No Result
View All Result
Deeksha Brahmavara | A Divine Synergy of Artistic Excellence and Intellectual Brilliance
English Articles

Deeksha Brahmavara | A Divine Synergy of Artistic Excellence and Intellectual Brilliance

by ಕಲ್ಪ ನ್ಯೂಸ್
February 10, 2026
0

Kalpa Media House  |  Special Article: Satish Shetty Cherkadi Doddamane  | The coastal soil of Karnataka is fertile with art, but...

Read moreDetails
ಬೇಸಿಗೆಯಲ್ಲಿ ಗಂಟಲು ಒಣಗುತ್ತಿದೆಯೇ? ಧ್ವನಿ ಗರಗರಿಸುತ್ತಿದೆಯೇ? ಹಾಗಾದರೆ ಹೀಗೆ ಮಾಡಿ | ತಜ್ಞರ ಸಲಹೆ

Stay Hydrated to Protect Your Voice This Summer: ENT Expert Advice

February 10, 2026
Mysore – Shivamogga Express Big Update on this Date | Must Read

Mysore – Shivamogga Express Big Update on this Date | Must Read

February 9, 2026
Union Minister V. Somanna Flagged Off New Demu Train Services Between Dandeli – Alnavar

Union Minister V. Somanna Flagged Off New Demu Train Services Between Dandeli – Alnavar

February 9, 2026
ಡಯಾಲಿಸಿಸ್ ಅಂತಿಮವಲ್ಲ | ಮೃತ ದಾನಿದಾರ ಕಿಡ್ನಿಯಿಂದ ರೋಗಿಗೆ ಹೊಸ ಬದುಕು

A Second Chance at Life Through Deceased Organ Donation

February 3, 2026
  • Advertise With Us
  • Grievances
  • About Us
  • Contact Us
Wednesday, February 11, 2026
Follow Us
kalpa.news
">
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Army

ಸಂಚಲನ ಸೃಷ್ಠಿಸಿರುವ ಹನುಮಾನ್ ಸ್ಟಿಕ್ಕರ್!

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
September 5, 2016
in Army
0
Share on FacebookShare on TwitterShare on WhatsApp

ದೇಶದೆಲ್ಲೆಡೆ ಅದ್ದೂರಿಯಾಗಿ ಗಣೇಶೋತ್ಸವವನ್ನು ಆಚರಿಸಲಾಗುತ್ತಿದೆ. ಬೀದಿ ಬೀದಿಗಳಲ್ಲಿ ಹಿಂದೂ ಕಾರ್ಯಕರ್ತರು ಪೆಂಡಾಲ್ ಹಾಕಿ ಗಣೇಶನನ್ನು ಪ್ರತಿಷ್ಟಾಪಿಸಿ ಸಂಭ್ರಮಿಸಲಾಗುತ್ತಿದೆ. ಇಂತಹಸಂದರ್ಭದಲ್ಲಿ ಹಿಂದುತ್ವವನ್ನು ನರನಾಡಿಗಳನ್ನು ಪ್ರವಹಿಸುವಂತೆ ಪ್ರೇರೇಪಿಸುತ್ತಿದೆ ಒಂದು ಚಿತ್ರ. ಅದು ಕೇಸರಿ ಬಣ್ಣದಲ್ಲಿ ಕಂಗೊಳಿಸುತ್ತಿರುವ ಹನುಮಾನ್ ಸ್ಟಿಕ್ಕರ್.

ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ನಗರಗಳಲ್ಲಿ ಮಾತ್ರವಲ್ಲದೇ ವಿವಿಧ ರಾಜ್ಯಗಳಲ್ಲೂ ಈ ಹನುಮಾನ್ ಸ್ಟಿಕ್ಕರ್ ರಾರಾಜಿಸುತ್ತಿದೆ. ಯಾವುದೇ ನಗರಗಳಲ್ಲಿ ನೋಡಿದರೂ ಕಾರು,ಬೈಕು, ಬಸ್, ಲಾರಿ, ಟೆಂಪೋ, ಅಂಗಡಿ ಮುಂಗಟ್ಟುಗಳಲ್ಲಿ ಕೇಸರಿ ಬಣ್ಣದ ಅರ್ಧ ಮುಖದ ಈ ಹನುಮಾನ್ ಸ್ಟಿಕ್ಕರ್. ಎಲ್ಲೆಡೆ ಸಂಚಲನ ಮೂಡಿಸಿ, ಕ್ರೇಜ್ ಕ್ರಿಯೇಟ್ ಮಾಡಿರುವ ಈಹನುಮಾನ್ ಸ್ಟಿಕ್ಕರ್ ರೂಪಿಸಿದವರು ಮಾತ್ರ ಯಾರು ಎಂಬುದು ಬಹಳಷ್ಟು ಮಂದಿಗೆ ತಿಳಿದಿಲ್ಲ. ಅಪಾರ ಪ್ರತಿಭೆಯ ಆಗರವಾಗಿರುವ ಕಾಸರಗೋಡು ಮೂಲದ ಕರಣ್ ಆಚಾರ್ಯ ಈಹನುಮಾನ್ ಸ್ಟಿಕ್ಕರ್ ಸೃಷ್ಠಿಕರ್ತ.

ಹೌದು, ತಾವು ರೂಪಿಸಿರುವ ಈ ಸ್ಟಿಕ್ಕರ್ ಎಲ್ಲೆಡೆ ಹಿಂದೂಗಳ ಸ್ವಾಭಿಮಾನದ ಸಂಕೇತವಾಗಿ ರಾರಾಜಿಸುತ್ತಿದ್ದರೂ, ತಾವು ಮಾತ್ರ ತೆರೆಮರೆಯಲ್ಲೇ ಉಳಿದಿದ್ದಾರೆ ಕರಣ್. ಇಂತಹ ಅದ್ಬುತಪ್ರತಿಭೆಯ ಬಗ್ಗೆ ಸ್ವಲ್ಪ ತಿಳಿಯೋಣ.

ಯಾರು ಕರಣ್ ಆಚಾರ್ಯ?

ಕೇರಳದ ಕಾಸರಗೋಡು ಮೂಲದ ಕರಣ್ ಆಚಾರ್ಯ ಮೂಲತಃವಾಗಿ ಅಪಾರ ಪ್ರತಿಭೆ ಹೊಂದಿರುವ ಚಿತ್ರ ಕಲಾವಿದ. ಪಿ.ಯು ವಿದ್ಯಾಭ್ಯಾದ ನಂತರ ಫೈನ್ ಆರ್ಟ್ಸ ಕೋರ್ಸನ್ನು ಕೇರಳದಲ್ಲಿಪೂರೈಸಿದ ಕರಣ್, 2ಡಿ ಹಾಗೂ 3ಡಿ ಅನಿಮೇಶನ್ ನಲ್ಲಿ ಪ್ರಾವೀಣ್ಯತೆಯನ್ನು ಪಡೆದರು. ಚಿಕ್ಕಂದಿನಿಂದಲೇ ಚಿತ್ರಕಲೆ ಹಾಗೂ ಡಿಸೈನಿಂಗ್ ನಲ್ಲಿ ಆಸಕ್ತಿ ಹೊಂದಿದ್ದ ಕರಣ್ಗೆ ಪ್ರೋತ್ಸಾಹ ನೀಡಿನೀರೆರೆದು ಪೋಷಿಸಿದ್ದು ಅವರ ತಾಯಿ ಹಾಗೂ ಕುಟುಂಬಸ್ತರು.

IMG-20160904-WA0039

ಫೈನ್ ಆರ್ಟ್ಸ ಮುಗಿಸಿದ ನಂತರ ಇದೇ ಕೆಲಸದಲ್ಲಿ ತೊಡಗಿಸಿಕೊಂಡ ಕರಣ್, ಪ್ರತಿದಿನ, ಪ್ರತಿಕ್ಷಣ ಹೊಸದನ್ನು ಏನಾದರೂ ರೂಪಿಸಬೇಕು ಎಂಬ ತುಡಿತ ಹೊಂದಿದ್ದರು. ಇದಕ್ಕಾಗಿ ಹಗಲುರಾತ್ರಿ ಕಷ್ಟಪಟ್ಟು ಇದರಲ್ಲಿ ಶ್ರಮವಹಿಸಿ,  ತಮ್ಮ ಕೌಶಲ್ಯವನ್ನು ಹೆಚ್ಚಿಸಿಕೊಂಡರು.

