ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಸಮಾಜದಲ್ಲಿ ಹಲವು ಬಾರಿ ಶಾಂತಿ ಕದಡಿರುವ ಆರೋಪ ಹೊಂದಿರುವ ಎಸ್’ಡಿಪಿಐನಂತಹ ಸಂಘಟನೆಗಳನ್ನು ಮಟ್ಟ ಹಾಕುತ್ತೇವೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಎಸ್’ಡಿಪಿಐನಂತಹ ಸಂಘಟನೆಗಳನ್ನು ನಿಷೇಧ ಮಾಡುವ ಕುರಿತಾಗಿ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಲಾಗುವುದು ಎಂದರು.

ಬೆಂಗಳೂರಿನಲ್ಲಿ ಶಾಸಕ ಅಖಂಡ ಶ್ರೀನಿವಾಸ್ ಮನೆಯ ಮೇಲೆ ನಡೆದ ದಾಂಧಲೆಯಲ್ಲಿ ಭಾಗಿಯಾಗಿದ್ದ ಗೂಂಡಾಗಳ ವಿರುದ್ಧ ಉತ್ತರ ಪ್ರದೇಶದಲ್ಲಿ ಜಾರಿ ಇರುವ ಕಾನೂನನ್ನು ರಾಜ್ಯದಲ್ಲಿಯೂ ಜಾರಿಗೊಳಿಸುವ ಚಿಂತನೆಯನ್ನು ರಾಜ್ಯ ಸರ್ಕಾರ ಕೈಗೊಳ್ಳಲಿದೆ ಎಂದರು.
ಅಖಂಡ ಶ್ರೀನಿವಾಸ ಮೂರ್ತಿ ಅವರ ಮನೆಯ ಮೇಲೆ ನಡೆದ ದಾಳಿ ಅತ್ಯಂತ ಖಂಡನೀಯ. ಇದು ನನ್ನ ಮನಸ್ಸಿಗೆ ಬಹಳಷ್ಟು ನೋವುಂಟು ಮಾಡಿದೆ. ಮತಾಂಧ ಮುಸ್ಲೀಮರ ಗೂಂಡಾಗಿರಿಯನ್ನು ಕಾಂಗ್ರೆಸ್ ಹಾಗೂ ಇತರೆ ಮುಸ್ಲೀಮರು ಖಂಡಿಸಬೇಕು. ಎಲ್ಲ ಮುಸ್ಲೀಮರು ಗೂಂಡಾಗಳು ಎಂದು ನಾನು ಹೇಳುವುದಿಲ್ಲ. ಅವರಲ್ಲೂ ಅತ್ಯಂತ ಸಭ್ಯ ಹಾಗೂ ಶಾಂತಿ ಪ್ರಿಯರಿದ್ದಾರೆ. ಆದರೆ, ಗೂಂಡಾವರ್ತನೆಯ ತೋರುವ ಮುಸ್ಲೀಮರ ಇಂತಹ ಕೃತ್ಯಗಳನ್ನು ಖಂಡಿಸಲೇಬೇಕು ಎಂದರು.
Get In Touch With Us info@kalpa.news Whatsapp: 9481252093















