ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ತಮ್ಮ ರಾಜ್ಯಗಳಿಗೆ ತೆರಳ ಬಯಸುವ ವಲಸೆ ಕಾರ್ಮಿಕರಿಗಾಗಿ ಜೂನ್ 24ರಂದು ಬೆಂಗಳೂರಿನಿಂದ ಅಂತಿಮ ಶ್ರಮಿಕ್ ರೈಲುಗಳು ತೆರಳಲಿದ್ದು, ಇದರ ಪ್ರಯೋಜನ ಪಡೆದುಕೊಳ್ಳಬಯಸುವವರು ತಮ್ಮ ಹೆಸರು ನೊಂದಾಯಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಮನವಿ ಮಾಡಿದ್ದಾರೆ.
ತಮ್ಮ ರಾಜ್ಯಗಳಿಗೆ ತೆರಳ ಬಯಸುವ ಅನ್ಯ ರಾಜ್ಯಗಳ ಕಾರ್ಮಿಕರರು ಸೇವಾ ಸಿಂಧು ಆಪ್‌ನಲ್ಲಿ ತಮ್ಮ ವಿವರಗಳನ್ನು ನೊಂದಾಯಿಸಿಕೊಳ್ಳಬೇಕು.
ಸೇವಾ ಸಿಂಧುವಿನಲ್ಲಿ ನೊಂದಾಯಿಸಿಕೊಂಡಿರುವ ಕುರಿತಾದ ದಾಖಲೆಗಳನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ತೆರೆಯಲಾಗಿರುವ ಸೇವಾ ಕೌಂಟರಿನಲ್ಲಿ ಜೂನ್ 23ರ ಮಧ್ಯಾಹ್ನ 3.30ಗಂಟೆಯ ಒಳಗಾಗಿ ಸಲ್ಲಿಸಬೇಕು.
ಹೆಚ್ಚಿನ ವಿವರಗಳಿಗೆ ಜಿಲ್ಲಾ ಕಾರ್ಮಿಕ ಅಧಿಕಾರಿ ವಿಶ್ವನಾಥ ಮೊಬೈಲ್ ಸಂಖ್ಯೆ 9845184795 ಅವರನ್ನು ಸಂಪರ್ಕಿಸಬಹುದು.
Get In Touch With Us info@kalpa.news Whatsapp: 9481252093







Discussion about this post