 

ಹನುಮಾನ್ ಸ್ಟಿಕ್ಕರ್ ರೂಪಿತವಾಗಿದ್ದು ಹೀಗೆ…

ಕೇರಳದ ಕಾಸರಗೋಡಿನ ನಿವಾಸಿಯಾಗಿರುವ ಕರಣ್ ಗೆ ಅಲ್ಲಿ ಅಪಾರ ಸ್ನೇಹಿತರ ಬಳಗವಿದೆ. ಅಲ್ಲಿನ ಹಿಂದೂಪರ ಸಂಘಟನೆಯ ಯುವಕರು ಗಣೇಶೋತ್ಸವವನ್ನು ಅದ್ದೂರಿಯಾಗಿ ಆಚರಿಸಬೇಕುಎಂಬ ಹಿನ್ನೆಲೆಯಲ್ಲಿ ಹಾಗೂ ಹೊಸದೇನಾದರೂ ಲಾಂಛನದ ರೂಪದಲ್ಲಿ ಪ್ರಕಾಶಿಸಬೇಕು ಎಂಬ ಉದ್ದೇಶದಿಂದ ಕರಣ್ ಬಳಿ ವಿನ್ಯಾಸಕ್ಕಾಗಿ ಕೇಳುತ್ತಾರೆ. ಇದರ ಹಿನ್ನೆಲೆಯಲ್ಲಿ ರೂಪಿತವಾಗಿದ್ದೇಹನುಮಾನ್ ಸ್ಟಿಕ್ಕರ್.

ಕಾಸರಗೋಡಿನ ಕುಂಬ್ಳೆ ಪ್ರದೇಶದ ಹಿಂದೂ ಯುವಕರು ಗಣೇಶೋತ್ಸವ ಆಚರಿಸುವ ವೇಳೆ ಲಾಂಛನ ಅಥವಾ ಬಾವುಟದ ರೂಪದಲ್ಲಿ ಪ್ರದರ್ಶಿಸಲು ಕರಣ್ ರೂಪಿಸಿದ ಈ ಹನುಮಾನ್ ಸ್ಟಿಕ್ಕರ್, 2015ರ ನವೆಂಬರ್ 13ರಂದು ಮೊದಲ ಬಾರಿಗೆ ಕಾಸರಗೋಡಿನಲ್ಲಿ ರಾರಾಜಿಸಿತ್ತು. ವಿಭಿನ್ನ ಹಾಗೂ ವಿಶೇಷವಾಗಿ ಹನುಮಾನ್ ಚಿತ್ರವನ್ನು ರೂಪಿಸಬೇಕು ಎಂಬ ಚಿತ್ತದಿಂದ ಶ್ರಮ ವಹಿಸಿದಕರಣ್, ಮೊದಲ ಮುಖವನ್ನು ಮಾತ್ರ ರೂಪಿಸಿದರು. ಆನಂತರ ಹನುಮಾನ್ ದೇಹವನ್ನು ರೂಪಿಸಿದರು. ಅಲ್ಲಿನ ಯುವಕರಿಗೆ ಈ ಚಿತ್ರ ಎಷ್ಟು ಪ್ರಿಯವಾಯಿತು ಎಂದರೆ, ಇದನ್ನು ಫೇಸ್ ಬುಕ್ಹಾಗೂ ವಾಟ್ಸಪ್ ಗಳಲ್ಲಿ ಡಿಪಿ ಆಗಿ ಹಾಕಿಕೊಳ್ಳಲು ಮುಂದಾದರು. ಆದರೆ, ತಾಂತ್ರಿಕ ಕಾರಣದಿಂದ ಡಿಪಿಯಲ್ಲಿ ಪೂರ್ಣ ಕಾಣದ ಹಿನ್ನೆಲೆಯಲ್ಲಿ ಅರ್ಧಮುಖದ ಹನುಮಾನ್ ಚಿತ್ರವೇ ಎಲ್ಲೆಡೆಪಸರಿಸಲು ಆರಂಭವಾಯಿತು.

