ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಸೇಕ್ರೆಡ್ ಹಾರ್ಟ್ ಪ್ರೌಢಶಾಲೆಯಲ್ಲಿ ದಶಕಗಳ ಕಾಲ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಫಾದರ್ ಜಾರ್ಜ್ ಎಡುಕ್ಕಾ ನಾಥ್(88) ನಿನ್ನೆ ರಾತ್ರಿ 11 ಗಂಟೆಗೆ ನಿಧನರಾಗಿದ್ದಾರೆ.
ಅವರು ಭದ್ರಾವತಿಯ ನಿರ್ಮಲ ಆಸ್ಪತ್ರೆಯಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದರು. ಇತ್ತೀಚೆಗಷ್ಟೇ ಅವರ ಗುರು ಪಟ್ಟದ 60 ನೆಯ ವಾರ್ಷಿಕೋತ್ಸವವನ್ನು ಆಚರಿಸಿದ್ದರು. ಅತ್ಯಂತ ಕಟ್ಟುನಿಟ್ಟಿನ, ಶಿಸ್ತಿನ ಹೆಡ್ ಮಾಸ್ಟರ್ ಆಗಿದ್ದವರು ಅವರು, ನಿನ್ನೆ ರಾತ್ರಿ 11 ಗಂಟೆಗೆ ನಿದ್ದೆಯಲ್ಲಿಯೇ ಇಹಲೋಕ ತ್ಯಜಿಸಿದ್ದಾರೆ. ಇಂದು ಸಂಜೆ ಸೇಕ್ರೆಡ್ ಹಾರ್ಟ್ ಚರ್ಚ್‌ನಲ್ಲಿ ಅವರಿಗೆ ಅಂತಿಮ ನಮನ ಸಲ್ಲಿಸಿ, ನಂತರ ಚರ್ಚ್ ಪಕ್ಕದಲ್ಲಿ ಇರುವ ಗುರುಗಳ ಸಮಾಧಿ ಸ್ಥಳದಲ್ಲಿ ಸಮಾಧಿ ಮಾಡಲಾಗುವುದು.
ಸಂತಾಪ
ಫಾದರ್ ಜಾರ್ಜ್ ಎಡುಕ್ಕಾನಾಥ್ ರವರಿಗೆ ಶಿವಮೊಗ್ಗ ಧರ್ಮಕ್ಷೇತ್ರದ ಧರ್ಮದ್ಯಕ್ಷ ಡಾ. ಪ್ರಾನ್ಸಿಸ್ ಸೇರವೋ, ಶಿವಮೊಗ್ಗ ಸೇಕ್ರೆಡ್ ಹಾರ್ಟ್ ಚರ್ಚ್‌ನ ಮುಖ್ಯ ಗುರು ಫಾದರ್ ಗಿಲ್ಬರ್ಟ್ ಲೋಬೊ ಹಾಗೂ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಪ್ರಾಂತ್ಯದ ಧರ್ಮಗುರುಗಳು, ಧರ್ಮ ಭಗಿನಿಯರು ಹಾಗೂ ಭಕ್ತವೃಂದ ಸಂತಾಪ ವ್ಯಕ್ತಪಡಿಸಿದ್ದಾರೆ.
Get In Touch With Us info@kalpa.news Whatsapp: 9481252093















