ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಒಂದೆಡೆ ಕೊರೋನಾ ವೈರಸ್ ಆತಂಕದ ನಡುವೆಯೇ ಗೌರಿ-ಗಣೇಶ ಹಬ್ಬಕ್ಕೆ ನಗರದಲ್ಲಿ ಭರ್ಜರಿ ಸಿದ್ದತೆ ನಡೆದಿದೆ.

ನಾಳೆ ಗೌರಿ ಹಬ್ಬ ಹಾಗೂ ನಾಡಿದ್ದು ಗಣೇಶ ಚತುರ್ಥಿ ಹಬ್ಬ ನಡೆಯಲಿದೆ. ಈ ಹಿನ್ನೆಲೆಯಲ್ಲಿ ನಗರದ ಬಸವೇಶ್ವರ ವೃತ್ತ ಬಳಿಯ ಮಾರುಕಟ್ಟೆ, ಚನ್ನಗಿರಿ ರಸ್ತೆ, ಮಾಧವಾಚಾರ್ ವೃತ್ತ, ರೈಲ್ವೆ ನಿಲ್ದಾಣ ಬಳಿಯ ಮಾರುಕಟ್ಟೆ, ಹಾಲಪ್ಪ ವೃತ್ತ ಸೇರಿದಂತೆ ವಿವಿಧ ಕಡೆಗಳಲ್ಲಿ ವ್ಯಾಪಾರ ಜೋರಾಗಿತ್ತು.

ವಿವಿಧ ಬಗೆಯ, ಹೂವು ಹಣ್ಣುಗಳ ಬೆಲೆ ಏರಿಕೆಯಾಗಿದ್ದರೆ, ಬಾಳೆ ಕಂಬ ಹಾಗೂ ಮಾವಿನ ಸೊಪ್ಪಿನ ಬೆಲೆ ಅಂತಹ ಏರಿಕೆಯೇನೂ ಆಗಿಲ್ಲ.
ಸಾಮಾಜಿಕ ಅಂತರ, ಮಾಸ್ಕ್’ಗೆ ತಿಲಾಂಜಲಿ
ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಕೊರೋನಾ ಪಾಸಿಟಿವ್ ಪ್ರಕರಣ ಹೆಚ್ಚಾಗುತ್ತಲೇ ಇದೆ. ಆದರೆ, ಹಬ್ಬಕ್ಕೆ ಅಗತ್ಯ ವಸ್ತುಗಳ ಖರೀದಿಯ ಭರಾಟೆಯಲ್ಲಿ ಬಹಳಷ್ಟು ಮಂದಿ ಮಾಸ್ಕ್ ಧರಿಸಿದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇರುವುದು ಜನರ ನಿರ್ಲಕ್ಷತನಕ್ಕೆ ಹಿಡಿದ ಕನ್ನಡಿಯಾಗಿದೆ.
Get In Touch With Us info@kalpa.news Whatsapp: 9481252093

















