್ಷಿಣ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಇವಳ ಪಾಲಿಗೆ ಲಭಿಸಿದೆ. ಇದಲ್ಲದೇ 500ಕ್ಕೂ ಅಧಿಕ ವೇದಿಕೆಗಳಲ್ಲಿ ಯೋಗ ಮತ್ತು ಭರತನಾಟ್ಯವನ್ನು ಅಳವಡಿಸಿಕೊಂಡು ವಿಶೇಷವಾದ ನಾಗನೃತ್ಯವನ್ನೂ ಮಾಡುವ ಕಾಸರಗೋಡಿನ ಯೋಗ ಕುವರಿ ಎಂಬ ಬಿರುದು ಇವಳಿಗಿದೆ.
ಭರತನಾಟ್ಯವನ್ನು ಕಲಾತಪಸ್ವಿ ಬಾಲಕೃಷ್ಣ ಮಂಜೇಶ್ವರ ಇವರಿಂದ ಕಲಿಯುತ್ತಿದ್ದು, ಹಲವಾರು ವೇದಿಕೆಯಲ್ಲಿ ನಟನೆಯಲ್ಲೂ ಸೈ ಎನಿಸಿಕೊಂಡಿರುವ ಬಾಲೆ ಇವಳು.
5ನೆಯ ವಯಸ್ಸಿನಲ್ಲಿ ಮಲಯಾಳಂನ flowers ಚಾನಲ್’ನಲ್ಲಿ ಮಕ್ಕಳ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ರಾಜ್ಯದಲ್ಲಿ ಹಲವಾರು ಸನ್ಮಾನಗಳು ಇವಳಿಗೆ ಲಭಿಸಿದೆ.
ಇನ್ನು ಇದೇ ಮೇ 20ರಂದು ಯೋಗಾಸನದಲ್ಲಿ ಗೋಲ್ಡನ್ ಬುಕ್ ವಲ್ಡರ್ ರೆರ್ಕಾಡ್ ಬರೆದಿದ್ದಾಳೆ.
ಈ ಬಾಲ ಪ್ರತಿಭೆ ತನ್ನ ಸಾಧನೆಯ ಹಾದಿಯಲ್ಲಿ ಮುಗಿಲೆತ್ತರಕ್ಕೆ ಏರಲಿ ಎಂದು ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಹಾರೈಸುತ್ತದೆ.
Get in Touch With Us info@kalpa.news Whatsapp: 9481252093
Discussion about this post