ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಸಾಗರ: ಕೊರೋನಾ ವೈರಸ್ ಹಾವಳಿಯಿಂದಾಗಿ ಶ್ರೀಕ್ಷೇತ್ರ ವರದಪುರದ ಶ್ರೀಧರಾಶ್ರಮಕ್ಕೆ ಭಕ್ತರಿಗೆ ಸದ್ಯಕ್ಕೆ ಅವಕಾಶವಿಲ್ಲ. ಈ ಹಿನ್ನೆಲೆಯಲ್ಲಿ ಸಾಗರದಲ್ಲಿ ಸೇವಾ ಕೇಂದ್ರದ ಶಾಖೆಯನ್ನು ಆರಂಭಿಸಲಾಗಿದೆ.
ಸಾಗರದ ಜೆಸಿ ರಸ್ತೆಯಲ್ಲಿರುವ ಕಾನ್ಲೆಛತ್ರದಲ್ಲಿ,(ಅನ್ನಾವರ ಅಡಿಕೆ ಮಂಡಿ ಎದರು) ಶ್ರೀಧರ ಸೇವಾ ಮಹಾಮಂಡಳ ಶ್ರೀಕ್ಷೇತ್ರ ವರದಪುರ, ಸಾಗರದಲ್ಲಿ ಸೇವಾ ಕೇಂದ್ರದ ಶಾಖೆ ಇಂದು ಗಣಪತಿ, ಲಕ್ಮೀ ಸರಸ್ವತಿ, ಮತ್ತು ಶ್ರೀಧರ ಗುರುಗಳ ಪೂಜೆಯೊಂದಿಗೆ ಪ್ರಾರಂಭಿಸಲಾಗಿದೆ.
ಶ್ರೀಧರ ಸೇವಾ ಮಹಾಮಂಡಳ ಶ್ರೀಕ್ಷೇತ್ರ ವರದಪುರದಲ್ಲಿ ಲಭ್ಯವಿರುವ ಎಲ್ಲಾ ವ್ಯವಸ್ಧೆಗಳು ಇಲ್ಲಿ ಲಭ್ಯವಿದೆ. ವಿವಿಧ ಪೊಜೆ, ಸೇವೆಗಳಿಗೆ ಹಣ ಪಾವತಿ, ಪೋಟೊಗಳು, ಪುಸ್ತಕಗಳು, ದವಸ ಧಾನ್ಯಗಳ ಸಮರ್ಪಣೆ, ಪೂಜೆ ಮಾಹಿತಿ, ಪಡೆಯಬಹುದಾಗಿದೆ.
ಪ್ರತಿದಿನ ಬೆಳಗ್ಗೆ 10 ಗಂಟೆಯಿಂದ 1.30ರವರೆಗೆ, ಸಂಜೆ 3 ಗಂಟೆಯಿಂದ 5.30ರವರೆಗೆ ಕಚೇರಿ ತೆರೆದಿರುತ್ತದೆ. ಭಕ್ತಾದಿಗಳು ಇದರ ಉಪಯೋಗ ಪಡೆದು ಕೊಳ್ಳುವಂತೆ ವರದಪುರದ ಶ್ರೀಧರ ಸೇವಾ ಮಹಾಮಂಡಳ ಶ್ರೀಕ್ಷೇತ್ರದ ಪ್ರಕಟಣೆ ತಿಳಿಸಿದೆ. ಹೆಚ್ಚಿನ ವಿವರಗಳಿಗೆ 9449179581ಗೆ ಸಂಪರ್ಕಿಸಬಹುದು.
Get In Touch With Us info@kalpa.news Whatsapp: 9481252093
Discussion about this post