ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ದಕ್ಷಿಣ ಭಾರತ ಚಿತ್ರರಂಗದ ಹಿರಿಯ ಪೋಷಕ ನಟಿ ಶಾಂತಮ್ಮ(95) ಇಂದು ವಿಧಿವಶರಾಗಿದ್ದಾರೆ.
ಹೃದಯ ಸಂಬಂಧಿ ಖಾಯಿಲೆ ಹಾಗೂ ಮರೆವಿನಿಂದ ಬಳಲುತ್ತಿದ್ದ ಶಾಂತಮ್ಮ, ಮೈಸೂರಿನ ತಮ್ಮ ಮಗಳ ಮನೆಯಲ್ಲಿದ್ದರು ಎಂದು ಹೇಳಲಾಗಿದ್ದು, ನಿನ್ನೆ ಕಫ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.
ವರನಟ ಡಾ.ರಾಜ್ ಕುಮಾರ್ ಕುಟುಂಬ ಹಿರಿಯ ಕಾಲದ ಕೊಂಡಿಯಾಗಿದ್ದ ಶಾಂತಮ್ಮ ಅವರು ಕೊನೆಯ ಗಳಿಗೆಯಲ್ಲೂ ಸಹ ರಾಜ್ ಕುಟುಂಬಸ್ಥರನ್ನು ನೆನೆಸಿಕೊಳ್ಳುತ್ತಿದ್ದರು ಎಂದು ವರದಿಯಾಗಿದೆ.
ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಸುಮಾರು 450 ಚಿತ್ರಗಳಲ್ಲಿ ಶಾಂತಮ್ಮ ನಟಿಸಿದ್ದಾರೆ. ಡಾ.ರಾಜ್ ಕುಮಾರ್, ಡಾ.ವಿಷ್ಣುವರ್ಧನ್, ಅಂಬರೀಶ್, ರಜನಿಕಾಂತ್ ಸೇರಿದಂತೆ ಹಲವು ದಿಗ್ಗಜರೊಂದಿಗೆ ಶಾಂತಮ್ಮ ನಟಿಸಿದ್ದರು.
Get In Touch With Us info@kalpa.news Whatsapp: 9481252093

















