ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಜಿಲ್ಲೆಯಲ್ಲಿಂದು 90 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ಪತೆತಿಯಾಗಿದ್ದು, ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 1476ಕ್ಕೆ ಏರಿಕೆಯಾಗಿದೆ.
ಈ ಕುರಿತಂತೆ ಜಿಲ್ಲಾಡಳಿತ ಬುಲೆಟಿನ್ ಬಿಡುಗಡೆ ಮಾಡಿದ್ದು, ಇಂದು ಇಬ್ಬರು ಸಾವನ್ನಪ್ಪಿದ್ದರೆ, 28 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಇನ್ನು, ಈವರೆಗೂ 353 ಕಂಟೈನ್ಮೆಂಟ್ ಝೋನ್‌ೞಗಳನ್ನು ಮಾಡಲಾಗಿದ್ದು, ಡಿ ನೋಟಿಫೈಡ್ ಝೋನ್‌ೞಗಳ ಸಂಖ್ಯೆ 96 ಆಗಿದೆ. ಇಂದು ಒಟ್ಟು 185 ಸ್ಯಾಂಪಲ್ ಸಂಗ್ರಹಿಸಲಾಗಿದ್ದು, 89 ಮಂದಿಯ ವರದಿ ನೆಗೆಟಿವ್ ಬಂದಿದೆ ಎಂದು ಬುಲೆಟಿನ್ ತಿಳಿಸಿದೆ.
ಮೆಗ್ಗಾನ್ ಆಸ್ಪತ್ರೆಯಲ್ಲಿ ಒಟ್ಟು 343 ಮಂದಿ, ಖಾಸಗಿ ಆಸ್ಪತ್ರೆಯಲ್ಲಿ 27 ಮಂದಿ ಹಾಗೂ ಮನೆಗಳಲ್ಲೇ ಐಸೋಲೇಶನ್’ಗೆ ಒಳಗಾಗಿರುವವರ ಸಂಖ್ಯೆ 51 ಆಗಿದೆ.
ತಾಲೂಕುವಾರು ವಿವರ: ಶಿವಮೊಗ್ಗ: 45 ಭದ್ರಾವತಿ: 9 ಸಾಗರ: 5 ಶಿಕಾರಿಪುರ: 22 ತೀರ್ಥಹಳ್ಳಿ: 1 ಹೊಸನಗರ: 1 ಸೊರಬ: 2 ಇತರೆ ಜಿಲ್ಲೆ: 5

Get In Touch With Us info@kalpa.news Whatsapp: 9481252093















