ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಕಾರಣ ನಂ 3: ಚೈನಾದಲ್ಲಿ ಕಮ್ಯುನಿಸ್ಟ್ ಪಕ್ಷ ಅಸ್ತಿತ್ವಕ್ಕೆ ಬಂದ ನಂತರ ಇವತ್ತಿನವರೆಗೂ ರಾಷ್ಟ್ರ ನಿರಂತರವಾಗಿ ಕೈಗಾರಿಕೀಕರಣಗೊಳ್ಳುತ್ತಿದೆ. ಇಂದು ಚೈನಾ ಜಗತ್ತಿನ ಸಾಟಿಯಿಲ್ಲದ ಅತಿ ದೊಡ್ಡ ಉತ್ಪಾದಕ ರಾಷ್ಟ್ರವಾಗಿದೆ. ಕಬ್ಬಿಣದಿಂದ ಹಿಡಿದು ಬಟ್ಟೆಯವರೆಗೆ ಎಲ್ಲ ರೀತಿಯ ವಸ್ತುಗಳನ್ನು ಅತಿ ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಲಾಗುತ್ತದೆ. ಇದರಿಂದ ಚೀನಾದ ಅರ್ಥವ್ಯವಸ್ಥೆ ಅಭಿವೃದ್ಧಿಯ ಶಿಖರವನ್ನೇರಿತು ನಿಜ. ಆದರೆ ಇದರ ಉಪ ಉತ್ಪನ್ನವಾಗಿ ಚೀನಾದ ಪರಿಸರ ಇನ್ನಿಲ್ಲದಂತೆ ನಾಶಗೊಂಡಿತು. ಇಂದು ಚೀನಾ ಜಗತ್ತಿನ ಅತಿಹೆಚ್ಚು ಕಲ್ಲಿದ್ದಲು ಬಳಸುವ, ಕಾರ್ಬನ್ ಡೈ ಆಕ್ಸೈಡ್ ಉತ್ಪಾದನೆ ಮಾಡುವ, ನದಿಯನ್ನು ಕೊಳಕು ಮಾಡುವ ಪ್ರಮುಖ ರಾಷ್ಟ್ರವಾಗಿ ಗುರುತಿಸಿಕೊಂಡಿದೆ. ಹೊರ ಜಗತ್ತಿಗೆ ಮುಕ್ತವಾಗಿ ತೆರೆದುಕೊಳ್ಳದ ಕಾರಣ ಅಲ್ಲಿನ ಪರಿಸರದ ವಾಸ್ತವ ಚಿತ್ರಣ ನಿಖರವಾಗಿ ತಿಳಿಯುತ್ತಿಲ್ಲವಾದರೂ ಸರಕಾರಿ ಸ್ವಾಮ್ಯದ ಪತ್ರಿಕೆಗಳೇ ವರದಿ ಮಾಡಿರುವಂತೆ ಚೀನಾದಲ್ಲಿ ಪರಿಸರ ನಾಶದಿಂದ ಸಾಯುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರುತ್ತಿದೆ.
ವರದಿಯೊಂದರ ಪ್ರಕಾರ ಪ್ರತಿವರ್ಷ 1.6 ಮಿಲಿಯನ್ ಜನರು ಪರಿಸರಮಾಲಿನ್ಯದ ಪರಿಣಾಮ ಚೈನಾದಲ್ಲಿ ಅಸುನೀಗುತ್ತಿದ್ದಾರೆ. ಚೀನಾದ ನದಿಗಳು ಹೇಗೆ ಕಲುಷಿತಗೊಂಡಿವೆಯೆಂದರೆ ಸಾಗರಕ್ಕೆ ಹರಿಯಲು ಬಿಡದೇ ಮೂರು ಮೂರು ಬಾರಿ ನೀರನ್ನು ವಾಪಾಸು ಕಳಿಸಿ ಬಳಸುವ ತಂತ್ರಜ್ಞಾನದಿಂದ ಎಲ್ಲ ನದಿಗಳ ನೀರು ಬಹುತೇಕ ಕುಡಿಯಲು ಅಯೋಗ್ಯವಾಗಿ ಮಾರ್ಪಟ್ಟಿವೆ. ವಿಷಕಾರಿ ರಾಸಾಯನಿಕಗಳು ನದಿಯೊಳಗೆ ಹರಿಯುತ್ತಿವೆ. ಇದರಿಂದಾಗಿ ಇದನ್ನು ಕುಡಿಯುವ ಜನರ ಆರೋಗ್ಯದ ಮೇಲೆ ಅಪಾರವಾದ ಪರಿಣಾಮ ಬೀರುತ್ತಿದೆ. ಅಂತರ್ಜಲ ಬಳಕೆಯ ಪ್ರಮಾಣ ಮಿತಿಮೀರಿದ್ದರಿಂದ ಜಲಮಟ್ಟದಲ್ಲಿ ವ್ಯಾಪಕ ಕುಸಿತ ಕಂಡುಬಂದಿದೆ. ಎಲ್ಲಿಯವರೆಗೆ ಎಂದರೆ ಮುಂದಿನ ಕೆಲವೇ ವರ್ಷಗಳಲ್ಲಿ ಚೈನಾ ಭೀಕರ ಜಲಕ್ಷಾಮವನ್ನು ಎದುರಿಸಲಿದೆ. ಹಾಗೇನಾದರೂ ನೀರಿಗಾಗಿಯೇ ಚೈನಾದೊಳಗೆ ಹಾಹಾಕಾರವೇರ್ಪಟ್ಟರೆ 150 ಕೋಟಿ ಜನಸಂಖ್ಯೆಯ ರಾಷ್ಟ್ರದ ಪರಿಸ್ಥಿತಿ ಏನಾಗಬಹುದು ಯೋಚಿಸಿನೋಡಿ.
