ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಡಿ ಅಂಡ್ ಡಿ ಫಿಲಂ ಪ್ರೊಡಕ್ಷನ್ಸ್ ಬ್ಯಾನರ್ ನ ಅಡಿಯಲ್ಲಿ ಶ್ರೀಮತಿ ಪದ್ಮಾವತಿಯವರು ನಿರ್ಮಿಸುತ್ತಿರುವ ಪ್ರಚಂಡ ಪುಟಾಣಿಗಳು ಚಿತ್ರದ ಚಿತ್ರೀಕರಣ ಮುಕ್ತಾಯಗೊಂಡಿದೆ.
ಕೋಲಾರದ ನರಸಾಪುರದ ಗುಡ್ಡಗಾಡು ಪ್ರದೇಶದಲ್ಲಿ ಮಕ್ಕಳನ್ನು ನಿಧಿಗಾಗಿ ಬಲಿಕೊಡುವಾಗ. ಅಲ್ಲಿಗೆ ಬರುವ ಹಿರಿಯ ನಟ ಶಶಿಕುಮಾರ್ ಅವರು ಅಮಾಯಕರನ್ನು ಕಾಪಾಡಲು ಯುಗಯುಗದಲ್ಲೂ ನಾನು ಅವತಾರವೆತ್ತುತ್ತಲೇ ಬಂದಿದ್ದೇನೆ. ಇನ್ನು ಅವತಾರಗಳಿಲ್ಲ… ಸಂಹಾರವೇ ಎನ್ನುತ್ತಾ ಖಳನಟರಾದ ಬಲರಾಮ್ ಪಂಚಾಲ್. ಕೋಲಾರ್ ಬಾಲು, ನಿಡುವಳ್ಳಿ ರೇವಣ್ಣ, ಗುರು ಪ್ರಸನ್ನ ಮೊದಲಾದವರನ್ನು ಸೆದೆಬಡಿಯುವ ಸಾಹಸ ದೃಶ್ಯಗಳ ಮುಕ್ತಾಯದೊಂದಿಗೆ. ಚಿತ್ರಕ್ಕೆ ಕುಂಬಳ ಕಾಯಿ ಒಡೆಯಲಾಯಿತು.
ಕೋಲಾರ, ಚಿಂತಾಮಣಿ ಅಂತರಗಂಗೆ. ಕೈಲಾಸಗಿರಿ ಮೂದಲಾದ ಸುಂದರ ತಾಣಗಳಲ್ಲಿ ಚಿತ್ರೀಕರಣಗೊಂಡ ಪ್ರಚಂಡ ಪುಟಾಣಿಗಳು ಚಿತ್ರದಲ್ಲಿ ಹಿರಿಯ ಕಲಾವಿದರಾದ ಅವಿನಾಶ್, ಶೋಭರಾಜ್, ಶಶಿಕುಮಾರ್ ಬಲರಾಂ ಪಂಚಾಲ್’ರೊಂದಿಗೆ ನರಸಾಪುರ ನಾಗರಾಜ್, ಅಶ್ವಥ ರೆಡ್ಡಿ, ಕೋಲಾರ್ ಮಂಜುಳ, ಸುಗುಣ, ಶ್ರೀಕಾಂತ್, ಸಂದೀಪ್, ಹನುಮಂತಪ್ಪ, ಬುಲೆಟ್ ರಘು, ರೆಹಮಾನ್, ಜಯಕರ್ನಾಟಕ ತ್ಯಾಗರಾಜ್, ಡ್ಯಾನಿಡಾ ಕೃಷ್ಣಮೂರ್ತಿ, ಲಕ್ಷ್ಮಮ್ಮ ಮದನ್ ಮಂಜು ಹಾಗೂ ಪುಟಾಣಿಗಳಾದ ಬೇಬಿ ಸುಪ್ರಿತಾರಾಜ್, ಬೇಬಿ ಅಂಕಿತಾ, ಮಾಸ್ಟರ್ ಧೃವ, ಮಾಸ್ಟರ್ ಕ್ರಿತನ್, ಮಾಸ್ಟರ್ ಹರ್ಷ, ಬೇಬಿ ಅಂಜಲಿ, ಮಾಸ್ಟರ್ ಆಕಾಶ್, ಮಾಸ್ಟರ್ ನಿಖಿಲ್ ಮಾಸ್ಟರ್ ನಿತಿನ್ ಹಾಗೂ ಕೋಲಾರದ ಅಂತರಗಂಗೆ ಬುದ್ದಿಮಾಂದ್ಯ ಮಕ್ಕಳ ಅನಾಥಾಶ್ರಮದ 50 ಮಂದಿ ಮಕ್ಕಳು ಪಾಲ್ಗೊಂಡಿದ್ದರು.
ವಿನು ಮನಸು ಸಂಗೀತವಿರುವ ಪ್ರಚಂಡ ಪುಟಾಣಿಗಳು ಚಿತ್ರಕ್ಕೆ ಸುರೇಶ್ ಕಂಬಳಿ ಸಾಹಿತ್ಯ, ರಾಜೀವ್ ಕೃಷ್ಣರವರ ಕಥೆ -ಚಿತ್ರಕಥೆ- ಸಂಭಾಷಣೆ -ನೃತ್ಯ -ಸಾಹಸ-ಹಾಗೂ ನಿರ್ದೇಶನವಿದೆ. ಪ್ರಮೋದ್ ಭಾರತೀಯ ಛಾಯಾಗ್ರಹಣ, ಸಂಜೀವ್ ರೆಡ್ಡಿ ಸಂಕಲನ ಕೋಲಾರ್ ಸುಮಂತ್ ಸ್ಥಿರಚಿತ್ರಣ, ಸುನಿಲ್ ಕುಮಾರ್ ನಿರ್ಮಾಣ ನಿರ್ವಹಣೆ ಇರುವ ಚಿತ್ರದ ಎಡಿಟಿಂಗ್ ಕಾರ್ಯ ಈಗಾಗಲೇ ಪ್ರಾರಂಭವಾಗಿದೆ. ಥಿಯೇಟರ್’ಗಳು ತೆರೆದ ತಕ್ಷಣವೇ ಚಿತ್ರವನ್ನು ಬಿಡುಗಡೆ ಮಾಡಲು ಯೋಜನೆ ರೂಪಿಸಿಕೊಂಡಿದೆ.
Get In Touch With Us info@kalpa.news Whatsapp: 9481252093
Discussion about this post