No Result
View All Result
b-y-raghavendra-freedom-fighters-independence-day
English Articles

Remembering Freedom Fighters Is the Duty of Every Indian: MP B.Y. Raghavendra

by kalpa News
August 17, 2026
0

Kalpa Media House  | SHIKARIPURA  | Remembering the freedom fighters who fought against British rule, made immense sacrifices and secured...

Read moreDetails
Indriya - Krithi Shetty - Brand Ambassador

Indriya announces Krithi Shetty as Brand Ambassador for Southern Markets

August 14, 2026
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
  • Advertise With Us
  • Grievances
  • About Us
  • Contact Us
Monday, August 17, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಕೆಂಪು ದೈತ್ಯ ಚೀನಾ ಒಡೆದು ಚೂರಾಗಿ ಹೋಗಲಿದೆಯೇ?

ಚೀನಾದ ನಿಜವಾದ ಯೋಗ್ಯತೆಯನ್ನು ನಿತ್ಯಾನಂದ ವಿವೇಕವಂಶಿ ಅದ್ಬುತವಾಗಿ ವಿವರಿಸಿದ್ದಾರೆ ಓದಿ: ಭಾಗ-1

kalpa News by kalpa News
June 18, 2020
in Special Articles
0
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಚೈನಾ! ಜಗತ್ತಿನ ಅತಿ ಶಕ್ತಿಶಾಲಿ ರಾಷ್ಟ್ರಗಳಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುವ ರಾಷ್ಟ್ರ. ಭೂವಿಸ್ತಾರ, ಪ್ರಾಕೃತಿಕ ಸಂಪತ್ತು, ಜನಸಂಖ್ಯೆ, ಉತ್ಪಾದನೆ, ಅಭಿವೃದ್ಧಿ ಎಲ್ಲದರಲ್ಲೂ ಜಗತ್ತಿನ ಮುಂಚೂಣಿಯಲ್ಲಿರುವ ರಾಷ್ಟ್ರ. ಕಳೆದ ಹತ್ತು ಹದಿನೈದು ವರ್ಷಗಳ ಚಿಕ್ಕ ಅವಧಿಯಲ್ಲಿ ಆರ್ಥಿಕ ಅಭಿವೃದ್ಧಿಯ ವಿಷಯದಲ್ಲಿ ವಿಶ್ವದ ಉಳಿದೆಲ್ಲ ರಾಷ್ಟ್ರಗಳನ್ನು ಹಿಂದೆ ಹಾಕಿ ದೊಡ್ಡದೊಂದು ನೆಗೆತ ನೆಗೆದ ಸಾಹಸಿ ರಾಷ್ಟ್ರ. ಕೇವಲ ಆರ್ಥಿಕ ಕ್ಷೇತ್ರದಲ್ಲಿ ಮಾತ್ರವಲ್ಲದೇ ಮಿಲಿಟರಿ ಕ್ಷೇತ್ರದಲ್ಲೂ ಅಮೆರಿಕಾದಂತ ಅಮೇರಿಕಾಕ್ಕೆ ಸಡ್ಡು ಹೊಡೆದು ನಿಂತಿರುವ ಏಷ್ಯಾದ ದೈತ್ಯ ರಾಷ್ಟ್ರ. ಇಂತಹಾ ರಾಷ್ಟ್ರ ಕಳೆದ ಕೆಲವು ವಾರಗಳಿಂದ ಭಾರತದ ಗಡಿಯಲ್ಲಿ ತಂಟೆ ತೆಗೆದು ಯುದ್ಧೋತ್ಸಾಹವನ್ನು ತೋರುತ್ತಿರುವುದು ಸಹಜವಾಗಿಯೇ ಭಾರತೀಯರಾದ ನಮಗೆ ಆತಂಕವನ್ನು ತಂದೊಡ್ಡಿದೆ.

