ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಉಡುಪಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ಆರಂಭವಾಗಿದ್ದು, ಇದಕ್ಕಾಗಿ ಉಡುಪಿ ಪವಿತ್ರ ನೀರು ಹಾಗೂ ಮಣ್ಣನ್ನು ಕಳುಹಿಸಿಕೊಡಲಾಗಿದೆ.
ರಾಮ ಮಂದಿರ ನಿರ್ಮಾಣ ಶಿಲಾನ್ಯಾಸದ ಪ್ರಕ್ರಿಯೆಗಳು ದೇಶದಲ್ಲಿ ಆರಂಭವಾಗಿದ್ದು, ಆಗಸ್ಟ್ 5ರಂದು ಶಿಲಾನ್ಯಾಸ ನಡೆಯಲಿದೆ.
ಈ ಹಿನ್ನೆಲೆಯಲ್ಲಿ ದೇಶದ ಎಲ್ಲ ಪುಣ್ಯ ಕ್ಷೇತ್ರಗಳ ನೀರು ಹಾಗೂ ಮಣ್ಣನ್ನು ಸಂಗ್ರಹಿಸಿ ಬಳಸಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಶ್ರೀ ಕೃಷ್ಣನ ಸನ್ನಿಧಿಯಲ್ಲಿ ಪವಿತ್ರ ನೀರು ಹಾಗೂ ಮಣ್ಣನ್ನು ಪೂಜಿಸಿ, ಶ್ರೀಕೃಷ್ಣನ ಶ್ರೀಗಂಧ ಪ್ರಸಾದ ಅರ್ಪಿಸಿ ಪ್ರಾರ್ಥಿಸಿದರು.

ಪರ್ಯಾಯ ಪೀಠಾಧೀಶರಾದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದಂಗಳವರು ಪವಿತ್ರ ನೀರು ಹಾಗೂ ಮಣ್ಣನ್ನು, ವಿಶ್ವ ಹಿಂದೂ ಪರಿಷತ್ ಮುಖಂಡರಿಗೆ ಹಸ್ತಾಂತರಿಸಿದರು.
Get In Touch With Us info@kalpa.news Whatsapp: 9481252093

