ಇನ್ನು ಚೀನಾ ದೇಶದ ಗಾಳಿ ಎಷ್ಟು ಕಲುಷಿತಗೊಂಡಿವೆಯೆಂದರೆ ಮಕ್ಕಳು – ಯುವಕ – ಮುದುಕರೆನ್ನದೇ ಉಸಿರಾಟದ ಸಮಸ್ಯೆಗಳು ಎಲ್ಲ ವಯೋಮಾನದವರಲ್ಲೂ ತೀವ್ರವಾಗಿ ಕಾಣಿಸಿಕೊಂಡು ಅವರನ್ನು ಅಕಾಲಿಕ ಮರಣಕ್ಕೆ ದೂಡುತ್ತಿದೆ. ಮೊದಲೇ ಒನ್ ಚೈಲ್ಡ್ ಪಾಲಿಸಿಯಿಂದ ಜನಸಂಖ್ಯೆಯ ಕುಸಿತಕ್ಕೆ ಒಳಗಾಗಿರುವ ರಾಷ್ಟ್ರದಲ್ಲಿ ಅಕಾಲಿಕ ಮರಣಗಳ ಸಂಖ್ಯೆ ಜಾಸ್ತಿಯಾದರೆ ಪರಿಸ್ಥಿತಿ ಹೇಗಿರಬಹುದು ಯೋಚಿಸಿ ನೋಡಿ. ಇದರೊಂದಿಗೆ ತಿನ್ನುವ ಆಹಾರವನ್ನು ಬೆಳೆಯುವ ಮಣ್ಣೂ ಸಹಾ ತನ್ನ ಸಾರವನ್ನು ಕಳೆದುಕೊಂಡಿದೆ. ವರ್ಷಕ್ಕೆ ಮೂರು ಬೆಳೆ ಬೆಳೆಯುವ ಜಗತ್ತಿನ ಎಲ್ಲ ರಾಷ್ಟ್ರಗಳಿಗಿಂತಾ ಹೆಚ್ಚು ಆಹಾರ ಬೆಳೆಯುವ ಪೈಪೋಟಿಯಲ್ಲಿ ಚೈನಾ ತನ್ನ ಭೂಮಿಯ ಮೇಲೆ ವಿಪರೀತ ಅತ್ಯಾಚಾರ ನಡೆಸಿಬಿಟ್ಟಿದೆ. ಇದರ ಪರಿಣಾಮ ರಾಸಾಯನಿಕ ಹಾಕದೇ ಭೂಮಿಯಲ್ಲಿ ಬೆಳೆಬೆಳೆಯಲು ಸಾಧ್ಯವೇ ಇಲ್ಲ ಎಂಬಂತಾಗಿದೆ. ಹೀಗಾದರೆ ಒಂದಲ್ಲ ಒಂದು ದಿನ ಆಹಾರ ಕ್ಷಾಮ ಬಂದೊದಗಿದರೆ ಆಶ್ಚರ್ಯವಿಲ್ಲ. ವಿಜ್ಞಾನಕ್ಕೂ ಒಂದು ಮಿತಿಯಿದೆಯಲ್ಲವೇ? ಆಹಾರವನ್ನು ಭೂಮಿ ಮಾತ್ರ ಬೆಳೆಯಬಹುದೆಂಬ ಸತ್ಯ ಗೊತ್ತಿಲ್ಲದ ಕಮ್ಯುನಿಸ್ಟ್ ಸರ್ಕಾರ ತನ್ನ ಪತನದ ಅಂಚಿಗೆ ಬಂದು ನಿಂತುಬಿಟ್ಟಿದೆ. ಇದರೊಂದಿಗೆ ಮಿತಿಮೀರಿದ ಅರಣ್ಯನಾಶ, ವನ್ಯಜೀವಿಗಳ ಮಾರಣಹೋಮಗಳ ಪರಿಣಾಮದಿಂದ ಚೈನಾದ ಋತುಮಾನಗಳಲ್ಲೇ ಏರುಪೇರು ಉಂಟಾಗಿಹೋಗಿದೆ. ಇನ್ನು ಅಣುವಿಕಿರಣಗಳಂಥಾ ಹೊಸ ಮಾಲಿನ್ಯಗಳ ಸ್ಥಿತಿಗತಿ ಚೈನಾದಲ್ಲಿ ಅದು ಹೇಗಿದೆಯೋ ದೇವರೇ ಬಲ್ಲ. ಇತ್ತೀಚೆಗಷ್ಟೇ ಹೊರಬಂದ ಕರೋನಾ ವೈರಸ್ ಕೃತಕ ವೈರಸ್ ಗಳ ಲ್ಯಾಬ್ ನಿಂದ ಲೀಕ್ ಆಗಿದೆ ಎಂಬ ಸುದ್ದಿ ನಿಜವೇ ಆಗಿದ್ದರೆ ಚೈನಾ ಪ್ರಕೃತಿಯ ಜೊತೆ ಎಂತಹಾ ಅಪಾಯಕಾರಿ ಆಟ ಆಡುತ್ತಿದೆಯೆಂದು ಸುಲಭವಾಗಿ ಊಹಿಸಬಹುದು.
Get In Touch With Us info@kalpa.news Whatsapp: 9481252093
Discussion about this post