ಚೈನಾದ ಸೈನಿಕರು ಭಾರತದ ಗಡಿಯೊಳಕ್ಕೆ ನುಗ್ಗಿ ನಮ್ಮ ಸೈನಿಕರೊಂದಿಗೆ ಮುಷ್ಠಿಕಾಳಗ ಮಾಡುತ್ತಿದ್ದಾರೆ. ಚೈನಾ ತಾನು ಗಡಿಯಲ್ಲಿ ಹೆಚ್ಚುವರಿ ಸೈನಿಕರನ್ನು ನಿಯೋಜಿಸುತ್ತಿರುವುದಲ್ಲದೇ ನೇಪಾಳದಲ್ಲಿರುವ ತನ್ನ ಕೈಗೊಂಬೆ ಸರ್ಕಾರದ ಕೈಲಿ ಭಾರತದ ವಿರುದ್ಧ ಹೇಳಿಕೆಗಳನ್ನು ಕೊಡಿಸುವ ಮೂಲಕ ಭಾರತದ ವಿರುದ್ಧ ಆ ಬಡ ರಾಷ್ಟ್ರವನ್ನು ಛೂ ಬಿಡುತ್ತಿದೆ. ಗಡಿಯಲ್ಲಿ ಭಾರತ ನಡೆಸುತ್ತಿರುವ ರಸ್ತೆ ನಿರ್ಮಾಣವನ್ನು ನಿಲ್ಲಿಸಲು ಲಿಪುಲೇಕ್ ಪಾಸ್, ಕಾಲಾಪಾನಿ ಸಮೇತ ಲಿಂಪಿಯಧುರವನ್ನೂ ತನ್ನದೆಂದು ವಾದಿಸುತ್ತಿರುವ ನೇಪಾಳ ಚೀನಾ ಮಾತು ಕೇಳಿಕೊಂಡು ಹೊಸದೊಂದು ಭೂಪಟವನ್ನೇ ಬಿಡುಗಡೆ ಮಾಡಿ ಹೊಸ ವಿವಾದವನ್ನು ಹುಟ್ಟುಹಾಕಿದೆ. ಇದರ ನಡುವೆ ಚೈನಾ ಲಡಾಕ್ ಭಾಗದಲ್ಲಿ ಐದು ಸಾವಿರ ಸೈನಿಕರ ನಿಯೋಜನೆ ಮಾಡಿದೆ. ಕಾರಣವಿಲ್ಲದೇ ಗಡಿಯಲ್ಲಿ ಯುದ್ಧದ ವಾತಾವರಣವನ್ನು ನಿರ್ಮಾಣ ಮಾಡುತ್ತಿದೆ.

