ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: 2020 ರ ಮುಂಗಾರು ಹಂಗಾಮುನಲ್ಲಿ ವಿವಿಧ ಬೆಳೆಗಳಿಗೆ ನಿಗಧಿಪಡಿಸಲಾಗಿರುವ ಇಂಡೆಮ್ಲಿಟ್ ವಿಮಾ ಪಾಲಿಸುವುದರ ಸಮಯ ಜುಲೈ 30ಕ್ಕೆ ಕೊನೆಗೊಳ್ಳಲಿದ್ದು ಆಸಕ್ತ ರೈತರು ಅಷ್ಟರೊಳಗೆ ವಿಮಾ ಪಾಲಿಸಿ ಅನುಕೂಲವನ್ನು ಪಡೆದುಕೊಳ್ಳಿ ಎಂದು ಕೃಷಿ ಸಹಾಯಕ ನಿರ್ದೇಶಕ ಡಾ.ಮೋಹನ್ ಕುಮಾರ್ ರೈತರಿಗೆ ಮಾಹಿತಿ ನೀಡಿದ್ದಾರೆ.
ಸರ್ಕಾರದ ಈ ಯೋಜನೆ ಮೂಲಕ ಅಕಾಲಿಕ ಮಳೆ ಅಥವಾ ಅತಿಯಾದ ಮಳೆಯಿಂದಾಗಿ ನಿಮ್ಮ ಬೆಳೆ ಹಾಳಾಗಿದ್ದರೆ. ಅದರಿಂದ ನಿಮಗೆ ಪರಿಹಾರ ಕಲ್ಪಿಸಲಾಗಿತ್ತದೆ. ಮಳೆ, ಅಲಿಕಲ್ಲು, ಭೂಕುಸಿತ, ಚಂಡಮಾರುತ ಮಳೆ ಬಾರದೆ ಬೆಳೆ ಒಣಗಿದಲ್ಲಿ ಬೆಳೆ ನಷ್ಟವನ್ನು ಸರಿದೂಗಿಸಲು ಈ ಯೋಜನೆ ರೈತರಿಗೆ ಅನುಕೂಲವಾಗಲಿದ್ದು ರೈತರ ಈ ರೀತಿಯ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಈ ಯೋಜನೆಯನ್ನು ಪಾರಂಭಿಸಿದೆ ಎಂದರು.
ಈಗಾಗಲೇ ಕಳೆದ ಬಾರಿ ವಿಮೆ ಪಾಲಿಸಿದವರು ಇದರ ಸದೂಪಯೋಗ ಪಡೆದುಕೊಂಡಿದ್ದಾರೆ. ಕಳೆದ ಬಾರಿ ಹಲವು ರೈತರು ವಿಮೇ ಪಾಲಿಸಿದ್ದು ವಿಮೇ ತಲುಪಿಲ್ಲ ಎಂದು ರೈತರು ದೂರುಗಳನ್ನು ನೀಡಿದ್ದರು. ಈ ಭಾರಿ ದೋಷ ರಹಿತವಾಗಿ ವಿಮೆ ದಾಖಸಲಿಸಿಕೊಳ್ಳುವ ತಾಲೂಕಿನ ಎಲ್ಲಾ ಕಾಮನ್ ಸೆಂಟರ್’ಗಳಿಗೆ ಸೂಚನೆ ನೀಡಲಾಗಿತ್ತು. ಇದೇ ತಿಂಗಳು 30 ವಿಮೆ ಕೊನೆಗೊಳ್ಳಲಿದ್ದು ಇದರ ಸದುಪಯೋಗವನ್ನು ರೈತರು ಪಡೆದುಕೊಳ್ಳಿ ಎಂದು ತಾಲೂಕಿನ ರೈತರಿಗೆ ಮಾಹಿತಿ ನೀಡಿದ್ದಾರೆ.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
Get In Touch With Us info@kalpa.news Whatsapp: 9481252093
Discussion about this post