ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ತಾಲೂಕಿನಲ್ಲಿ ಸೋಮವಾರ ನಗರಸಭೆ ವ್ಯಾಪ್ತಿಯ ಪ್ರದೇಶದಲ್ಲಿ ನಾಲ್ವರಿಗೆ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಒಂದು ಮಗು ಸೇರಿದಂತೆ ಮೂವರಲ್ಲಿ ಕೊರೋನಾ ಪಾಸಿಟಿವ್ ಕಂಡು ಬಂದಿದೆ.
ಕಾಗದನಗರದಲ್ಲಿ 60 ವರ್ಷದ ಪುರುಷನಲ್ಲಿ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದು ಈತ ಅನಾರೋಗ್ಯದ ಕಾರಣ ಶಿವಮೊಗ್ಗದ ಆಸ್ಪತ್ರೆಯೊಂದಕ್ಕೆ ಹೋಗಿ ತಪಾಸಣೆಗೊಳಗಾದ ವೇಳೆ ಸೋಂಕು ಇರುವುದು ದೃಢಪಟ್ಟಿದೆ.
ವಿಐಎಸ್‌ಎಲ್ ವಸತಿ ಗೃಹದಲ್ಲಿ ವಾಸವಿರುವ ಕಾರ್ಖಾನೆಯ ಉದ್ಯೋಗಿ 30 ವರ್ಷ ವಯಸ್ಸಿನ ಯುವಕನಲ್ಲಿ ಕೊರೋನಾ ಸೋಂಕು ಇುವುದು ದೃಢಪಟ್ಟಿದೆ.
ಗೋಲ್ಡನ್ ಜ್ಯೂಬಿಲಿಯಲ್ಲಿ 53 ವರ್ಷ ವಯಸ್ಸಿನ ಮಹಿಳೆಯಲ್ಲಿ ಪಾಸಿಟಿವ್ ಕಾಣಿಸಿಕೊಂಡಿದ್ದು ಕಳೆದ ವಾರ ಇದೇ ಮನೆಯ ಸದಸ್ಯರೊಬ್ಬರಲ್ಲಿ ಪಾಸಿಟಿವ್ ಕಾಣಿಸಿತ್ತು.
ಶಿವರಾಮ ನಗರದಲ್ಲಿ 42 ವರ್ಷದ ಪುರುಷನೋರ್ವನಲ್ಲಿ ಪಾಸಿಟಿವ್ ಇರುವುದು ದೃಢಪಟ್ಟಿದೆ. ಸಿರಿಯೂರು ತಾಂಡದಲ್ಲಿ ಐದು ವರ್ಷದ ಮಗುವಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ.
ಕೆಂಚೇನಹಳ್ಳಿ ಗ್ರಾಮದಲ್ಲಿ 20 ವರ್ಷದ ಯುವತಿಯಲ್ಲಿ ಸೋಂಕು ದೃಢಪಟ್ಟಿದ್ದು, ಶ್ರೀರಾಮನಗರದ 43 ವರ್ಷ ವಯಸ್ಸಿನ ಮಹಿಳೆಯಲ್ಲಿ ಕೊರೋನಾ ಪಾಸಿಟಿವ್ ಕಾಣಿಸಿದೆ.
ಸೋಂಕಿತರ ನಿವಾಸದ ಸ್ಥಳಕ್ಕೆ ಆರೋಗ್ಯಾಧಿಕಾರಿ ಹಾಗೂ ಇತರ ಅಧಿಕಾರಿಗಳು ಭೇಟಿ ನೀಡಿ, ಸೋಂಕಿತರನ್ನು ಕೋವಿಡ್ ಚಿಕಿತ್ಸಾ ಕೇಂದ್ರಕ್ಕೆ ದಾಖಲಿಸಿ ಸೋಂಕಿತರ ನಿವಾಸದ ಬೀದಿಗಳನ್ನು ಸೀಲ್‌ಡೌನ್ ಮಾಡಿದರು.
Get In Touch With Us info@kalpa.news Whatsapp: 9481252093
