ಇಷ್ಟೆಲ್ಲಾ ಹಕೀಕತ್ತು ಮಾಡುತ್ತಿರುವ ಚೈನಾದ ಅಸಲಿ ಉದ್ದೇಶವೇನು? ಯುದ್ಧವೇ? ಭೂವಿಸ್ತರಣೆಯ ದಾಹವೇ? ಶಕ್ತಿಪ್ರದರ್ಶನವೇ? ಹುಚ್ಚಾಟವೇ? ವಿದೇಶಗಳಿಗೆ ನೀಡುತ್ತಿರುವ ಎಚ್ಚರಿಕೆಯೇ? ಖಂಡಿತವಾಗಿ ಇವ್ಯಾವುವೂ ಅಲ್ಲ. ಚೀನಾದ ಈ ಎಲ್ಲ ನಡೆಗಳಿಗೆ ಕಾರಣ ಚೀನಾವನ್ನು ಆಳುತ್ತಿರುವ ನಾಯಕರ ಎದೆಯಲ್ಲಿ ದಿನೇ ದಿನೇ ಹೆಪ್ಪುಗಟ್ಟುತ್ತಿರುವ ಭಯ ಎಂದರೆ ನೀವು ನಂಬುತ್ತೀರಾ? ಖಂಡಿತಾ ನಂಬಲೇಬೇಕು! ಹೌದು ಇಷ್ಟು ದಿನ ತಾನು ಆಡಿದ್ದೇ ಆಟ ಅಂತ ಅಂಕುಶವಿಲ್ಲದ ಆನೆಯಂತೆ ಮೂಗುದಾರವಿಲ್ಲದ ಗೂಳಿಯಂತೆ ಮೆರೆದಾಡುತ್ತಿದ್ದ ಚೈನಾದ ಕಮ್ಯುನಿಸ್ಟ್ ನಾಯಕರ ಎದೆ ಇಂದು ಹಿಂದೆಂದಿಗಿಂತಲೂ ಹೆಚ್ಚು ತೀವ್ರ ವೇಗದಲ್ಲಿ ಢವಗುಟ್ಟುತ್ತಿದೆ. ತಮ್ಮ ದೇಶಕ್ಕೆ ಮುಂದೊದಗಲಿರುವ ಭೀಕರ ಭವಿಷ್ಯವನ್ನು ನೆನೆ ನೆನೆದು ನಿದ್ರೆ ಬಾರದೇ ಹೊರಳಾಡುತ್ತಿದ್ದಾರೆ. ಬಂದ ಅರೆಬರೆ ನಿದ್ರೆಯಲ್ಲಿ ಕಾಣುವ ಕನಸಲ್ಲೂ ಬೆಚ್ಚಿ ಬೆಚ್ಚಿ ಬೀಳುತ್ತಿದ್ದಾರೆ. ಒಂದಲ್ಲ ಎರಡಲ್ಲ ಹತ್ತಾರು ಭಯಗಳು ಒಟ್ಟಿಗೆ ಸೇರಿಕೊಂಡು ಚೈನಾ ಇಂದು ಮಿಸುಕಾಡದಂತೆ ಲಾಕ್ ಆಗಿದೆ. ಜನರ ಗುಂಪಿನಲ್ಲಿದ್ದಾಗ ಪ್ಯಾಂಟಿನೊಳಗೆ ಇರುವೆ ಹೊಕ್ಕಿದಂತಾಗಿದೆ ಚೈನಾದ ಸ್ಥಿತಿ. ಮುಟ್ಟುವಂತಿಲ್ಲ ಮಾತಾಡುವಂತಿಲ್ಲ! ಇರುವೆ ಕಚ್ಚಿ ಕಚ್ಚಿ ತಿನ್ನುತ್ತಿದ್ದರೂ ತನಗೇನೂ ಆಗಿಲ್ಲ ಎಂಬಂತೆ ನಟಿಸುವ ದುರ್ಗತಿ ಇಂದು ಚೈನಾದ್ದಾಗಿದೆ. ಇಷ್ಟಕ್ಕೂ ಚೀನಾದ ಈ ಪರಿಯ ಮಹಾಭಯಕ್ಕೆ ಕಾರಣವೇನು ಅಂತ ಕೇಳ್ತೀರಾ? ಹೇಳ್ತೀನಿ ಕೇಳಿ.

ಅಮೇರಿಕಾವನ್ನು ಹಿಂದೆ ಹಾಕಿ ಜಗತ್ತಿನ ಸೂಪರ್ ಪವರ್ ಸ್ಥಾನದಲ್ಲಿ ಮೆರೆಯುವ ಕನಸು ಕಾಣುತ್ತಿದ್ದ ಚೈನಾ ಎಂಬ ಬೃಹತ್ ರಾಷ್ಟ್ರ ಇನ್ನು ಮುಂದೆ ಹತ್ತರಲ್ಲಿ ಒಂದು ರಾಷ್ಟ್ರವಾಗಿ ಉಳಿದು ಅಷ್ಟರಲ್ಲೇ ತೃಪ್ತಿಪಟ್ಟುಕೊಳ್ಳಬೇಕಾಗುತ್ತದೆ. ಹಿಂದೊಮ್ಮೆ ಶೀತಲ ಸಮರದ ಅಂತ್ಯದಲ್ಲಿ ಕಮ್ಯುನಿಸ್ಟ್ ರಾಷ್ಟ್ರವಾಗಿದ್ದ ಯುಎಸ್ಎಸ್ಆರ್ ಗೆ ಯಾವ ಗತಿ ಬಂತೋ ಅದೇ ಗತಿ ಇಂದು ಕಮ್ಯುನಿಸ್ಟ್ ರಾಷ್ಟ್ರ ಚೈನಾಕ್ಕೂ ಬರಲಿದೆ. ಕರೋನಾ ನಂತರ ಬದಲಾಗಬಹುದೆಂದು ಯೋಚಿಸಿದ್ದ ವಿಶ್ವಭೂಪಟದ ಮೊಟ್ಟಮೊದಲ ಬದಲಾವಣೆ ಚೈನಾದ ಪತನವೇ ಆಗಿರಲಿದೆ. ಅದರರ್ಥ ಚೈನಾ ಇನ್ನು ಕೆಲವೇ ದಿನಗಳಲ್ಲಿ ಒಡೆದು ಚೂರಾಗಲಿದೆ!

