ಜಮುನಾಗರ್, ಆ.30: ಗುಜರಾತ್ ನ ಜಮುನಾಗರ್ ನಲ್ಲಿ ಮಹತ್ವದ ಎಸ್ ಎ ಯುಎನ್ ಐ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಿದರು.
ಸೌರಾಷ್ಟ್ರ-ನರ್ಮದಾ ಅವರತಣ್ ನೀರಾವರಿ ಯೋಜನೆಯಾದ ಎಸ್ ಎ ಯುಎನ್ ಐ ಯೋಜನೆಗೆ 2012ರಲ್ಲಿ ನರೇಂದ್ರ ಮೋದಿ ಶಂಕುಸ್ಥಾಪನೆ ನೆರವೇರಿಸಿದ್ದರು. ನಾಲ್ಕು ಹಂತಗಳ ಈ ಯೋಜನೆಯಲ್ಲಿ ಮೊದಲ ಹಂತದ ಯೋಜನೆಗೆ ಮೋದಿ ಇಂದು ಚಾಲನೆ ನೀಡಿದ್ದಾರೆ. ಈ ಯೋಜನೆಯ ಅಡಿಯಲ್ಲಿ 10 ಅಣೆಕಟ್ಟುಗಳು ಸೇರಿವೆ.
ಸರ್ದಾರ್ ಸರೋವರ್ ಅಣೆಕಟ್ಟೆಯಿಂದ ಸೌರಾಷ್ಟ್ರ ಪ್ರಾಂತ್ಯಕ್ಕೆ ಚಾಲನ್ ಹಾಗೂ ಪೈಪ್ ಲೈನ್ ಮೂಲಕ ನೀರು ಸರಬರಾಜು ಹಾಗೂ ಪ್ರವಾಹ ಪರಿಸ್ಥಿತಿಯನ್ನು ನಿಯಂತ್ರಿಸುವ ಸಲುವಾಗಿ ಈ ಯೋಜನೆ ರೂಪಿಸಲಾಗಿದೆ. ಸೌರಾಷ್ಟ್ರ ಪ್ರಾಂತ್ಯದ 4.13 ಲಕ್ಷ ಹೆಕ್ಟೇರ್ ಬರಗಾಲ ಪ್ರದೇಶಕ್ಕೆ ನೀರು ಸರಬರಾಜು ಮಾಡುವ ಮಹತ್ವದ ಯೋಜನೆ ಇದಾಗಿದೆ
World Padel League Secures Strong Brand Backing Ahead of Its Biggest Season Yet
Kalpa Media House | Mumbai | With less than a week to go for its much-anticipated Season 4, the World...
Read moreDetails




