ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ತಮ್ಮ ಸಜ್ಜನಿಕೆ ಪ್ರಜಾಹಿತ ಕಾರ್ಯಗಳಿಂದಲೇ ಆಳ್ವಿಕೆ ನಡೆಸಿ ನಾಡನ್ನು ಕಟ್ಟಿದ ನಾಡಪ್ರಭು ಕೆಂಪೇಗೌಡ ವಿಶ್ವಭೂಪಟದಲ್ಲಿ ಮುಖ್ಯ ನಗರದಲ್ಲೊಂದು ನಮ್ಮ ಬೆಂಗಳೂರು ಅಂದು ಕಟ್ಟಿದ ಇಂದು ಬೃಹತ್ ಬೆಳೆದು ಪ್ರಪಂಚವೇ ತಿರುಗಿನೋಡುವಂತೆ ನಿಂತಿದೆ ಎಂದು ಶಾಸಕ ಟಿ. ರಘುಮೂರ್ತಿ ಹೇಳಿದರು.
ತಾಲೂಕು ಕಚೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಮತ್ತು ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಾಡಪ್ರಭು ಕೆಂಪೇಗೌಡರ ಆದರ್ಶ ಹಾಗೂ ಅವರ ಮೌಲ್ಯಗಳನ್ನು ಇಂದಿನ ಪೀಳಿಗೆಯವರು ಅನುಸರಿಸಬೇಕಿದೆ. ನಾಡಪ್ರಭು ಕೆಂಪೇಗೌಡರು ಬೆಂಗಳೂರು ನಿರ್ಮಾಣದ ಜೊತೆಗೆ ಜನಸಾಮಾನ್ಯರಿಗೆ ಕೆರೆ, ಕಟ್ಟೆಗಳನ್ನು ಕಟ್ಟಿಸಿದರು. ಸಾಕಷ್ಟು ಮರಗಿಡಗಳನ್ನು ಬೆಳಸಿದರು, ಇಂದು ಬೆಂಗಳೂರು ಪ್ರಪಂಚ ಗುರುತಿಸುವಷ್ಟು ಬೆಳೆದು ವಿಸ್ತಾರಗೊಂಡಿದೆ ಎಂದರು.
ತಹಶೀಲ್ದಾರ್ ಎಂ. ಮಲ್ಲಿಕಾರ್ಜುನ್ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಪಿ. ಪ್ರಕಾಶಮೂರ್ತಿ, ನಗರಸಭೆ ಸದಸ್ಯರಾದ ರಾಘವೇಂದ್ರ, ರಮೇಶಗೌಡ, ವೀರಭದ್ರಯ್ಯ, ತಾಲೂಕು ಪಂಚಾಯಿತಿ ಸದಸ್ಯ ಜೆ. ವೀರೇಶ್, ಪುರಸಭೆ ಮಾಜಿ ಸದಸ್ಯ ಆರ್. ಪ್ರಸನ್ನ ಕುಮಾರ್, ನಗರ ಸಭೆ ಪೌರಯುಕ್ತ ಪಾಲಯ್ಯ, ತಾಲೂಕು ಒಕ್ಕಲಿಗ ಸಂಘ ಅಧ್ಯಕ್ಷ ಚನ್ನಕೇಶವ, ಮುಖಂಡರಾದ ನಾಗರಾಜ, ತಿಪ್ಪೇಸ್ವಾಮಿ, ಸಾಹಿತಿ ಶಿವಲಿಂಗಪ್ಪ, ಶಿರಸ್ತಿದಾರ ಚಂದ್ರಶೇಖರ್, ಆರ್.ಐ. ಲಿಂಗೇಗೌಡ, ಇದ್ದರು.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
Get In Touch With Us info@kalpa.news Whatsapp: 9481252093
