ಈ ಮಾತನ್ನು ಹೇಳಲು ಅನೇಕ ಸಮರ್ಥ ಕಾರಣಗಳು ಇಂದು ಕಣ್ಣಮುಂದಿವೆ.

ಕಾರಣ ನಂ 1 – ಒಳಗೊಳಗೇ ಕುಸಿಯುತ್ತಿರುವ ಚೈನಾದ ಆರ್ಥಿಕ ವ್ಯವಸ್ಥೆ
ಚೀನಾದ ಬಹುದೊಡ್ಡ ಶಕ್ತಿ ಅದರ ಅರ್ಥವ್ಯವಸ್ಥೆ. ಜಗತ್ತಿನ ಅತಿ ದೊಡ್ಡ ಉತ್ಪಾದಕ ರಾಷ್ಟ್ರ ಚೈನಾ. ಕಮ್ಯುನಿಸ್ಟ್ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಚೈನಾ ತನ್ನಲ್ಲಿರುವ ಅಪಾರ ಮಾನವ ಸಂಪನ್ಮೂಲವನ್ನು ಇನ್ನಿಲ್ಲದಂತೆ ದುಡಿಸಿಕೊಂಡು ಅತಿದೊಡ್ಡ ದುಡಿಮೆಗಾರ ರಾಷ್ಟ್ರವಾಗಿ ಬೆಳೆದು ನಿಂತಿತು. ಕಡಿಮೆ ಕೂಲಿಗೆ ಹೆಚ್ಚು ಉತ್ಪಾದನೆಯಾಗುವ ಅವಕಾಶವಿರುವ ಚೈನಾದಲ್ಲಿ ಜಗತ್ತಿನ ಬಹುತೇಕ ಕಂಪನಿಗಳು ಬಂದು ಯಥೇಚ್ಛ ಬಂಡವಾಳ ಹೂಡಿದವು. ಇದರ ಪರಿಣಾಮ ಜಗತ್ತಿನ ಬಡ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳು ಮುಂದುವರಿಯಲಾಗದೇ ಯಥಾ ಸ್ಥಿತಿಯಲ್ಲಿಯೇ ಉಳಿದರೆ ಶ್ರೀಮಂತ ರಾಷ್ಟ್ರಗಳು ಇನ್ನಿಲ್ಲದಂತೆ ಸೋಮಾರಿ ಮತ್ತು ಪರಾವಲಂಬಿಯಾದವು. ಇಂದು ಚೈನಾ ಮೇಲೆ ಜಗತ್ತು ಯಾವ ಪರಿ ಅವಲಂಬಿತವಾಗಿವೆಯೆಂದರೆ ಚೈನಾ ಜೊತೆ ವ್ಯಾಪಾರ ಸಂಬಂಧ ಕಳೆದುಕಳ್ಳುವ ಯಾವ ರಾಷ್ಟ್ರವೂ ತನ್ನ ಆರ್ಥಿಕ ಸ್ಥಿತಿ ಕುಸಿಯದಂತೆ ಕಾಪಾಡಿಕೊಳ್ಳುವ ಸಾಮರ್ಥ್ಯ ಹೊಂದಿಲ್ಲ. ಮೊದಮೊದಲು ಅಮೆರಿಕಾಕ್ಕೆ ಸಡ್ಡು ಹೊಡೆದು ವಿಶ್ವದ ದೊಡ್ಡಣ್ಣನಾಗುವ ಯಾವ ಇರಾದೆಯೂ ತನಗಿಲ್ಲವೆಂದು ತೋರಿಸಿಕೊಂಡ ಚೀನಾ ಹೊರಜಗತ್ತಿನೊಂದಿಗೆ ವ್ಯಾಪಾರ ಅಭಿವೃದ್ಧಿಯ ಮೂಲಕ ಕೇವಲ ತನ್ನ ದೇಶವನ್ನು ಒಳಗಿನಿಂದ ಶಕ್ತಿಶಾಲಿ ಮಾಡುವ ಕಡೆಗೆ ಮಾತ್ರ ಗಮನಕೊಟ್ಟಂತೆ ಕಾಣುತ್ತಿತ್ತು. ಇದರಿಂದ ತನ್ನ ವಿಶ್ವನಾಯಕ ಪಟ್ಟಕ್ಕೇನೂ ತೊಂದರೆ ಇಲ್ಲದಿದ್ದುದರಿಂದ ಮತ್ತು ತನಗೂ ಲಾಭವಿದ್ದುದರಿಂದ ಅಮೇರಿಕಾ ತಲೆಕೆಡಿಸಿಕೊಳ್ಳಲುಹೋಗಲಿಲ್ಲ.

