ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೋಸ್ತ್’ಗೆ ದೋಸ್ತ್, ದುಷ್ಮನ್’ಗೆ ದುಷ್ಮನ್ ಎಂಬುದನ್ನು ಈ ದೇಶದ ಜನರೂ ಸಹ ಒಪ್ಪಿಕೊಂಡಿದ್ದಾರೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಎರಡನೆಯ ಅವಧಿಯಲ್ಲಿ ಒಂದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಪಕ್ಷದ ಜಿಲ್ಲಾ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕಳೆದ ಒಂದು ವರ್ಷ ಅಭಿವೃದ್ಧಿಯ ವರ್ಷ. ಮೋದಿಯವರ ಆಡಳಿತ ಹಾಗೂ ನಾಯಕತ್ವವನ್ನು ಈ ದೇಶದ ಜನ ಅದರಲ್ಲೂ ಪ್ರಮುಖವಾಗಿ ಯುವಕರ ಮೆಚ್ಚಿಕೊಂಡಿದ್ದಾರೆ. ಅಲ್ಲದೇ, ಮೋದಿ ಸರ್ಕಾರದ ಸಾಧನೆಯನ್ನು ವಿಶ್ವದ ಹಲವು ನಾಯಕರು ಮೆಚ್ಚಿಕೊಂಡಿರುವುದು ಇದಕ್ಕೆ ಸಾಕ್ಷಿ ಎಂದರು.
ಸುಪ್ರೀಂ ಕೋರ್ಟ್ ಅಯೋಧ್ಯೆ ತೀರ್ಪು ನೀಡಿದ ನಂತರ ದೇಶದಲ್ಲಿ ಎಲ್ಲೂ ಕೋಮುಗಲಭೆಗಳಾಗಿಲ್ಲ. ಅಂದರೆ, ಎಲ್ಲ ಧರ್ಮೀಯರು ಈ ತೀರ್ಪನ್ನು ಒಪ್ಪಿಕೊಂಡಿದ್ದಾರೆ. ಇದೂ ಸಹ ಬಿಜೆಪಿ ಸರ್ಕಾರದ ಸಾಧನೆಯೇ ಆಗಿದೆ. ಆದರೆ, ಮಾಜಿ ಸಿಎಂ ಸಿದ್ದರಾಮಯ್ಯ ಈ ಕುರಿತಂತೆ ಟ್ವೀಟ್ ಮಾಡಿರುವುದು ಖೇದಕರ. ಸಿದ್ದರಾಮಯ್ಯ ಇದರಲ್ಲಿ ಹಲವು ವಿಚಾರಗಳ ಕುರಿತು ಗಮನ ಹರಿಸಬೇಕಿತ್ತು ಎಂದು ಕುಟುಕಿದರು.
Get in Touch With Us info@kalpa.news Whatsapp: 9481252093







Discussion about this post