ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಕೋವಿಡ್19 ವೈರಸ್’ಗೆ ಹಳೇನಗರದ ವ್ಯಕ್ತಿಯೊಬ್ಬರು ನಿನ್ನೆ ರಾತ್ರಿ ಸಾವಿಗೀಡಾಗಿದ್ದಾರೆ.
ಹಳೇನಗರದ 54 ವರ್ಷದ ವ್ಯಕ್ತಿಯನ್ನು ಆರೋಗ್ಯ ಸಮಸ್ಯೆಯ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ನಿನ್ನೆ ರಾತ್ರಿ ಕೊನೆಯುಸಿರೆಳೆದಿದ್ದು, ಅವರಲ್ಲಿ ಕೊರೋನಾ ಪಾಸಿಟಿವ್ ದೃಢಪಟ್ಟಿತ್ತು ಎಂದು ಮೂಲಗಳು ತಿಳಿಸಿವೆ.
ಮೃತ ವ್ಯಕ್ತಿಯ ಅಂತ್ಯಸಂಸ್ಕಾರವನ್ನು ಕೋವಿಡ್19 ನಿಯಮಾವಳಿಗಳಂತೆ ಸರ್ಕಾರದ ವತಿಯಿಂದಲೇ ಶಿವಮೊಗ್ಗದ ರೋಟರಿ ಚಿತಾಗಾರದಲ್ಲಿ ಇಂದು ನಡೆಸಲಾಗಿದೆ.
Get In Touch With Us info@kalpa.news Whatsapp: 9481252093
