ಆದರೆ ಯಾವಾಗ ಜಗತ್ತಿನ ಮೇಲೆ ಚೀನಾದ ಹಿಡಿತ ಬಲವಾಗುತ್ತಿರುವ ಲಕ್ಷಣ ಕಾಣಲು ಆರಂಭವಾಯಿತೋ ಅಮೆರಿಕಾ ಪತರಗುಟ್ಟಿಹೋಯಿತು. ಆಫ್ರಿಕಾ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಚೈನಾದ ಯಥೇಚ್ಛ ಬಂಡವಾಳ ಹೂಡಿಕೆ, ಪಾಕಿಸ್ತಾನ, ನೇಪಾಳ, ಶ್ರೀಲಂಕಾ ಸೇರಿದಂತೆ ವಿಶ್ವದ ಅನೇಕ ರಾಷ್ಟ್ರಗಳಿಗೆ ಚೀನಾ ನೀಡಿದ ಬೃಹತ್ ಪ್ರಮಾಣದ ಸಾಲ ಇವೆಲ್ಲವೂ ಅಮೇರಿಕಾಕ್ಕೆ ಮುಂದಾಗಲಿರುವ ಬಹುದೊಡ್ಡ ಕೇಡಿನ ಲಕ್ಷಣಗಳಾಗಿ ಗೋಚರಿಸಿದವು. ಆಗ ಆರಂಭವಾಗಿದ್ದೇ ಚೀನಾ ಮತ್ತು ಅಮೇರಿಕಾದ ವ್ಯಾಪಾರ ಯುದ್ಧ. ಟ್ರಂಪ್ ಎಷ್ಟು ಪ್ರಯತ್ನಿಸಿದರೂ ಈ ಯುಧ್ಧದಲ್ಲಿ ಚೀನಾವನ್ನು ಮಣಿಸಲು ಸಾಧ್ಯವಾಗಿರಲಿಲ್ಲ. ಏಕೆಂದರೆ ಸ್ವತಃ ಅಮೆರಿಕಾ ಚೈನಾದ ಮೇಲೆ ಇನ್ನಿಲ್ಲದಂತೆ ಅವಲಂಬಿತವಾಗಿಬಿಟ್ಟಿತ್ತು. ಹೀಗಾಗಿ ಹಾವು ಸಾಯಲಿಲ್ಲ ಕೋಲು ಮುರಿಯಲಿಲ್ಲ ಎಂಬಂತಿತ್ತು ಈ ಶೀತಲ ಯುದ್ಧ. ಹೇಗಾದರೂ ಮಾಡಿ ವ್ಯಾಪಾರ ಕ್ಷೇತ್ರದಲ್ಲಿ ಚೀನಾದ ಪಾರುಪತ್ಯವನ್ನು ಮುರಿಯಬೇಕೆಂದು ಹವಣಿಸುತ್ತಿದ್ದ ಅಮೇರಿಕಾಕ್ಕೆ ಅದೃಷ್ಟವಶಾತ್(!?) ಇಂದು ಕರೋನಾ ಒಂದು ದೊಡ್ಡ ಅಸ್ತ್ರವಾಗಿ ಸಿಕ್ಕಿದೆ. ಚೀನಾ ಉದ್ದೇಶಪೂರ್ವಕವಾಗಿ ಕರೋನಾ ವೈರಸ್ ಅನ್ನು ಜಗತ್ತಿಗೆ ಹರಡಿಸಿತು ಅಥವಾ ಹರಡಲು ಅವಕಾಶ ಮಾಡಿಕೊಟ್ಟಿತು ಎಂಬ ಆರೋಪದೊಂದಿಗೆ ಚೀನಾದ ಮೇಲೆ ಜಗತ್ತಿನ ಕೆಂಗಣ್ಣು ಬೀಳುವಂತೆ ನೋಡಿಕೊಳ್ಳುತ್ತಿದೆ. ಬಹುಪಾಲು ಅದರಲ್ಲಿ ಯಶಸ್ವಿಯೂ ಆಗಿದೆ. ಆಸ್ಟ್ರೇಲಿಯಾ, ಆಫ್ರಿಕಾದ ಕೆಲವು ರಾಷ್ಟ್ರಗಳೂ ಸೇರಿದಂತೆ ಜಗತ್ತಿನ ಅನೇಕ ರಾಷ್ಟ್ರಗಳು ಮುಕ್ತವಾಗಿ ಚೀನಾವನ್ನು ಟೀಕಿಸಲಾರಂಭಿಸಿವೆ.