ನಂತರ ಒಬ್ಬರಿಂದ ಒಬ್ಬರಿಗೆ ಶೇರ್ ಆಗುತ್ತಾ ಹೋದ ಈ ಹನುಮಾನ್ ಚಿತ್ರ ಇಂದು ರಾಷ್ಟ್ರಮಟ್ಟದಲ್ಲಿ ಒಂದು ರೀತಿಯ ಐಕಾನ್ ಆಗುವಷ್ಟರ ಮಟ್ಟಿಗೆ ತನ್ನ ವ್ಯಾಪ್ತಿಯನ್ನು ರೂಪಿಸಿಕೊಂಡಿದೆ.ಎಲ್ಲೆಡೆ ರಾರಾಜಿಸುತ್ತಿರುವ ಈ ಚಿತ್ರ, ಹಿಂದೂ ಸಂಘಟನೆಗಳ ಪ್ರಮುಖ ಐಕಾನ್ ಆಗಿ ಬೆಳೆಯುತ್ತಿದೆ.

IMG-20160904-WA0037

 

ಕರಣ್ ಬಗ್ಗೆ ಮತ್ತಷ್ಟು…

ಚಿತ್ರ ಕಲೆಯಲ್ಲಿ, 2ಡಿ, 3ಡಿ ಅನಿಮೇಶನ್, ಡಿಸೈನ್ ನಲ್ಲಿ ಅಪ್ರತಿಮ ಪ್ರತಿಭೆಯನ್ನು ಹೊಂದಿರುವ ಕರಣ್, ಸಾಕಷ್ಟು ಪಾಂಡಿತ್ಯವನ್ನು ಹೊಂದಿದ್ದರೂ ಹೆಚ್ಚಿನ ಪ್ರಚಾರಕ್ಕೆ ಬಂದಿಲ್ಲ ಎನ್ನುವುದುಕಲಾವಿದನಿಗೆ ಸಿಗುತ್ತಿರುವ ಬೆಲೆ ಕಡಿಮೆಯಾಗುತ್ತಿದೆಯಾ ಎಂಬ ಅನುಮಾನವನ್ನು ಹುಟ್ಟು ಹಾಕುತ್ತದೆ.

ಈ ಕ್ಷೇತ್ರದಲ್ಲಿ ಏನನ್ನಾದರೂ ಸಾಧಿಸಬೇಕು ಎಂಬ ಹಂಬಲದಿಂದ ಹಗಲು ರಾತ್ರಿ ಶ್ರಮಿಸುತ್ತಿರುವ ಕರಣ್, ಪ್ರಸ್ತುತ ಮಂಗಳೂರಿನ ಕಂಪೆನಿಯೊಂದರಲ್ಲಿ ಇದೇ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ.ಈಗಾಗಲೇ ಹಲವು ಕನ್ನಡ ಚಲನಚಿತ್ರಗಳಿಗೆ ಸ್ಟೋರಿ ಬೋರ್ಡ ಮಾಡಿರುವ ಇವರು, ಇನ್ನೂ ಏನನ್ನಾದರೂ ಸಾಧಿಸುವ ತುಡಿತದಲ್ಲಿದ್ದಾರೆ.

ಯಶಸ್ವಿ ಯುವ ಪ್ರತಿಭೆ ರಕ್ಷಿತ್ ಶೆಟ್ಟಿ ಅವರ ಚಿತ್ರಕ್ಕೆ ಕೆಲಸ ಮಾಡಿರುವ ಕರಣ್, ಬೆಂಗಳೂರಿನಲ್ಲಿ ನಡೆದ ಚಿತ್ರಸಂತೆಯಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ. ಮಾತ್ರವಲ್ಲದೇ ಕುಡ್ಲಕಲಾಮೇಳದಲ್ಲೂ ಇವರ ಸಾಧನೆಗೆ ವೇದಿಕೆ ದೊರೆತಿತ್ತು.

ಚಿತ್ರಕಲೆ, 2ಡಿ, 3ಡಿ, ಪೆನ್ಸಿಲ್ ಸ್ಕೆಚ್, ಪೇಂಟಿಂಗ್, 3ಡಿ ಮಾಡಲಿಂಗ್ ನಲ್ಲಿ ಆಳವಾದ ಪ್ರತಿಭೆ ಹೊಂದಿರುವ ಕರಣ್, ಚಿತ್ರಕಲೆ ಹಾಗೂ ಚಿತ್ರವನ್ನೇ ಉಸಿರಾಗಿಸಿಕೊಂಡಿದ್ದಾರೆ.

 

ಹನುಮಾನ್ ಸ್ಟಿಕ್ಕರ್ ಬಗ್ಗೆ ಏನು ಹೇಳುತ್ತಾರೆ ಕರಣ್…..

ಭರತ್ ಹಾಗೂ ಪ್ರವೀಣ್ ಎಂಬ ಆಪ್ತ ಸ್ನೇಹಿತರ ಆಶಯಕ್ಕೆ ತಕ್ಕಂತೆ ನಮ್ಮೂರಿನಲ್ಲಿ ರಾರಾಜಿಸಲಿ ಎಂದು ಹನುಮಾನ್ ಚಿತ್ರವನ್ನು ರೂಪಿಸಿದೆ. ಗಣೇಶೋತ್ಸವಕ್ಕೆ ವಿಭಿನ್ನವಾಗಿರಲಿ ಎಂದುರೂಪಿಸಿದ ಈ ಚಿತ್ರ ಇಂದು ಎಲ್ಲೆಡೆ ರಾರಾಜಿಸುತ್ತಿದೆ ಎಂದರೆ, ಇದು ಕಲಾವಿದನೊಬ್ಬನ ಪ್ರತಿಭೆಗೆ ಸಂದ ಗೌರವ ಎಂದೇ ಭಾವಿಸುತ್ತೇನೆ. ನಾನು ರೂಪಿಸಿದ ಈ ಚಿತ್ರ ಇಷ್ಟರಮಟ್ಟಿಗೆ ಸೆನ್ಸೇಶನ್ಕ್ರಿಯೇಟ್ ಮಾಡಿ, ಟ್ರೆಂಡ್ ಆಗಿದೆ ಎಂದರೆ ನಿಜಕ್ಕೂ ಅತಿಹೆಚ್ಚು ಆನಂದ ಹಾಗೂ ಹೆಮ್ಮೆ ಪಡುತ್ತೇನೆ.

–ಕರಣ್ ಆಚಾರ್

 

ಪ್ರೋತ್ಸಾಹ ನೀಡಿ……

ಕರಣ್ ಆಚಾರ್ಯ ರೂಪಿಸಿರುವ ಈ ಹನುಮಾನ್ ಚಿತ್ರ ಇಂದು ಎಲ್ಲೆಡೆ ರಾರಾಜಿಸುತ್ತಿರುವಂತೆಯೇ ಇಂತಹ ಅದ್ಭುತ ಕಲಾವಿದನಿಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ನೀಡಬೇಕಿದೆ. ಬಜರಂಗ ದಳ,ಸಂಘ ಪರಿವಾರದ ಕಾರ್ಯಕರ್ತರು ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರ ನರನಾಡಿಗಳಲ್ಲಿ ಹಿಂದುತ್ವದ ವಿದ್ಯುತ್ ನ್ನು ಪ್ರವಹಿಸುತ್ತಿರುವ ಈ ಚಿತ್ರವನ್ನು ರೂಪಿಸಿದ ಕರಣ್ ಆಚಾರ್ಯರಿಗೆ ಇದೇ ಕ್ಷೇತ್ರದಲ್ಲಿ ಇನ್ನೂ ಹೆಚ್ಚು ಹೆಚ್ಚು ಬೆಳೆಯುವಂತೆ ಪ್ರೋತ್ಸಾಹಿಸಬೇಕಿದೆ. ಇದಕ್ಕಾಗಿ ಎಲ್ಲ ಸಂಘಟನೆಗಳು, ಚಿತ್ರರಂಗ ಮುಂದೆ ಬರಬೇಕಿದೆ.

 

ಕರಣ್ ಆಚಾರ್ಯ ಅವರನ್ನು ಅಭಿನಂದಿಸಲು ಇ-ಮೇಲ್ ಮಾಡಿ: karanacharya.kk@gmail.com

 

ಕರಣ್ ಆಚಾರ್ಯ ಪ್ರತಿಭೆಯಲ್ಲಿ ಮೂಡಿರುವ ಚಿತ್ರಗಳಿವು.

IMG-20160904-WA0007IMG-20160904-WA0032IMG-20160904-WA0033IMG-20160904-WA0012IMG-20160904-WA0034IMG-20160904-WA0031 IMG-20160904-WA0026

Share196Tweet123Send
Previous Post

ನಮೋ ಜ್ಞಾನರೂಪಂ, ಗಣೇಶಂ ನಮಸ್ತೆ.

Next Post

ಹಿಂದೂ, ಇಂದು, ಮುಂದು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ: ರಾಜನಾಥ ಸಿಂಗ್

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಹಿಂದೂ, ಇಂದು, ಮುಂದು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ: ರಾಜನಾಥ ಸಿಂಗ್

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ಶಿವಮೊಗ್ಗ | ಮೈಮೇಲೆ ಹರಿದ ಲಾರಿ | ಯುವಕ ಸ್ಥಳದಲ್ಲೇ ಸಾವು

ಶಿವಮೊಗ್ಗ | ಮೈಮೇಲೆ ಹರಿದ ಲಾರಿ | ಯುವಕ ಸ್ಥಳದಲ್ಲೇ ಸಾವು

January 12, 2026
ಗದಗ-ಧಾರವಾಡ ಪ್ಯಾಸೆಂಜರ್ ರೈಲು ಪುನಾರಂಭ? ಕೇಂದ್ರ ಸಚಿವ ಜೋಶಿ ಹೇಳಿದ್ದೇನು?

ಸಾಗರ ಮಾರಿಕಾಂಬಾ ಜಾತ್ರೆಗೆ ಯಶವಂತಪುರ-ತಾಳಗುಪ್ಪ 2 ಸ್ಪೆಷಲ್ ರೈಲುಗಳು | ಹೀಗಿದೆ ಡೀಟೇಲ್ಸ್

January 31, 2026
Deeksha Brahmavara | A Divine Synergy of Artistic Excellence and Intellectual Brilliance

Deeksha Brahmavara | A Divine Synergy of Artistic Excellence and Intellectual Brilliance

February 10, 2026
ರೈಲ್ಒನ್ ಸೂಪರ್ ಆ್ಯಪ್ | ರೈಲ್ವೆ ಸೇವೆಗಳೆಲ್ಲವೂ ಈಗ ಒಂದೇ ಕಡೆ | ಏನೆಲ್ಲಾ ಅನುಕೂಲಗಳಿವೆ?

ರೈಲ್ಒನ್ ಸೂಪರ್ ಆ್ಯಪ್ | ರೈಲ್ವೆ ಸೇವೆಗಳೆಲ್ಲವೂ ಈಗ ಒಂದೇ ಕಡೆ | ಏನೆಲ್ಲಾ ಅನುಕೂಲಗಳಿವೆ?

February 10, 2026
ಚಂದ್ರಯಾನ-4 ಮಿಷನ್‌ ಲ್ಯಾಂಡಿಂಗ್ ಸ್ಥಳ ನಿಗದಿ: ಇಸ್ರೋ

ಚಂದ್ರಯಾನ-4 ಮಿಷನ್‌ ಲ್ಯಾಂಡಿಂಗ್ ಸ್ಥಳ ನಿಗದಿ: ಇಸ್ರೋ

February 10, 2026
ಹಾರನಹಳ್ಳಿ ಗ್ರಾಮ ಪಂಚಾಯಿತಿ ನೂತನ ಕಟ್ಟಡ ಲೋಕಾರ್ಪಣೆ

ಹಾರನಹಳ್ಳಿ ಗ್ರಾಮ ಪಂಚಾಯಿತಿ ನೂತನ ಕಟ್ಟಡ ಲೋಕಾರ್ಪಣೆ

February 10, 2026
ಕೊಳಚೆ ಪ್ರದೇಶ ನಿವಾಸಿಗಳ ಹಕ್ಕು ರಕ್ಷಣೆ | ಅಧಿಕಾರಿಗಳೊಂದಿಗೆ ಶಾಸಕ ಚನ್ನಬಸಪ್ಪ ಸ್ಥಳ ಪರಿಶೀಲನೆ

ಕೊಳಚೆ ಪ್ರದೇಶ ನಿವಾಸಿಗಳ ಹಕ್ಕು ರಕ್ಷಣೆ | ಅಧಿಕಾರಿಗಳೊಂದಿಗೆ ಶಾಸಕ ಚನ್ನಬಸಪ್ಪ ಸ್ಥಳ ಪರಿಶೀಲನೆ

February 10, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL