ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ನೆಪಮಾತ್ರದ ಅಧ್ಯಕ್ಷರಾಗದೆ ಕಾರ್ಯಪ್ರವೃತ್ತರಾಗಿ ರಾಜಕೀಯ ವಲಯದಲ್ಲಿ ತಮ್ಮದೇ ಆದಚಾಪು ಮೂಡಿಸಬೇಕು. ಸಾರ್ವಜನಿಕರಿಗೆ ಅವಶ್ಯವಿರುವ ಮೂಲಭೂತ ಸೌಲಭ್ಯಗಳನ್ನು ಒದಸಿಕೊಡುವ ನಿಟ್ಟಿನಲ್ಲಿ ಕಾರ್ಯ ಮಾಡಬೇಕು ಎಂದು ಶಾಸಕ ಟಿ. ರಘುಮೂರ್ತಿ ಹೇಳಿದರು.
ನಗರದ ಕಂಬಳಿ ಮಾರುಕಟ್ಟೆಯ ಆವರಣದಲ್ಲಿ ಕರ್ನಾಟಕ ಸಹಕಾರ ಖಾದಿಯೇತರ ಉಣ್ಣೆ ಕೈಮಗ್ಗ ನೇಕಾರರ ಮಹಾ ಮಂಡಳಿಯಿಂದ ನೂತನ ಜಿಪಂ ಅಧ್ಯಕ್ಷೆ ಶಶಿಕಲಾ ಸುರೇಶ್ ಬಾಬು ಹಾಗೂ ನಗರಸಭಾ ಸದಸ್ಯ ಎಂ.ಜೆ. ರಾಘವೇಂದ್ರರವರಿಗೆ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕಾಂಗ್ರೆಸ್ ಪಕ್ಷದಲ್ಲಿ ಜಿಪಂ ಅಧ್ಯಕ್ಷೆ ಸ್ಥಾನ ಗಿಟ್ಟಿಸಿಕೊಂಡ ಶಶಿಕಲಾರವರು ಕೇವಲ ನಾಮಕಾವಸ್ಥೆ ಅಧ್ಯಕ್ಷರಾಗದೆ ಇರುವ ಕಾಲಾವಧಿಯಲ್ಲಿ ಉತ್ತಮ ಆಡಳಿತ ನಡೆಸಿ. ಹಿಂದುಳಿದ ಕುರುಬ ಸಮಾಜದ ಏಕೈಕ ಮಹಿಳೆ ಜಿಪಂ ಅಧ್ಯಕ್ಷೆ ಸ್ಥಾನಕ್ಕೆ ಆಯ್ಕೆಯಾಗಿರುವುದು ಸಂತಸ ಸಂಗತಿ. ಪ್ರಸ್ತುತ ರಾಜ್ಯ ಸರಕಾರ ನಿಲುವುಗಳನ್ನು ನೋಡಿದರೆ ರಾಜಕೀಯ ಬೆಳವಣಿಗೆಗಳಲ್ಲಿ ಕೆಳಮಟ್ಟದ ರಾಜಾಕಾರಣ ಮಾಡುವುದನ್ನು ನಾವು ಕಾಣುತ್ತೇವೆ ಎಂದರು.