ಮೊನ್ನೆ ಮೊನ್ನೆಯಷ್ಟೇ ಜಗತ್ತಿನ 130 ಕ್ಕೂ ಹೆಚ್ಚು ರಾಷ್ಟ್ರಗಳು ಕರೋನಾ ಸೋಂಕಿನ ಹರಡುವಿಕೆಯ ಕಾರಣದ ಕುರಿತಾಗಿ ಪ್ರಾಮಾಣಿಕ ತನಿಖೆ ನಡೆಸಬೇಕೆಂದು ಒಕ್ಕೋರಲಿನಿಂದ ಚೀನಾವನ್ನು ಒತ್ತಾಯಿಸಿವೆ. ಹೀಗಾಗಿ ಚೀನಾದೊಂದಿಗೆ ಜಗತ್ತಿನ ವ್ಯಾಪಾರ ಸಂಬಂಧ ಹಿಂದಿನಂತೆ ಉಳಿದುಕೊಳ್ಳುವುದು ಸಾಧ್ಯವಿಲ್ಲ. ಅದಾಗಲೇ ಅನೇಕ ಬಹುರಾಷ್ಟ್ರೀಯ ಕಂಪನಿಗಳು ಚೀನಾದಿಂದ ಕಾಲುಕೀಳುತ್ತಿವೆ. ಚೀನಾಕ್ಕೆ ಪರ್ಯಾಯವಾಗಿ ಕಾಣಬಲ್ಲಂಥ ರಾಷ್ಟ್ರಗಳ ಹುಡುಕಾಟದಲ್ಲಿವೆ. ಅಂತಹಾ ಕಂಪನಿಗಳಿಗೆ ಭಾರತ ಸೇರಿದಂತೆ ಹತ್ತಾರು ರಾಷ್ಟ್ರಗಳು ಕೆಂಪು ಹಾಸಿನ ಸ್ವಾಗತ ನೀಡುತ್ತಿರುವುದು ಚೀನಾಕ್ಕೆ ಬಹುದೊಡ್ಡ ಹೊಡೆತ ನೀಡಿದೆ. ಇದರ ಜೊತೆಗೆ ವಿಶ್ವದ ಮುಂಚೂಣಿ ರಾಷ್ಟ್ರಗಳು ಚೀನಾದ ಮೇಲೆ ತಮ್ಮ ಅವಲಂಬನೆಯನ್ನು ಕ್ರಮೇಣ ಕಡಿಮೆ ಮಾಡಿಕೊಳ್ಳುವತ್ತ ದಾಪುಗಾಲಿಟ್ಟಿವೆ. ಹೀಗಾಗಿ ವಿಶ್ವಕ್ಕೆ ತನ್ನ ಮೇಲಿದ್ದ ವಿಶ್ವಾಸಾರ್ಹತೆಯನ್ನೇ ಕಳೆದುಕೊಂಡ ಚೈನಾ ದಿನೇ ದಿನೇ ಬೆಂದು ಬಸವಳಿಯುತ್ತಿದೆ. ಒಂದು ಕಡೆ ವಿದೇಶಗಳಲ್ಲಿ ತಾನು ತೊಡಗಿಸಿರುವ ಬೃಹತ್ ಮೊತ್ತದ ಬಂಡವಾಳ, ನೀಡಿರುವ ಬೃಹತ್ ಪ್ರಮಾಣದ ಸಾಲ, ತನ್ನ ದೇಶದಲ್ಲಿ ಆರಂಭಿಸಿರುವ ದೀರ್ಘಕಾಲೀನ ಬೃಹತ್ ಯೋಜನೆಗಳು, ರಫ್ತುಪ್ರಮಾಣದ ಗಣನೀಯ ಕಡಿತ ಈ ಎಲ್ಲವೂ ಚೀನಾವನ್ನು ಇನ್ನಿಲ್ಲದಂತೆ ಕಾಡಲಾರಂಭಿಸಿದೆ. ಇದರೊಂದಿಗೆ ಕರೋನಾ ನಂತರ ಎದುರಾಗಿರುವ ಯುದ್ಧ ಭೀತಿಯಿಂದ ಹೆಚ್ಚಾಗಿರುವ ಮಿಲಿಟರಿ ವೆಚ್ಚ, ಲಾಕ್ ಡೌನ್ ಪರಿಣಾಮ ಇತ್ಯಾದಿಗಳಿಂದ ಸಹಾ ಬಹುದೊಡ್ಡ ಆರ್ಥಿಕ ಕುಸಿತವೊಂದಕ್ಕೆ ಚೀನಾದಲ್ಲಿ ವೇದಿಕೆ ಸಜ್ಜಾಗಿದೆ.

