ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ತಾಳಿಕೋಟೆ: ವಿಶ್ವಪ್ರಕಾಶ ಮಲಗೊಂಡ ಹಾಗೂ ಶಿಲ್ಪಾ ಅಭಿನಯದಲ್ಲಿ ಮೂಡಿ ಬಂದಿರುವ ಕಿರುಚಿತ್ರ ’ಲೈಫ್ ಈಸ್ ಶಾರ್ಟ್’.
ಸ್ಮಾರ್ಟ್ ಮೂವೀಸ್ ಸಂಸ್ಥೆ ಅಡಿಯಲ್ಲಿ, ಅನುಸೂಯಾ ವಿಶ್ವಕರ್ಮ ನಿರ್ಮಿಸಿರುವ ಈ ಕಿರುಚಿತ್ರವು ಸ್ಮಾರ್ಟ್ ಮೂವೀಸ್ ಯೂಟ್ಯೂಬ್ ಚಾನಲ್’ನಲ್ಲಿ ರಿಲೀಸ್ ಆಗಿದ್ದು, ನೋಡುಗರಿಂದ ಮೆಚ್ಚುಗೆಯನ್ನು ಪಡೆಯುತ್ತಿದೆ.

ಈ ಹಿಂದೆ ’ಪ್ರೀತಿ ವಿಸ್ಮಯ’, ’ಲವ್ ಯು ಸಾಧನಾ’ ಕಿರುಚಿತ್ರಗಳಲ್ಲಿ ಅಭಿನಯಿಸಿದ್ದ ವಿಶ್ವಪ್ರಕಾಶ ಮಲಗೊಂಡ ಈ ಕಿರುಚಿತ್ರಕ್ಕೆ ನಾಯಕರಾಗಿ, ಅವರಿಗೆ ಜೋಡಿಯಾಗಿ ಶಿಲ್ಪಾ ನಟಿಸಿದ್ದಾರೆ.
ವಿಜಯಪುರ ಜಿಲ್ಲೆಯ ತಾಳಿಕೋಟಿಯಲ್ಲಿ ಚಿತ್ರೀಕರಿಸಿರುವ ಈ ಕಿರುಚಿತ್ರವು ಪ್ರೀತಿ-ಪ್ರೇಮದ ಕಥಾಹಂದರ ಒಳಗೊಂಡಿದೆ.
ನಾಯಕನಟನ ಜೀವನದಲ್ಲಿ ಹುಡುಗಿ ಬಂದ ಮೇಲೆ ಏನೇನು ಬದಲಾವಣೆಗಳಾಗುತ್ತವೆ ಹಾಗೂ ತಾಯಿ ಮತ್ತು ಮಗಳ ಸಂಬಧ ಹೇಗಿರುತ್ತದೆ ಎನ್ನುವುದನ್ನು ನಿರ್ದೇಶಕರಾದ ಲಕ್ಷ್ಮೀಕಾಂತ ಎಸ್ ವಿಶ್ವಕರ್ಮ ಕಟ್ಟಿ ಕೊಟ್ಟಿದ್ದರೆ.
ವಿಶ್ವಪ್ರಕಾಶ ಮಲಗೊಂಡ, ಶಿಲ್ಪಾ, ಮಂಗಲಾ, ಸಚಿನ್, ವೀರೇಶ, ಮಲ್ಲು, ಪ್ರಿಯಾ ಸೇರಿದಂತೆ ಅನೇಕರು ಈ ಕಿರುಚಿತ್ರದಲ್ಲಿ ನಟಿಸಿದ್ದು, ಮೂರು ವ್ಯಕ್ತಿಗಳ ಮನಃಸ್ಥಿತಿಯನ್ನು ತೋರಿಸಲಾಗಿದೆ.
ರವಿ ಕುಂಟೋಜಿ ಅವರ ಛಾಯಾಗ್ರಹಣ ಚಿತ್ರಕ್ಕಿದ್ದು, ಪ್ರಮೋದ್ ಸೋಮರಾಜ ಅವರ ಸಂಕಲನ, ಸಹ ಛಾಯಾಗ್ರಹಣ ಇದ್ದು, ಸಹ ನಿರ್ದೇಶನ ಸಚಿನ್, ಗಂಗಾಧರ, ಮಲ್ಲು ಮಾಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ಚಿತ್ರದ್ದೇ ಹೆಸರು. ಲೈಫ್ ಇಸ್ ಶಾರ್ಟ್ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ.
Get In Touch With Us info@kalpa.news Whatsapp: 9481252093








Discussion about this post