ಮನುಷ್ಯನಿಗೆ ಅತ್ಯವಶ್ಯವಗಿರುವ ಮೂಲಭೂತ ಶಿಕ್ಷಣವನ್ನು ಕಸಿದುಕೊಳ್ಳುವ ಕೆಲಸವಾಗುತ್ತಿದೆ. ಇಂತಹ ರಾಜಕೀಯ ನನ್ನ ಇತಿಹಾಸದಲ್ಲೇ ನೋಡಿರಲಿಲ್ಲ. ಅವಶ್ಯವಿದ್ದರೆ ಮತ್ತೊಂದು ಪರವಾನಿಗೆ ನೀಡಬೇಕೆ ವಿನಾ ತುರುವನೂರಿಗೆ ಮಂಜೂರಾದ ಪ್ರಥಮ ದರ್ಜೆ ಕಾಲೇಜನ್ನು ಬೇರೆಡೆಗೆ ವರ್ಗಾಹಿಸುವುದು ಸರಿಯಲ್ಲ. ಒಂದು ಸರಕಾರ ಮಕ್ಕಳಿಗೆ ಶಿಕ್ಷಣ ನೀಡಿದರೆ ಮತ್ತೊಂದು ಸರಕಾರ ಮತ್ತೆ ಕಸಿದುಕೊಳ್ಳುವ ವ್ಯವಸ್ಥೆ ಈಗಿನ ದಿನಮಾನಗಳಲ್ಲಿ ಕಾಣುತ್ತೇವೆ. ಆದ್ದರಿಂದ ವರ್ಗಾಯಿಸಿದ ಕಾಲೇಜನ್ನು ಮರು ಮಂಜೂರು ಮಾಡಬೇಕು ಕಳೆದ ಮೂರು ದಿನಗಳಿಂದ ಧರಣಿ ನಡೆಸುತ್ತಿದ್ದೇವೆ ಎಂದರು.
ಜಿಪಂ ಅಧ್ಯಕ್ಷೆ ಶಶಿಕಲಾ ಸುರೇಶ್ ಬಾಬು ಮಾತನಾಡಿ, ಇರುವಷ್ಟು ದಿನಗಳ ಕಾಲ ನಾನು ಅಧ್ಯಕ್ಷೆಯಲ್ಲಿ ಯಾವೆಲ್ಲಾ ಕೆಲಸ ಕಾರ್ಯಗಳು ಮಾಡಬೇಕು ಅವೆಲ್ಲಾ ಮಾಡುತ್ತೇನೆ. ಇನ್ನೂ ಕೇವಲ 8 ತಿಂಗಳ ಕಾಲಾವಧಿ ಬಾಕಿ ಉಳಿದಿದೆ. ಜಿಲ್ಲೆಯ ಸರ್ವತೋಮುಖ ಅಭಿವೃದ್ದಿಗೆ ಶ್ರಮಿಸುವೆ. ಸಮುದಾಯದ ಏಳಿಗೆಗೆ ಹಾಗೂ ಸಹಕಾರ ಸಂಘಗಳ ಕಾರ್ಯಗಳ ಬಗ್ಗೆ ಮುಂದಿನ ದಿನಗಳಲ್ಲಿ ಸಭೆ ನಡೆಸಲಾಗುವುದು. ಸಾಧ್ಯವಾದಷ್ಟು ಉತ್ತಮ ಆಡಳಿತ ನಡೆಸುವ ಬಯಕೆ ನನ್ನಾದಾಗಿದೆ ಎಂದರು.
ಸನ್ಮಾನ ಸ್ವೀಕರಿಸಿದ ನಗರಸಭಾ ಸದಸ್ಯ ಎಂ.ಜೆ. ರಾಘವೇಂದ್ರ, ಉಣ್ಣೆ ಕೈಮಗ್ಗ ನೇಕಾರರ ಸಂಘದ ಅಧ್ಯಕ್ಷ ಬಿ. ಮಲ್ಲಿಕಾರ್ಜುನಪ್ಪ, ಉಪಾಧ್ಯಕ್ಷ ರೇವಣಸಿದ್ದಪ್ಪ, ಪರಸಪ್ಪ, ನಗರಸಭೆ ಸದಸ್ಯ ರಮೇಶ್ ಗೌಡ, ತಾಪಂ ಸದಸ್ಯ ವೀರೇಶ್, ಜಯರಾಮ್, ಮಲ್ಲೇಶಪ್ಪ, ಜಗನ್ನಾಥ್ ಇತರರು ಇದ್ದರು.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
Get In Touch With Us info@kalpa.news Whatsapp: 9481252093
Discussion about this post