ನಾಳೆ: ಕಾರಣ ನಂ 2 – ಆಂತರಿಕ ಯುದ್ಧ ಮತ್ತು ಬಂಡಾಯ


Get In Touch With Us info@kalpa.news Whatsapp: 9481252093

Tags: AmericaChinaInternational AffairsKannadaNewsWebsiteLatestNewsKannadaNepalNithyananda Vivekavamshiಅಮೆರಿಕಾಚೀನಾನಿತ್ಯಾನಂದ ವಿವೇಕವಂಶಿಲಡಾಕ್
Share208Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಕೊರೋನಾ ವಿರುದ್ಧ ಹೋರಾಟದಲ್ಲಿ ಎಲ್ಲರ ಸಹಕಾರ ಅತ್ಯವಶ್ಯ: ಸಚಿವ ಈಶ್ವರಪ್ಪ ಕರೆ

Next Post

ದೇಶದ ಪ್ರತಿಯೊಬ್ಬ ಪ್ರಜೆಯು ಈಗ ಸಾವಿನೊಡನೆ ಹೋರಾಡಬೇಕಿದೆ

kalpa News

kalpa News

Next Post
ದೇಶದ ಪ್ರತಿಯೊಬ್ಬ ಪ್ರಜೆಯು ಈಗ ಸಾವಿನೊಡನೆ ಹೋರಾಡಬೇಕಿದೆ

ದೇಶದ ಪ್ರತಿಯೊಬ್ಬ ಪ್ರಜೆಯು ಈಗ ಸಾವಿನೊಡನೆ ಹೋರಾಡಬೇಕಿದೆ

Leave a Reply Cancel reply

Your email address will not be published. Required fields are marked *

No Result
View All Result
b-y-raghavendra-freedom-fighters-independence-day
English Articles

Remembering Freedom Fighters Is the Duty of Every Indian: MP B.Y. Raghavendra

by kalpa News
August 17, 2026
0

Kalpa Media House  | SHIKARIPURA  | Remembering the freedom fighters who fought against British rule, made immense sacrifices and secured...

Read moreDetails
Indriya - Krithi Shetty - Brand Ambassador

Indriya announces Krithi Shetty as Brand Ambassador for Southern Markets

August 14, 2026
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL