ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಇದೇ ತಿಂಗಳ 12ರಂದು ತಮ್ಮ ಜನ್ಮ ದಿನಕ್ಕೆ ಯಾವುದೇ ಅಭಿಮಾನಿಗಳು ತಮ್ಮ ಮನೆಗೆ ಬರುವುದು ಬೇಡ. ಕೊರೋನಾ ಇರುವುದರಿಂದ ನೀವು ಇರುವಲ್ಲಿಂದಲೇ ನಮಗೆ ಹಾರೈಸಿ ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಗೆ ಸಂದೇಶ ನೀಡಿರುವ ಅವರು, ಈಗಾಗಲೇ ಕೊರೋನಾ ಬಹಳಷ್ಟು ತೊಂದರೆ ತಂದೊಡ್ಡಿದೆ. ಎಲ್ಲಕ್ಕಿಂತಲೂ ಜೀವನದಲ್ಲಿ ಆರೋಗ್ಯ ಮುಖ್ಯ. ಹೀಗಾಗಿ, ಎಲ್ಲರ ಆರೋಗ್ಯದ ಕಾಳಜಿ ದೃಷ್ಠಿಯಿಂದ ಈ ಬಾರಿ ನನ್ನ ಜನ್ಮ ದಿನಕ್ಕೆ ನಮ್ಮ ಮನೆಗೆ ಯಾರೂ ಬರುವುದು ಬೇಡ ಎಂದು ಕೋರಿದ್ದಾರೆ.
Stay home stay safe everyone. pic.twitter.com/IqnfeLk6uA
— DrShivaRajkumar (@NimmaShivanna) July 3, 2020
ಕೊರೋನಾ ಸಂಕಷ್ಟದ ಸಮಯದಲ್ಲಿ ಸರ್ಕಾರ ಜಾರಿಗೊಳಿಸಿರುವ ಕಾನೂನು, ನಿಯಮಾವಳಿಗಳನ್ನು ಎಲ್ಲರೂ ಪಾಸಿಲಿ. ಎಲ್ಲ ಕಡೆಯೂ ಸಾಮಾಜಿಕ ಅಂತರ ಕಾಪಾಡಿ. ಅಗತ್ಯವಿದ್ದರೆಷ್ಟೇ ಮನೆಗಳಿಂದ ಹೊರಬನ್ನಿ ಎಂದು ಕರೆ ನೀಡಿದ್ದಾರೆ.
Get In Touch With Us info@kalpa.news Whatsapp: 9481252093
Discussion about this post